ಅತೀ ಹೆಚ್ಚು ಹುಡುಕಿದ ಚಿತ್ರಗಳ ಪಟ್ಟಿ ಬಿಡುಗಡೆ, ಕೆಜಿಎಫ್ ಹಾಗೂ ಕಾಂತಾರಗೆ ಎಷ್ಟನೇ ಸ್ಥಾನ ಗೊತ್ತೇ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಿಷಬ್ ಶೆಟ್ಟಿ ಅವರ ಸಿನಿಮಾಗಳು ಮತ್ತೊಂದು ದಾಖಲೆ ಮಾಡಿ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಭಾರಿ ಗಮನ ಸೆಳೆದಿವೆ. ಆ ಎರಡು ಸಿನಿಮಾಗಳು ಯಾವ್ಯಾವು. ಈ ಎರಡು ಸಿನಿಮಾಗಳು ಯಾವ ರೀತಿಯಾದ ದಾಖಲೆ ಮಾಡಿವೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಕೋವಿಡ್ ಲಾಕ್ ಡೌನ್ ಸಂಕಷ್ಟದ ಹೊಡೆತದಿಂದಾಗಿ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಇಂಡಸ್ಟ್ರಿಗೂ ಸಹ ಭಾರಿ ಹೊಡೆತ ಬಿತ್ತು. ಅದ್ರಂತೆ ನಿಧಾನವಾಗಿ ಚಿತ್ರರಂಗ ಚೇತರಿಕೊಂಡು ವ್ಯವಹಾರ ಚಟುವಟಿಕೆಯಲ್ಲಿ ಕೋಟಿ ಕೋಟಿ ಲಾಭ ಮಾಡಿದ್ದು ಅಂದರೆ ಈ 2022 ವರ್ಷದಲ್ಲಿ ಅಂತೇಳಬಹುದು. ಹೌದು ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಕನ್ನಡ ಸಿನಿಮಾಗಳದ್ದೇ ಹವಾ.

ಕನ್ನಡ ಸಿನಿಮಾಗಳು ಬಾಲಿವುಡ್ ಸೇರಿದಂತೆ ಇನ್ನಿತರ ಭಾಷೆಯ ಎಲ್ಲಾ ಸಿನಿಮಾಗಳ ದಾಖಲೆ ಸೈಡ್ ಲೈನ್ ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸೌಂಡ್ ಮಾಡಿದವು. ಅದರಂತೆ ಗೂಗಲ್ ಅಲ್ಲಿ ಅತಿ ಹೆಚ್ಚು ಜನರು ನಮ್ಮ ಕನ್ನಡ ಭಾಷೆಯ ಈ ಎರಡು ಸಿನಿಮಾಗಳ ಬಗ್ಗೆ ಹುಡುಕಾಟ ನಡೆಸಿದ್ದಾರಂತೆ. ಗೂಗಲ್ ಅಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ ಸಿನಿಮಾ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕೆಜಿಎಫ್ ಭಾಗ-1 ರನ ನಂತರ ಪಾರ್ಟ್2ಗೆ ಭಾರಿ ನಿರೀಕ್ಷೆ ಇತ್ತು. ಅದರಂತೆ ಕೆಜಿಎಫ್2 ಸಿನಿಮಾ ರಿಲೀಸ್ ಆದ ನಂತರ ಪ್ರೇಕ್ಷಕರ ಮನಗೆದ್ದು ಬಾಕ್ಸ್ ಅಫೀಸ್ ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸಿತ್ತು.

ಇದಾದ ನಂತರ ಮತ್ತೊಂದು ಕನ್ನಡ ಸಿನಿಮಾ ಸಹ ಗೂಗಲ್ ಅಲ್ಲಿ ಸರ್ಚ್ ಆಗಿದೆ. ಅದು ಬೇರಾವುದು ಅಲ್ಲ ಅದೇ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ. ಹೌದು ಕಾಂತಾರ ಸಿನಿಮಾ ಗೂಗಲ್ ಅಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಕಾಂತಾರ ಸಿನಿಮಾಗೆ ರಿಲೀಸ್ ಗೂ ಮುನ್ನ ಯಾವುದೇ ನಿರೀಕ್ಷೆ ಕ್ರೇಜ಼್ ಇರಲಿಲ್ಲ. ಆದರೆ ರಿಲೀಸ್ ಆದ ನಂತರ ಕಾಂತಾರ ಸಿನಿಮಾದ ಕಾವು ಎಲ್ಲೆಡೆ ಭಾರಿ ಜೋರಾಗಿತ್ತು. ಇಂದಿಗೂ ಕೂಡ ಕಾಂತಾರ ಸಿನಿಮಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಎರಡು ತಿಂಗಳಲ್ಲಿ ಕಾಂತಾರ ಸಿನಿಮಾ ಭಾರತ ಮಾತ್ರ ಅಲ್ಲದೆ ಹೊರ ದೇಶಗಳಿಂದಾನೂ ಸಹ ಭಾರಿ ಜನಪ್ರಿಯತೆ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಐನೂರು ಕೋಟಿ ಕಲೆಕ್ಷನ್ ಗಡಿ ಮುಟ್ಟಿದೆ.

Leave a Reply

%d bloggers like this: