ಅರಿಯದ ವಯಸ್ಸಲ್ಲಿ ಬಾಲ್ಯ ವಿವಾಹವಾದ ಈ ಹೆಣ್ಣು ಮಗಳು ಇಂದು ಕನ್ನಡ ಕಿರುತೆರೆಯ ಜನಪ್ರಿಯ ನಟಿಯಾಗಿ ಮಿಂಚುತ್ತಿದ್ದಾರೆ.

ಅರಿಯದ ವಯಸ್ಸಲ್ಲಿ ಬಾಲ್ಯ ವಿವಾಹವಾದ ಈ ಹೆಣ್ಣು ಮಗಳು ಇಂದು ಕನ್ನಡ ಕಿರುತೆರೆಯ ಜನಪ್ರಿಯ ನಟಿಯಾಗಿ ಮಿಂಚುತ್ತಿದ್ದಾರೆ. ಹೌದು ಬಣ್ಣದ ಲೋಕ ಬಹಳ ಆಕರ್ಷಕವಾಗಿ ಬಣ್ಣ ಬಣ್ಣಗಳಿಂದ ಸುಂದರವಾಗಿ ಕಾಣುತ್ತದೆ. ಬಣ್ಣದಲ್ಲಿ ಕಲಾವಿದರು ಕೂಡ ಸುಂದರವಾಗಿಯೇ ಮಿಂಚುತ್ತಿರುತ್ತಾರೆ. ಆದರೆ ಅದೇ ಕಲಾವಿದರ ಬದುಕು ದುರಂತ ರೂಪದಲ್ಲಿರುತ್ತದೆ. ಇದು ಪ್ರೇಕ್ಷಕ ಯಾರಿಗೂ ಕಾಣುವುದಿಲ್ಲ. ಅಂತಹ ಕಾಣದ ಕತ್ತಲೆಯ ಕಡು ಕಷ್ಟದಲ್ಲಿ ಬದುಕು ಕಟ್ಟಿಕೊಂಡವರು ನಟಿ ಚಂದ್ರಕಲಾ. ಇವರನ್ನ ಚಂದ್ರಕಲಾ ಅನ್ನುವುದಕ್ಕಿಂತ ಅಜ್ಜಮ್ಮ ಅಂದಾಕ್ಷಣ ಥಟ್ಟನೆ ನೆನಪಿಗೆ ಬರುತ್ತಾರೆ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಪುಟ್ಟ ಗೌರಿ ಮದುವೆ ಎಂಬ ಧಾರಾವಾಹಿಯಲ್ಲಿ ಮನೆಯ ಹಿರಿ ಯಜಮಾನಿಯಾಗಿ ಅಜ್ಜಮ್ಮ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದ ನಟಿ ಚಂದ್ರಕಲಾ ಅವರ ಅಭಿನಯಕ್ಕೆ ಕಿರುತೆರೆ ಪ್ರೇಕ್ಷಕರು ಮನ ಸೋತಿದ್ದರು.

ಅದು ಎಷ್ಟರ ಮಟ್ಟಿಗೆ ಇವರ ಅಭಿನಯ ಇತ್ತು ಅಂದರೆ ಇವರನ್ನ ನಟಿ ಚಂದ್ರಕಲಾ ಎಂದು ಗುರುತಿಸುವ ಬದಲು ಪುಟ್ಟಗೌರಿ ಸೀರಿಯಲ್ ಅಜ್ಜಮ್ಮ ಎಂದೇ ಗುರುತಿಸುತ್ತಿದ್ದರು. ಅಷ್ಟರ ಮಟ್ಟಗೆ ಚಂದ್ರಕಲಾ ಅವರ ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ನಾಡಿನ ಮನೆ ಮನೆಗಳಲ್ಲಿ ಚಂದ್ರಕಲಾ ಅವರು ಅಜ್ಜಮ್ಮನಾಗಿಯೇ ಅಪಾರ ಪ್ರಸಿದ್ದತೆ ಪಡೆದವರು. ಅಷ್ಟೇ ಅಲ್ಲದೆ ಕಮಲಿ ಧಾರಾವಾಹಿಯಲ್ಲಿ ಅಮ್ಮಮ್ಮ ಪಾತ್ರದ ಮೂಲಕವೂ ಕೂಡ ಭಾರಿ ಜನಪ್ರಿಯತೆ ಪಡೆದಿದ್ದಾರೆ ನಟಿ ಚಂದ್ರಕಲಾ. ತೆರೆ ಮೇಲೆ ಫುಲ್ ರಗಡ್ ಆಗಿ ನೋಡಲು ಗಾಂಭೀರ್ಯ ವ್ಯಕ್ತಿತ್ವವನ್ನೊಳಗೊಂಡು ಎಲ್ಲರ ಹುಟ್ಟಡಗಿಸುವ ನಟಿ ಚಂದ್ರಕಲಾ ಅವರು ಬದುಕು ಭಾರಿ ಕಷ್ಟಕರವಾಗಿಯೇ ಇತ್ತು ಎಂದು ಹೇಳಬಹುದು. ನಟಿ ಚಂದ್ರಕಲಾ ಅವರು ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಸಿದ್ದರು.

ಈ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಕೆಲವು ಕಹಿ ಘಟನೆಗಳನ್ನ ಹಂಚಿಕೊಂಡಿದ್ದರು. ನಟಿ ಚಂದ್ರ ಕಲಾ ಅವರೇ ಹೇಳಿಕೊಂಡಿರುವಂತೆ ಇವರು ಬಾಲ್ಯದಲ್ಲಿ ಅಂದರೆ ಹತ್ತು ವರ್ಷ ವಯಸ್ಸು ಇರುವ ಸಂಧರ್ಭದಲ್ಲಿ ಒಂದು ದಿನ ಹೀಗೆ ಸ್ಕರ್ಟ್ ಧರಿಸಿ ಮಲಗಿರುವಾಗ ಇವರ ಸ್ವಂತ ತಂದೆಯೇ ಇವರ ಮೇಲೆ ಕೆಟ್ಟದಾಗಿ ನಡೆದುಕೊಂಡಿದ್ದರಂತೆ. ಆಗ ಚಂದ್ರಕಲಾ ಅವರಿಗೆ ತುಂಬಾ ಗಾಬರಿ ಭಯ ಆತಂಕ ಒಟ್ಟೊಟ್ಟಿಗೆ ಅನುಭವಿಸಿದ್ದರಂತೆ. ಆದರೆ ಚಂದ್ರಕಲಾ ಅವರು ತಮಗಾದ ಈ ಕಹಿ ವಿಚಾರವನ್ನು ತನ್ನ ತಾಯಿಗೂ ಕೂಡ ಹೇಳದೆ ಹಾಗೇ ತನ್ನ ನೋವನ್ನ ತಾವೇ ಉಳಿಸಿಕೊಂಡಿದ್ದರಂತೆ. ಆ ಸನ್ನಿವೇಶದಲ್ಲಿ ಅಕ್ಕ ಒಂದೆಡೆ ಮಲಗಿದರೆ ಮತ್ತೊಂದೆಡೆ ಇಬ್ಬರು ಸೋದರರು ನಿದ್ದೆ ಮಾಡುತ್ತಿದ್ದರಂತೆ. ಇದಾದ ಬಳಿಕ ಕೆಲವು ಅನಿವಾರ್ಯ ಕಾರಣಗಳಿಂದ ತನ್ನ ಹದಿಮೂರನೇ ವಯಸ್ಸಿಗೇನೆ ಮದುವೆ ಆಗಬೇಕಾಯಿತ್ತಂತೆ. ಇಂದು ಅವರ ಪತಿಯ ಸ್ಪೂರ್ತಿ ಪ್ರೋತ್ಸಾಹದಿಂದಾನೇ ನಟಿ ಚಂದ್ರಕಲಾ ಅವರು ಒಂದು ಸಾಧನೆ ಮಾಡುವ ಹಂತಕ್ಕೆ ತಲುಪಿದ್ದಾರಂತೆ.