ಅರಳಿ ಮರ ಎಂದಿಗೂ ಬಾಡುವುದಿಲ್ಲಾ ಯಾಕೆ ಗೊತ್ತಾ? ಸೀತಾದೇವಿ ನೀಡಿದ 4 ಶಾಪಗಳೇನು ಗೊತ್ತಾ? ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ

ನಿಸರ್ಗ ಒಂದು ರೀತಿಯಾಗಿ ಮನುಷ್ಯನಿಗೆ ಬಹುದೊಡ್ಡ ಶಿಕ್ಷಕ. ಮನುಕುಲಕ್ಕೆ ಕಾಲಕ್ಕೆ ತಕ್ಕಂತೆ ನಿರ್ದಿಷ್ಟ ಸಮಯಕ್ಕೆ ತಕ್ಕ ಪಾಠವನ್ನು ಕಲಿಸೇ ಕಲಿಸುತ್ತದೆ. ಕೆಲವೊಮ್ಮೆ ಮನುಷ್ಯ ಮಾಡುವಂತಹ ಅನಾಚಾರ ಅಪಚಾರ ಗಳಿಂದಾಗಿ ನಿಸರ್ಗವು ಮನುಕುಲದ ಮೇಲೆ ಮುನಿಸಿಕೊಂಡು ಅದರದ್ದೇ ಆದಂತಹ ವ್ಯತಿರಿಕ್ತ ಬೀರುತ್ತದೆ. ಬಹಳ ಹಿಂದಿನ ಕಾಲದಲ್ಲಿ ಈ ನೋವಿಗೆ ಅನ್ಯಾಯಕ್ಕೆ ಒಳಗಾದವರು ತಮಗೆ ಅನ್ಯಾಯ ಮೋಸ ಮಾಡಿದವರಿಗೆ ಅದು ಮಹಿಳೆಯರಾಗಲಿ ಅಥವಾ ಪುರುಷರಾಗಲಿ ತಮ್ಮ ಅಸಹಾಯಕತೆಯಿಂದ ತನ್ನ ಅಂತರಾಳದ ನೋವನ್ನು ಶಾಪ ಹಾಕುವ ಮೂಲಕ ರೋಧಿಸುತ್ತಾರೆ. ಅದೇ ರೀತಿಯಾಗಿ ರಾಮಾಯಣದಲ್ಲಿ ಸೀತಾಮಾತೆ ಕೂಡ ಶಾಪ ನೀಡುತ್ತಾರೆ. ಈ ಶಾಪದ ಪರಿಣಾಮ ಅರಳಿ ಮರ ಸರ್ವ ಕಾಲಕ್ಕೂ ಸದಾ ಹಚ್ಚ ಹಸರಿನಿಂದ. ಸಾಮಾನ್ಯವಾಗಿ ವಸಂತಕಾಲ ಬಂದಾಗ ಮರಗಳಲ್ಲಿ ಹಸಿರೆಲೆಗಳು ಚಿಗುರೊಡೆಯುತ್ತವೆ. ಜೊತೆಗೆ ಇತರೆ ಕಾಲದಲ್ಲಿ ಬಾಡುತ್ತವೆ.

ಇದು ಪ್ರಕೃತಿ ನಿಯಮ ಕೂಡ ಹೌದು. ಆದರೆ ವಿಶೇಷ ಅಂದರೆ ಈ ಅರಳಿ ಮಾತ್ರ ಯಾವ ಕಾಲಮಾನದಲ್ಲಿಯೂ ಕೂಡ ಬಾಡದೇ ಸರ್ವ ಕಾಲದಲ್ಲಿಯೂ ಕೂಡ ಸದಾ ಹಚ್ಚ ಹಸಿರಿನಿಂದ ಕೂಡಿರುತ್ತದೆ.ಇದಕ್ಕೆ ರಾಮಾಯಣದ ಇತಿಹಾಸವೊಂದಿದೆಯಂತೆ. ರಾಮಾಯಣದಲ್ಲಿ ದಶರಥ ಮಹಾರಾಜರು ಕೈಗೆ ಕೊಟ್ಟಂತಹ ವರದಂತೆ ಶ್ರೀರಾಮನು 14 ವರ್ಷಗಳ ವನವಾಸ ಅನುಭವಿಸಬೇಕಾಗುತ್ತವೆ. ಕೈಕೆಯ ಕುತಂತ್ರದಿಂದ ರಾಮ ಮಾತ್ರ ಅಲ್ಲ ಜೊತೆಯಲ್ಲಿ ಸೀತಾ ಮಾತೆ ಮತ್ತು ಲಕ್ಷ್ಮಣ ಕೂಡ ಹೋಗುತ್ತಾರೆ. ಇತ್ತ ಅವಸಾನ ಕಾಲದಲ್ಲಿ ದಶರಥ ಮಹಾರಾಜರು ಕಣ್ಣು ಮುಚ್ಚುವಾಗ ತಮ್ಮ ಮಕ್ಕಳನ್ನು ನೋಡದೆ ಸಾವನ್ನಪ್ಪುತ್ತಾರೆ.

ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯು ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ದಶರಥ ನಿಧನರಾದ ಸುದ್ದಿ ತಿಳಿದು ಸೀತಾದೇವಿಯನ್ನು ಫಾಲ್ಗುಣ ನದಿಯಲ್ಲಿ ಕೂರಿಸಿ ಪಿತೃ ಪಿಂಡ ಕಾರ್ಯಕ್ಕೆ ಬೇಕಾದಂತಹ ಹಣ್ಣುಹಂಪಲುಗಳನ್ನು ತರಲು ರಾಮ ಮತ್ತು ಲಕ್ಷ್ಮಣ ಇಬ್ಬರೂ ಕೂಡ ಕಾಡಿನತ್ತ ಹೊರಡುತ್ತಾರೆ. ಇದೇ ಸಂದರ್ಭದಲ್ಲಿ ಸೀತಾದೇವಿಗೆ ಪಾಲ್ಗುಣ ನದಿಯಿಂದ ಕೈಯೊಂದು ಮೇಲೆ ಬರುವಂತೆ ಕಾಣಿಸುತ್ತದೆ. ಇದರಿಂದ ಸೀತಾದೇವಿಯು ಕೂಡ ಒಮ್ಮೆಲೆ ದಿಗ್ಭ್ರಮೆಗೊಳ್ಳುತ್ತಾಳೆ. ಜೊತೆಗೆ ಸೀತಾದೇವಿಗೆ ಅಶರೀರ ವಾಣಿಯೊಂದು ಕೇಳಿಸುತ್ತದೆ. ಆ ಅಶೀರವಾಣಿಯು ದಶರಥ ಮಹಾರಾಜನದ್ದಾಗಿರುತ್ತದೆ. ದಶರಥ ಮಹಾರಾಜನ ಧ್ವನಿಯು ತಾಯಿ ಸೀತಾದೇವಿ ನನಗೆ ಹಸಿವಾಗುತ್ತಿದೆ. ಏನಾದರು ನೀಡು ಎಂದಾಗ.

ತಾವೇ ಸಂಕಷ್ಟದಲ್ಲಿರುವಾಗ ಅವರಿಗೇನೂ ನೀಡಾಳು. ಆ ಸಂಕಷ್ಟದ ಸಂಧರ್ಭದಲ್ಲಿ ಸೀತೆಗೆ ಯಾವ ರೀತಿಯಾಗಿ ಪ್ರತಿಕ್ರಿಯಿಸಬೇಕು ಎಂಬುದು ತಿಳಿಯದೇ ಅಲ್ಲೇ ಬಂಡೆಯ ಸಮೀಪ ಇದ್ದಂತಹ ಮಣ್ಣನ್ನು ತೆಗೆದುಕೊಂಡ ಮೂರು ಉಂಡೆಗಳಾಗಿ ಆ ಕೈ ಮೇಲೆ ಇಡುತ್ತಾಳೆ ಸೀತಾದೇವಿ. ಈ ಮಣ್ಣಿನ ಉಂಡೆಯ ಆಹಾರವನ್ನು ಸೇವಿಸಿ ದಂತಹ ದಶರಥ ಮಹಾರಾಜನು ಸಂತುಷ್ಟನಾಗುತ್ತಾನೆ ಬಳಿಕ ದಶರಥ ಮಹಾರಾಜರ ಅಶರೀರ ವಾಣಿಯು ನಿಂತು ಪಾಲ್ಗುಣಿ ನದಿಯಿಂದ ಕಾಣಿಸಿಕೊಂಡಂತಹ ಕೈ ಮಾಯವಾಗುತ್ತದೆ. ಇತ್ತ ಹಣ್ಣುಹಂಪಲುಗಳನ್ನು ತರಲು ಹೋಗಿದ್ದ ರಾಮ- ಲಕ್ಷ್ಮಣರು ಹಿಂದಿರುಗುತ್ತಾರೆ. ಸೀತಾ ದೇವಿ ನಡೆದ ಈ ಎಲ್ಲಾ ವಿಚಾರಗಳನ್ನು ತಿಳಿಸುತ್ತಾರೆ. ಆದರೆ ರಾಮ- ಲಕ್ಷ್ಮಣರು ಇದನ್ನು ನಂಬುವುದಿಲ್ಲ.

ಆ ಸಂದರ್ಭದಲ್ಲಿ ಸೀತಾದೇವಿಯ ಪಾಲ್ಗುಣಿ ನದಿ ತುಳಸಿ ಗಿಡ ಬ್ರಾಹ್ಮಣ ಹಸು,ಅರಳಿ ಮರವನ್ನ ಸಾಕ್ಷಿ ಹೇಳುವಂತೆ ಕೇಳುತ್ತಾಳೆ. ಅರಳಿಮರ ಬಿಟ್ಟರೇ ಮಿಕ್ಕ ಯಾವುದು ಕೂಡ ಸಾಕ್ಷಿ ಹೇಳುವುದಿಲ್ಲ. ಸಾಕ್ಷಿ ಹೇಳಿದ ಅರಳಿ ಮರಕ್ಕೆ ಸೀತಾ ದೇವಿಯು ವರವನ್ನ ನೀಡುತ್ತಾಳೆ. ನೀನು ಯಾವದೇ ಋತಗಳಲ್ಲಿ ಬಾಡದೇ ಸರ್ವಕಾಲಕ್ಕೂ ಹಚ್ಚ ಹಸಿರಾಗಿ ಕಂಗೊಳಿಸುತ್ತಾ ದೈವ ವೃಕ್ಷವಾಗಿ ಇರುತ್ತೀಯ ಎಂದು ಸೀತಾದೇವಿಯು ಅರಳಿ ಮರಕ್ಕೆ ವರವನ್ನು ನೀಡುತ್ತಾನೆ. ಉಳಿದಂತೆ ಬ್ರಾಹ್ಮಣನಿಗೆ ನೀನು ಇದೇ ತೀರ್ಥ ಕ್ಷೇತ್ರದಲ್ಲಿದ್ದುಕೊಂಡು ಬರುವ ಯಾತ್ರಿಗಳ ಪೀಡಿಸಿ ಅವರಿಂದ ಬರುವ ಆದಾಯದಿಂದ ಬದುಕು ನಡೆಸು. ಪವಿತ್ರ ಗಿಡವಾಗಿರುವ ತುಳಸಿಗಿಡವೇ ನೀನು ಎಲ್ಲೆಂದರಲ್ಲಿ ಜನ್ಮತಾಳು, ಪಾಲ್ಗುಣ ನದಿಯೇ ಮಳೆಗಾಲದಲ್ಲಿಯೂ ಕೂಡ ನೀನು ಬರಿದಾಗಿಯೇ ಇರು ಎಂದು ಶಾಪ ನೀಡುತ್ತಾಳೆ.