ಅಪ್ಪು ಸತ್ತಿರುವ ವಿಚಾರ ಡೇವಿಡ್ ವಾರ್ನರ್ ಗೆ ತಡವಾಗಿ ತಿಳಿಯಿತು! ವಾರ್ನರ್ ಕೂಡಲೇ ಮಾಡಿದ್ದೇನು ಗೊತ್ತಾ

ಚಂದನವನದ ಧೃವತಾರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಈಗಾಗಲೇ ಒಂದೂವರೆ ತಿಂಗಳುಗಳು ಕಳೆದಿವೆ. ಹೀಗಿದ್ದರೂ ಸಹ ಪುನೀತ್ ರಾಜ್ ಕುಮಾರ್ ನಮ್ಮಿಂದ ದೂರವಾಗಿದ್ದಾರೆ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನ ಕಳೆದುಕೊಂಡ ಚಿತ್ರರಂಗ ಸಂಪೂರ್ಣ ನೀರವ ಮೌನಕ್ಕೆ ಜಾರಿದೆ. ಅವರ ಮಾನವೀಯ ಗುಣ ಮತ್ತು ಅವರು ಮಾಡಿದಂತಹ ಸಾಮಾಜಿಕ ಕಾರ್ಯಗಳು ಇಡೀ ಭಾರತೀಯ ಚಿತ್ರರಂಗಕ್ಕೆ ಅಚ್ಚರಿಯನ್ನುಂಟು ಮಾಡಿದೆ. ಏಕೆಂದರೆ ಅಪ್ಪು ಅವರು ತಾವು ಮಾಡುತ್ತಿದ್ದ ಅಷ್ಟೆಲ್ಲಾ ಸಮಾಜ ಸೇವೆಗಳನ್ನು ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ. ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ನೀಡಿದ ಅವರ ಕೊಡುಗೆ ಅಪಾರ.

ಹಾಗಾಗಿ ಅವರ ಸವಿ ನೆನಪಿನಾರ್ಥ ಕಳೆದ ತಿಂಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ ನಮನ ಕಾರ್ಯಕ್ರಮ ಆಯೋಜನೆ ಮಾಡಿ ಅಪ್ಪು ಅವರಿಗೆ ಗೌರವ ನಮನ ಸಲ್ಲಿಸಿತ್ತು. ಈ ಕಾರ್ಯಕ್ರಮಕ್ಕೆ ಇಡೀ ದಕ್ಷಿಣ ಭಾರತದ ಖ್ಯಾತ ಆಗಮಿಸಿ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಪೂರ್ಣ ನಮನ ಸಲ್ಲಿಸಿದರು. ಅದರಂತೆ ಇತ್ತೀಚೆಗೆ ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಕೂಡ ಸಹ ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷವಾಗಿ ಗೌರವ ನಮನ ಸಲ್ಲಿಸಿದ್ದಾರೆ.

ಹೌದು ಡೇವೀಡ್ ವಾರ್ನರ್ ಅವರು ಪುನೀತ್ ರಾಜ್ ಕುಮಾರೇ ನಟಿಸಿ ಸೂಪರ್ ಹಿಟ್ ಆಗಿದ್ದ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೇ ಹಾಡಿನಲ್ಲಿ ಅಪ್ಪು ಕಾಣಿಸಿಕೊಂಡ ಹಾಗೇ ಶೈಲಿಯಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಕೂಡ ತಮ್ಮ ಮುಖವನ್ನು ಅಪ್ಪು ಅವರಂತೆ ಮಾರ್ಫ್ ಮಾಡಿಕೊಂಡು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಶೇರ್ ಮಾಡಿರುವ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಕಂಡಿದೆ. ಅಪ್ಪು ಅವರ ಬಗ್ಗೆ ಡೇವಿಡ್ ವಾರ್ನರ್ ವ್ಯಕ್ತಪಡಿಸಿದ ಅಭಿಮಾನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.