ಅಪ್ಪು ಸತ್ತಾಗ ನೋಡಲು ಬರದೇ ಈಗ ತನ್ನ ಸ್ವಾರ್ಥದ ಲಾಭಕ್ಕಾಗಿ ಬಂದ ಈ ದೊಡ್ಡ ಮನುಷ್ಯ

ಟಾಲಿವುಡ್ ಸ್ಟಾರ್ ನಿರ್ದೇಶಕನಿಗೆ ಅಪ್ಪು ಅಭಿಮಾನಿಗಳಿಂದ ತರಾಟೆ..! ಆ ಸ್ಟಾರ್ ನಿರ್ದೇಶಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ತೋರಿದ ಅಗೌರವೇ ಎಂತಾದ್ದು ಹಾಗಿದ್ದರೆ ಎಂಬುದನ್ನ ತಿಳಿಯುವುದಾದರೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿ ತಿಂಗಳು ಕಳೆದಿದೆ. ನಾಡಿನ ಮೂಲೆ ಮೂಲೆಗಳಿಂದ ಅವರ ಸಮಾಧಿಯ ದರ್ಶಕ್ಕೆ ಇಂದಿಗೂ ಕೂಡ ನೂರಾರು ಸಂಖ್ಯೆಯ ಅಭಿಮಾನಿಗಳು ಕುಟುಂಬ ಸಮೇತರಾಗಿ ಬರುತ್ತಿದ್ದಾರೆ. ಅಪ್ಪು ಅವರ ಅಂತಿಮ ದರ್ಶನಕ್ಕೆ ಸರಿ ಸುಮಾರು ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಬಂದು ತಮ್ಮ ನೆಚ್ಚಿನ ನಟನನ್ನು ನೋಡಿದ್ದಾರೆ.ಇಷ್ಟೊಂದು ಪ್ರಮಾಣದ ಅಭಿಮಾನಿಗಳು ಯಾವ ಸ್ಟಾರ್ ನಟನ ಅಂತಿಮ ದರ್ಶನದಲ್ಲಿ ಭಾಗವಹಿಸಿರಲಿಲ್ಲ. ಮಹಾತ್ಮ ಗಾಂಧೀಜಿ ಅವರ ಅಂತಿಮ ದರ್ಶನದಲ್ಲಿಯೂ ಈ ಪರಿ ಪ್ರಮಾಣದ ಜನ ಸೇರಿರಲಿಲ್ಲ.

ಇದೊಂದು ದಾಖಲೆಯೇ ಸರಿ ಎಂದು ವರದಿಗಳಾಗಿವೆ. ಅಂದು ಅಪ್ಪು ಅವರ ಅಂತಿಮ ದರ್ಶನಕ್ಕೆ ದಕ್ಷಿಣ ಭಾರತದ ಬಹುತೇಕ ದಿಗ್ಗಜ ಸ್ಟಾರ್ ನಟ-ನಟಿಯರು ಬಂದಿದ್ದರು.ಅವರ ಕುಟುಂಬಕ್ಕೆ ಸಾಂತ್ವಾನದ ಮಾತುಗಳನ್ನಾಡಿ ಹೋಗಿದ್ದರು. ಆದರೆ ಕರ್ನಾಟಕ ಮೂಲದವರೇ ಆದ ಟಾಲಿವುಡ್ ಸ್ಟಾರ್ ಡೈರೆಕ್ಟರ್ ಆಗಿರುವ ರಾಜಮೌಳಿ ಮಾತ್ರ ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ‌. ಆದರೆ ಇತ್ತೀಚೆಗೆ ರಾಜಮೌಳಿ ತಮ್ಮ ನಿರ್ದೇಶನದ ಆರ್‌.ಆರ್.ಆರ್.ಚಿತ್ರದ ಪ್ರಮೋಶನ್ ಕೆಲಸಗಳಿಗೆ ಬೆಂಗಳೂರಿಗೆ ಬಂದಿದ್ದರು.ಇದರ ನಡುವೆಯೇ ಅಪ್ಪು ಅವರ ಮನೆಗೆ ಭೇಟಿ ಕೊಟ್ಟು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಮಾತಾಡಿದ್ದಾರೆ.

ಇನ್ನು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅಪ್ಪು ಅವರು ನನ್ನನ್ನು ಅವರ ಕುಟುಂಬದಲ್ಲಿ ಒಬ್ಬರನನ್ನಾಗಿ ನೋಡುತ್ತಿದ್ದರು ಎಂದು ಅವರೊಂದಿಗೆ ಇದ್ದಂತಹ ಭಾಂಧವ್ಯವನ್ನು ಹಂಚಿಕೊಂಡರು. ರಾಜಮೌಳಿ ಅವರ ಈ ಪ್ರತಿಕ್ರಿಯೆಗೆ ಸೋಶಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕವಾಗಿಯೂ ಅಪ್ಪು ಅವರ ಅಂತಿಮ ದರ್ಶನಕ್ಕೆ ಬರಲು ನಿಮಗೆ ಸಮಯವಿರಲಿಲ್ಲ. ಇದೀಗ ನಿಮ್ಮ ಸ್ವಂತ ಕೆಲಸದ ಮೇಲೆ ಬಂದು ಅವರ ಕುಟುಂಬದ ಬಗ್ಗೆ ಮಾತಾಡಿದರೆ ನಿಮ್ಮ ಮೇಲೆ ಗೌರವ ಬರುವುದಿಲ್ಲ ಎಂದು ನೆಟ್ಟಿಗರು ಖಾರವಾಗಿ ಕಮೆಂಟ್ ಪ್ರತಿಕ್ರಿಯಿಸಿದ್ದಾರೆ.

Leave a Reply

%d bloggers like this: