ಅಪ್ಪು ಸಮಸ್ತ ಆಸ್ತಿಯಲ್ಲಿ ಊಹಿಸದ ಟ್ವಿಸ್ಟ್! ಸಮಸ್ತ ಆಸ್ತಿ ಯಾರಿಗೆ ಸಿಗಲಿದೆ ಗೊತ್ತಾ

ಚಂದನವನದ ಭಾಗ್ಯವಂತ ಅಪ್ಪು ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಪ್ಪತ್ತು ದಿನಗಳ ಸನಿಹವಾಗುತ್ತಿದ್ದರು ಕೂಡ ನಾಡಿನ ಮನೆ ಮನೆಗಳಲ್ಲಿ ಶೋಕದ ಛಾಯೆ ಮಾತ್ರ ಮಾಯೆಯಾಗಿಲ್ಲ. ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ಅವರು ಒಬ್ಬ ನಟ,ಗಾಯಕ,ಉತ್ತಮ ಡ್ಯಾನ್ಸರ್,ಫೈಟರ್ ಅನಗತ್ಯ ಯಾವುದೇ ವಿಚಾರಗಳಿಗೆ ತಳುಕುಹಾಕಿಕೊಂಡು ವಿವಾದ ಅಂಟಿಸಿಕೊಳ್ಳದ ಸುಸಂಸ್ಕೃತ ನಟ ಅಂತ ಅಂದುಕೊಂಡಿದ್ದವರಿಗೆ ಅವರು ಕಾಲವಾದ ನಂತರ ಅವರು ಸಮಾಜಕ್ಕಾಗಿ ಮಾಡಿದ ಮಹತ್ಕಾರ್ಯಗಳನ್ನ ಕಂಡು ಇಡೀ ದೇಶವೇ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ.ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬೀದಿ ಬದಿಯಲ್ಲಿ ಭಿಕ್ಷೆ ಬೇಡುವ ವ್ಯಕ್ತಿ ಕೂಡ ಪುನೀತ್ ಅವರನ್ನ ನೆನೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕಾಲವಾದ ನಂತರ ಎಂತ ಹ ಆರೋಗ್ಯವಂತ ಮನುಷ್ಯರಿಗೂ ಕೂಡ ಆತಂಕ ಎದುರಾಗಿದ್ದು ಮಾತ್ರ ಸತ್ಯ. ಯಾಕಂದ್ರೆ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿ ಸದಾ ಫಿಟ್ ನೆಸ್ ಕಾಪಾಡಿಕೊಳ್ಳುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಅವರಿಗೇನೇ ದಿಢೀರ್ ಹೃದಯಾಘಾತವಾಗಿದ್ದು ಮಾತ್ರ ದುರಂತವೇ ಸರಿ.

ತಮ್ಮ ನಟನೆ ಮತ್ತು ಉತ್ತಮ ವ್ಯಕ್ತಿತ್ವ ನಡವಳಿಕೆಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಅಪ್ಪು ಅವರು ಅನೇಕ ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೆ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಅಪ್ಪು ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ನಾಡಿಗೆ ನಾಡೇ ಕ್ಷಣಕಾಲ ದಿಗ್ಬ್ರಮೆ ಅನುಭವಿಸಿದ್ದು ಮಾತ್ರ ಸುಳ್ಳಲ್ಲ.ಅಪ್ಪು ಅವರ ಅಂತಿಮ ದರ್ಶನಕ್ಕೆ ಬರೋಬ್ಬರಿ ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಮಹಾತ್ಮ ಗಾಂಧೀಜಿ ಅವರ ಅಂತಿಮ ದರ್ಶನದ ಬಳಿಕ ಇದೇ ಮೊದಲ ಬಾರಿಗೆ ಈ ಬಾರಿ ಪ್ರಮಾಣದ ಜನರು ಅಂತಿಮ ದರ್ಶನಕ್ಕೆ ಸಾಕ್ಷಿಯಾಗಿದ್ದಾರಂತೆ.ನಟ ಪುನೀತ್ ರಾಜ್ ಕುಮಾರ್ ಅವರು ಹಣಕ್ಕಿಂತ ಹೆಚ್ಚಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ಅದಕ್ಕೆ ಸಾಕ್ಷಿಯಾಗಿ ಅವರ ನಿಧನದ ಸುದ್ದಿ ಕೇಳಿ ನಾಡಿನ ಪ್ರತಿ ಮನೆ ಮನೆಗಳಲ್ಲಿ ಕಣ್ಣೀರಾಕಿದ್ದಾಗಿದೆ.

ಇನ್ನು ಅಪ್ಪು ಅವರ ಬಳಿ ಸರಿ ಸುಮಾರು ಇನ್ನೂರಕ್ಕೂ ಅಧಿಕ ಕೋಟಿ ಮೌಲ್ಯ ಆಸ್ತಿಯಿದ್ದು ಅದರ ವಾರಸ್ಥಾರರಾಗಿ ಇದೀಗ ಮುಂದೆ ಯಾರು ಇರಲಿದ್ದಾರೆ ಎಂಬುದು ಒಂದಷ್ಟು ಮಂದಿಗಳ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರವಾಗಿ ಇದೀಗ ಅವರ ಪತ್ನಿ ಅಶ್ವಿನಿ ಮತ್ತು ಅವರ ಮಕ್ಕಳಾದ ದೃತಿ ಮತ್ತು ವಂದಿತಾ ಹಾಗೂ ಅಣ್ಣನಾದ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅದರ ಜವಾಬ್ದಾರಿ ಸಿಗಲಿದೆ ಎಂದು ತಿಳಿದು ಬಂದಿದೆ.ಇನ್ನು ಅಪ್ಪು ಅವರು ನೋಡಿಕೊಳ್ಳುತ್ತಿದ್ದ ಮೈಸೂರಿನ ಶಕ್ತಿಧಾಮ ಆಶ್ರಮಕ್ಕೆ ಈಗಾಗಲೇ ಅದರ ನಿರ್ವಹಣೆಗೆ ತೊಂದರೆ ಆಗಬಾರದು ಎಂದು ಎಂಟು ಕೋಟಿ ರೂ.ಹಣವನ್ನು ನಿಶ್ಚಿತ ಠೇವಣೆಗೆ ಇರಿಸಲಾಗಿದೆಯಂತೆ.ಇನ್ನು ಇತ್ತೀಚೆಗೆ ಶ್ರೀ ಮುರುಳಿ ಅವರು ಹೇಳಿದಂತೆ ಅಪ್ಪು ಅವರ ಪತ್ನಿ ಅಶ್ವಿನಿ ಅವರು ವಿಧ್ಯಾವಂತೆ ಆಗಿದ್ದು ಪಿ.ಆರ್.ಕೆ.ಪ್ರೊಡಕ್ಷನ್ ಸಂಸ್ಥೆಯನ್ನು ಇನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಾರೆ ಅವರಿಗೆ ಆ ಸಾಮರ್ಥ್ಯವಿದೆ ಎಂದು ತಿಳಿಸಿದ್ದಾರೆ.

Leave a Reply

%d bloggers like this: