ಅಪ್ಪು ಪತ್ನಿ ಅಶ್ವಿನಿಗಾಗಿ ಪ್ರೀತಿಯಿಂದ ಕಟ್ಟಿಸಿದ ಮನೆ ಹೇಗಿದೆ ಗೊತ್ತಾ? ನೋಡಿ ಒಮ್ಮೆ ಒಳಗಡೆ ಹೇಗಿದೆ ಅಂತ

ಸ್ಯಾಂಡಲ್ ವುಡ್ ಧೃವತಾರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಒಂದು ತಿಂಗಳ ಸಮೀಪವಾಗುತ್ತಿದೆ. ಆದರೂ ಸಹ ಪುನೀತ್ ರಾಜ್ ಕುಮಾರ್ ನಮ್ಮೊಂದಿಗಿಲ್ಲ ಎಂಬುದನ್ನ ನಂಬಲು ಸಾಧ್ಯವಾಗುತ್ತಿಲ್ಲ. ನಟ ಪುನೀತ್ ರಾಜ್ ಕುಮಾರ್ ಅವರ ಹೊಸದೊಂದು ಸಿನಿಮಾ ಸಟ್ಟೇರಿತು ಅಂದರೆ ಸರಿ ಸುಮಾರು ಸಾವಿರ ಜನರಿಗೆ ಉದ್ಯೋಗ ಸಿಗುತಿತ್ತು. ಇದೀಗ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ.ಅಪ್ಪು ಅವರು ಕೇವಲ ಸಿನಿಮಾ ನಟನಾಗಿರದೇ ಉದ್ಯಮಿಯಾಗಿಯೂ ಕೂಡ ತೊಡಗಿಸಿಕೊಂಡಿದ್ದರು. ಸಿನಿಮಾವೊಂದಕ್ಕೆ ಐದರಿಂದ ಆರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅಪ್ಪು,ಇತರೆ ಆದಾಯದ ಮೂಲಗಳನ್ನ ಹೊಂದಿದ್ದರು. ಅವರ ಸಂಪಾದನೆಗೆ ತಕ್ಕ ಹಾಗೆ ಸಾಮಾಜಿಕ ಕಾರ್ಯಗಳಿಗೂ ಕೂಡ ಕೋಟ್ಯಾಂತರ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಅಷ್ಟೇ ಅಲ್ಲದೇ ಯಾರಿಗೂ ತಿಳಿಯದಂತೆ ಹಲವಾರು ಸೇವಾಕಾರ್ಯಗಳನ್ನು ಮಾಡಿರುವ ಪುನೀತ್ ಅವರು ಎಲ್ಲಿಯೂ ಕೂಡ ತಾನು ಮಾಡಿದಂತಹ ಸಹಾಯಗಳನ್ನು ಎಡಗೈಯಲ್ಲಿ ಕೊಟ್ಟಿದ್ದು,ಬಲಗೈಗೆ ಗೊತ್ತಾಗಬಾರದು ಎಂಬಂತೆ ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದರು.ಶರಣರ ಗುಣ ಮರಣದಲ್ಲಿ ಅನ್ನುವ ಹಾಗೇ ನಟ ಪುನೀತ್ ರಾಜ್ ಕುಮಾರ್ ಅವರು ನಿಧನವಾದ ನಂತರ ಅವರು ಮಾಡಿದಂತಹ ಮಹಾತ್ಕಾರ್ಯಗಳ ಬಗ್ಗೆ ಗೊತ್ತಾಗುತ್ತಿದೆ. ಸಮಾಜಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕುಟುಂಬದ ವಿಷಯದಲ್ಲಿಯೂ ಕೂಡ ತಮ್ಮ ಜವಾಬ್ದಾರಿಯನ್ನ ಸೂಕ್ತವಾಗಿ ನಿರ್ವಹಿಸಿದ್ದಾರೆ. ಪತ್ನಿ ಅಶ್ವಿನಿ ಮತ್ತು ಮಕ್ಕಳಾದ ದೃತಿ ಮತ್ತು ವಂದಿತಾ ಅವರಿಗೆ ಯಾವುದೇ ರೀತಿಯ ಕೊರತೆ ಮಾಡಿಲ್ಲ. ಇನ್ನು ಅಪ್ಪು ಅವರು ತಾವಿದ್ದಂತಹ ಮನೆಯನ್ನೇ ಹೊಸದಾಗಿ ನವೀಕರಣ ಮಾಡುವುದರ ಜೊತೆಗೆ ನಾಲ್ಕು ಅಂತಸ್ತಿನ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ.

ಇದರ ಮೌಲ್ಯ ಬರೋಬ್ಬರಿ ಐವತ್ತು ಕೋಟಿ ಎಂದು ಅಂದಾಜಿಸಲಾಗಿದೆ. ಸದಾಶಿವನಗರದಲ್ಲಿರುವ ಈ ಅದ್ಭುತವಾದ ಮನೆಯನ್ನು ಅಂದು ರಾಜ್ ಕುಮಾರ್ ಅವರು ಹನ್ನೊಂದು ಲಕ಼್ಷಕ್ಕೆ ಖರೀದಿ ಮಾಡಿದ್ದರಂತೆ. ಇದೇ ಮನೆಯಲ್ಲಿ ಅವಿಭಕ್ತ ಕುಟುಂಬವಾಗಿದ್ದ ರಾಜ್ ಕುಟುಂಬ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಮದುವೆ ಮಾಡಿ ಎಲ್ಲರಿಗೂ ಪ್ರತ್ಯೇಕವಾಗಿ ಅವರವರ ಹೆಸರಿಗೆ ಆಸ್ತಿಯನ್ನು ವಿಭಜನೆ ಮಾಡಿದರು. ಶಿವರಾಜ್ ಕುಮಾರ್ ಅವರು ಸದಾಶಿವನಗರ ಮನೆಯಿಂದ ಹೊರ ಬಂದು ನಾಗಾವರ ದಲ್ಲಿ ಪ್ರತ್ಯೇಕವಾಗಿ ಮನೆ ನಿರ್ಮಾಣ ಮಾಡಿಕೊಂಡರೆ,ಅಪ್ಪು ತಾವಿದ್ದ ಅದೇ ಜಾಗದಲ್ಲಿ ತಮಗೆ ಮತ್ತು ರಾಘಣ್ಣ ಅವರಿಗೆ ಅವರೇ ಸ್ವಂತವಾಗಿ ದುಡಿದ ಹಣದಲ್ಲಿ ನಾಲ್ಕು ಅಂತಸ್ತಿನ ಮನೆಯನ್ನು ಕಟ್ಟಿಸಿಕೊಡುತ್ತಾರೆ. ಈ ಮನೆಯ ಒಳಾಂಗಣ ವಿನ್ಯಾಸವು ತಮ್ಮ ಪತ್ನಿ ಅಶ್ವಿನಿ ಅವರ ಇಚ್ಚೆಯಂತೆ ಮಾಡಿಸಿದ್ದಾರಂತೆ.

Leave a Reply

%d bloggers like this: