ಅಪ್ಪು ಪತ್ನಿ ಅಶ್ವಿನಿ ಡಿಢೀರ್ ಅಂತ ಈಗ ವಿದೇಶಕ್ಕೆ ಹೋರಾಡಲಿದ್ದಾರೆ, ನಿಜಕ್ಕೂ ಆಗಿದ್ದೇನು ಗೊತ್ತಾ

ಕನ್ನಡ ಚಿತ್ರರಂಗದ ಧೃವತಾರೆ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಒಂದು ತಿಂಗಳು ತುಂಬಿದೆ. ಆದರು ಕೂಡ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ನೆನಪು ನಾಡಿನಾದ್ಯಂತ ಹಾಗೇ ಕಾಡುತ್ತಿದೆ. ಅವರು ಯಾರಿಗೂ ತಿಳಿಸದೇ ಮಾಡಿದ ಸಾಮಾಜಿಕ ಕಾರ್ಯಗಳು ಒಂದಾದ ಒಂದರ ನಂತರ ಬೆಳಕಿಗೆ ಬರುತ್ತಿಲೇ ಇವೆ.ಪುನೀತ್ ರಾಜ್ ಕುಮಾರ್ ಅವರ ಹನ್ನೊಂದನೆ ದಿನದ ಹಾಲು ತುಪ್ಪ ಕಾರ್ಯ ಮುಗಿದ ಬಳಿಕ ಕುಟುಂಬದ ಸಲಹೆ ಸೂಚನೆಯ ಮೇರೆಗೆ ಪುತ್ರಿ ಧೃತಿ ಅವರು ತಮ್ಮ ವಿಧ್ಯಾಭ್ಯಾಸದ ಉದ್ದೇಶದಿಂದ ವಾಸ್ತವ ಅರಿತು ಧೃತಿಗೆಡದೆ ಸ್ಥಿತಿ ಪ್ರಜ್ಞೆ ಕಾಪಾಡಿಕೊಂಡು ಅಮೇರಿಕಾಕ್ಕೆ ತೆರಳಿದರು. ಅಪ್ಪು ಅವರಿಗೆ ತಮ್ಮಿಬ್ಬರ ಹೆಣ್ಣು ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಅವರ ವಿಧ್ಯಾಭ್ಯಾಸದ ಬಗ್ಗೆ ಅಪಾರ ಕನಸು ಹೊಂದಿದ್ದರು.

ಅವರ ಆಸೆಯಂತೆ ಚೆನ್ನಾಗಿ ಓದಿ ಉತ್ತಮ ಕೆಲಸ ಮಾಡಬೇಕು ಎಂದು ಧೃತಿ ನ್ಯೂಯಾರ್ಕ್ ತೆರಳಿದರು. ತಮ್ಮ ತಂದೆಯ ನಿಧನದ ಸುದ್ದಿ ಕೇಳುತ್ತಿದ್ದಂತೆ ವಿದೇಶದಲ್ಲಿದ್ದ ಧೃತಿ ತಂದೆಯ ಇನ್ನಿಲ್ಲ ಎಂಬ ಸತ್ಯವನ್ನು ಊಹಿಸಿಕೊಳ್ಳಲಾಗದೆ ಅಮೇರಿಕಾದಿಂದ ಬೆಂಗಳೂರು ಏರ್ ಪೋರ್ಟ್ ತಲುಪುವವರೆಗೆ ಕಣ್ಣೀರಾಕುತ್ತಲೆ ಬಂದರಂತೆ.ಅಮೇರಿಕಾದ ಪ್ರತಿಷ್ಟಿತ ಯೂನಿವರ್ಸಿಟಿಯಲ್ಲಿ ಸ್ಕಾಲರ್ ಶಿಪ್ ಪಡೆದು ವಿಧ್ಯಾಭ್ಯಾಸ ಮಾಡುತ್ತಿರುವ ಧೃತಿ ತನ್ನ ತಂದೆಯ ಅಚ್ಚು ಮೆಚ್ಚಿನ ಮಗಳಾಗಿದ್ದರು. ತನ್ನ ತಂದೆ ನಿಧನರಾದ ಬಳಿಕ ಧೃತಿ ಪುನಃ ಅಮೇರಿಕಾಗೆ ಹೋಗುವುದಿಲ್ಲ.ಇನ್ನು ಮುಂದೆ ತಾಯಿಯ ಬಳಿಯೇ ಇರುತ್ತಾರೆ ಎಂದು ಹೇಳಲಾಗುತ್ತಿತ್ತು.ಆದರೆಹನ್ನೊಂದು ದಿನದ ಹಾಲುತುಪ್ಪ ಕಾರ್ಯಕ್ರಮ ನಂತರ ಕುಟುಂಬದವರ ಸಲಹೆಯ ಮೇರೆಗೆ ಮತ್ತೆ ವಿಧ್ಯಾಭ್ಯಾಸಕ್ಕಾಗಿ ಅಮೇರಿಕಾ ಹೋಗಿದ್ದಾರೆ.

ಸದ್ಯ ಅಮೇರಿಕಾದಲ್ಲಿರುವ ಧೃತಿ ಇಂದಿಗೂ ಕೂಡ ತನ್ನ ತಂದೆಯನ್ನು ನೆನೆದು ಕಣ್ಣೀರಾಕುತ್ತಿದ್ದಾರಂತೆ.ತಾಯಿ ಅಶ್ವಿನಿ ಅವರಿಗೆ ಕರೆ ಮಾಡಿ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಧೃತಿ ಗೆ ತಾಯಿ ಅಶ್ವಿನಿ ಅವರು ಸಮಾಧಾನ ಮಾಡಿ ನೀನು ನಿನ್ನ ತಂದೆಯ ಕನಸನ್ನು ಈಡೇರಿಸಬೇಕು. ನಾನು ನಿನಗೋಸ್ಕರ ನಿನ್ನ ವಿಧ್ಯಾಭ್ಯಾಸಕ್ಕಾಗಿ ನಿನ್ನ ಜೊತೆ ಅಮೇರಿಕಾದಲ್ಲಿ ನೆಲೆಸಲು ಸಿದ್ದ. ನಿನ್ನ ತಂದೆಗೆ ನಿನ್ನ ಎಜಕೇಶನ್ ಬಗ್ಗೆ ಅಪಾರ ಕನಸು ಇತ್ತು. ಆ ಕನಸನ್ನು ನೀನು ಸಾಕಾರಗೊಳಿಸಬೇಕು ಎಂದು ತಿಳಿ ಹೇಳಿ ಧೃತಿ ಅವರನ್ನು ಸಂತೈಸುತ್ತಿದ್ದಾರಂತೆ.