ಅಪ್ಪು ಪತ್ನಿ ಅಶ್ವಿನಿ ಅವರ ತಂದೆ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಚಂದನವನದ ಮುತ್ತುರಾಜನ ಮುತ್ತು ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಎರಡು ವಾರಗಳೇ ಕಳೆದಿವೆ.ಆಗಿದ್ದರು ಕೂಡ ನಾಡಿನ ಜನರಲ್ಲಿ ಅಪ್ಪು ಇಲ್ಲ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿನ್ನೆ ತಾನೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ರಾಜ್ ಕುಮಾರ್ ಸವಿನೆನಪಿನಾರ್ಥ ಪುನೀತ ನಮನ ಕಾರ್ಯಕ್ರಮ ಆಯೋಜನೆ ಮಾಡಿತ್ತು.ಅದಲ್ಲದೆ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಯನ್ನು ಕೂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಣೆ ಮಾಡಿದರು.ಈ ಪುನೀತ ನಮನ ಕಾರ್ಯಕ್ರಮಕ್ಕೆ ಕನ್ನಡ,ತಮಿಳು,ತೆಲುಗು ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಅನೇಕ ದಿಗ್ಗಜ ನಟ-ನಟಿಯರು ಆಗಮಿಸಿದ್ದರು.ಶಿವಣ್ಣ,ರಾಘಣ್ಣ ಅವರು ವೇದಿಕೆಯ ಮಾತನಾಡುತ್ತಾ ಅಪ್ಪು ಅವರನ್ನ ನೆನೆದು ಭಾವುಕರಾಗಿ ಕಣ್ಣೀರಾಕಿದರು.ಇದೆಲ್ಲದಲ ನಡುವೆ ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಸೇವೆಗಳು ಎಲ್ಲರಿಗೂ ಮಾದರಿಯಾಯಿತು.ಸಚಿವರಾದ ಅಶೋಕ್ ಮಾತನಾಡಿ ಸಾಮಾಜಿಕ ಸೇವೆಯ ರಾಯಭಾರಿ ಅಂದರೆ ಅದು ಒನ್ ಅಂಡ್ ಓನ್ಲಿ ಅಪ್ಪು ಅವರು.

ನಮಗೆಲ್ಲರಿಗೂ ಅವರು ಮಾದರಿಯಾಗಿದ್ದಾರೆ ಎಂದು ನುಡಿದರು.ಇನ್ನು ಇದೀಗ ಬಹುತೇಕರಿಗೆ ಕುತೂಹಲ ಮೂಡಿಸಿರುವ ವಿಚಾರ ಅಂದರೆ ಅಪ್ಪು ಅವರು ಮಾಡಿಕೊಂಡು ಬಂದಿದ್ದ ಶಾಲೆಯ ಮಕ್ಕಳ ವಿಧ್ಯಾಭ್ಯಾಸ,ಶಕ್ತಿಧಾಮ ಆಶ್ರಮ,ಗೋಶಾಲೆ ಸೇರಿದಂತೆ ಅನೇಕ ಸಾಮಾಜಿಕ ಸೇವೆಗಳನ್ನು ಯಾರು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬುದಕ್ಕೆ ಉತ್ತರ ಅಂದರೆ ಅಪ್ಪು ಮತ್ತು ಶಿವಣ್ಣ,ರಾಘಣ್ಣ ಕುಟುಂಬದವರೇ ಅಪ್ಪು ಅವರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ತಿಳಿದು ಬಂದಿದೆ.ಇನ್ನು ಹೊಸ ಕಲಾವಿದರಿಗೆ ಅವಕಾಶ ಕೊಟ್ಟು ಅವರನ್ನ ಪ್ರೋತ್ಸಾಹಿಸಲು ಪಿ.ಆರ್ .ಕೆ ಪ್ರೊಡಕ್ಷನ್ ಸಂಸ್ಥೆಯನ್ನ ಕೂಡ ಅಪ್ಪು ಅವರು ಆರಂಭಿಸಿದ್ದರು.ಈ ಸಂಸ್ಥೆಯ ಜವಾಬ್ದಾರಿಯನ್ನ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬರುತ್ತಿದೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಬಗ್ಗೆ ತಿಳಿಯುವುದಾದರೆ ಅವರು ಅಶ್ವಿನಿ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಭಾಗಮನೆಯವರು.

ಇವರ ತಂದೆಯ ಹೆಸರು ರೇವನಾಥ್.ಇವರು ಬಿಬಿಎಂಪಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಇವರ ತಾಯಿ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ಡಿಂಪಲ್ ಮತ್ತು ವಿನಯ್ ಎಂಬ ಸೋದರ, ಸೋದರಿ ಇದ್ದಾರೆ.ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹ.ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಸಮ್ಮತಿ ಸೂಚಿಸಿತ್ತು.ಡಿಸೆಂಬರ್ ಒಂದು 1999 ರಲ್ಲಿ ಅಪ್ಪು ಮತ್ತು ಅಶ್ವಿನಿ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು.ಒಟ್ಟಾರೆಯಾಗಿ ಅಶ್ವಿನಿ ಅವರು ಪುನೀತ್ ರಾಜ್ ಕುಮಾರ್ ಅವರ ಬೆನ್ನೆಲುಬಾಗಿ ನಿಂತು ಅವರ ಯಶಸ್ಸಿಗೆ ಕಾರಣಕರ್ತರಾಗಿದ್ದರು ಅಂದರೆ ತಪ್ಪಾಗಲಾರದು.