ಅಪ್ಪು ನಡೆಸುತ್ತಿದ್ದ ಆಶ್ರಮ ಮುನ್ನಡಿಸಲು ಬಂದ ನಟ ವಿಶಾಲ್ ಗೆ ಬೆಂಡತ್ತಿದ ವಿಜಯಲಕ್ಷ್ಮಿ

ತಮಿಳಿನ ಖ್ಯಾತ ನಟ ವಿಶಾಲ್ ತಮಗೆ ಮಾಡಿದ ನಂಬಿಕೆ ದ್ರೋಹ ನೆನೆದು ನಟಿ ವಿಜಯಲಕ್ಷ್ಮಿ ಅವರನ್ನ ತೆಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಅವರು ಅವರು ನಟ ವಿಶಾಲ್ ಗೆ ಬೈದಿರುವ ವೀಡಿಯೋ ಭಾರಿ ವೈರಲ್ ಆಗಿದೆ.ಅಷ್ಟಕ್ಕೂ ನಟ ವಿಶಾಲ್ ನಟಿ ವಿಜಯಲಕ್ಷ್ಮಿ ಅವರಿಗೆ ಮಾಡಿರುವ ನಂಬಿಕೆ ದ್ರೋಹ ಏನು ಗೊತ್ತಾ.ಇತ್ತೀಚೆಗೆ ಕೆಲವು ತಿಂಗಳಿಂದೀಚೆಗೆ ನಟಿ ವಿಜಯಲಕ್ಶ್ಮಿ ಆರ್ಥಿಕ ಮತ್ತು ತಮ್ಮ ತಾಯಿ ಹಾಗೂ ಅಕ್ಕನ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಕೊಡಿಸಲಾಗದೆ ಸಂಕಷ್ಟದಿಂದ ದಕ್ಷಿಣ ಭಾರತದ ಎಲ್ಲಾ ನಟ-ನಟಿಯರ ಬಳಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ಕೈಲಾದಷ್ಟು ವಿಜಯಲಕ್ಷ್ಮಿ ಅವರಿಗೆ ಸಹಾಯ ಹಸ್ತ ನೀಡಿದ್ದಾರೆ. ಆದರೆ ಕೆಲವು ನಟರು ನಟಿ ವಿಜಯಲಕ್ಷ್ಮಿ ಅವರಿಗೆ ಯಾವುದೇ ರೀತಿಯ ಸಹಕಾರ ನೀಡಿರಲಿಲ್ಲ‌.ಇದರಿಂದ ನಟಿ ವಿಜಯಲಕ್ಷ್ಮಿ ಒಂದಷ್ಟು ಅಸಮಾಧಾನಗೊಂಡು ನಟರ ಮೇಲೆ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದರು. ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೊ ಮಾಡಿ ತಮ್ಮ ಅಸಹಾಯಕತೆಯ ಪರಿಸ್ಥಿತಿಯನ್ನು ಹೇಳಿಕೊಂಡು ತಮ್ಮ ಅಳಲನ್ನ ತೋಡಿಕೊಳ್ಳುತ್ತಿರುತ್ತಾರೆ.

ಅಂತೆಯೇ ನಟಿ ವಿಜಯಲಕ್ಷ್ಮಿ ತಮ್ಮ ಸಂಕಷ್ಟದ ಸಂಧರ್ಭದಲ್ಲಿ ಸಹಾಯ ಮಾಡುತ್ತೇನೆ ಎಂದು ಮಾಡದೇ ನಡುನೀರಿನಲ್ಲಿ ಕೈ ಬಿಟ್ಟ ತಮಿಳು ನಟ ವಿಶಾಲ್ ಅವರ ಬಗ್ಗೆ ಬೈದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಟ ವಿಶಾಲ್ ಅವರು ಪುನೀತ್ ರಾಜ್ ಕುಮಾರ್ ಅಗಲಿದ ನಂತರ ತುಂಬಾ ಭಾವುಕರಾಗಿ ತಮ್ಮ ಸಿನಿಮಾವೊಂದರ ಕಾರ್ಯಕ್ರಮದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿ,ಪುನೀತ್ ಅವರು ನನ್ನ ಸೋದರ.ಅವರು ಮಾಡುತ್ತಿದ್ದ ಸಮಾಜ ಸೇವೆ ನಿಜಕ್ಕೂ ಕೂಡ ಮಹಾತ್ಕಾರ್ಯ. ಪುನೀತ್ ಅವರು ರಿಯಲ್ ಲೈಫ್ ನಲ್ಲಿಯೂ ಕೂಡ ಹೀರೋ.ಅವರು 1800 ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದ ವಿಚಾರ ಕೇಳಿ ನನಗೆ ನಿಜಕ್ಕೂ ಕಣ್ತುಂಬಿ ಬಂತು.ಏಕೆಂದರೆ ಅವರು ಮಾಡುತ್ತಿದ್ದ ಸೇವೆಗಳನ್ನು ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ. ನಾವು ಸಹಾಯ ಮಾಡಬೇಕಾದ್ದು ಯಾವ ರೀತಿಯಾಗಿರಬೇಕು ಎಂಬುದನ್ನ ಅಪ್ಪು ಅವರನ್ನ ನೋಡಿ ಕಲಿಯಬೇಕು.ನನಗೆ ಅವರ ಕುಟುಂಬ ಒಪ್ಪಿಗೆ ಸೂಚಿಸಿದರೆ ಆ 1800 ಮಕ್ಕಳ ವಿಧ್ಯಾಭ್ಯಾಸವನ್ನು ನಾನು ನೋಡಿ ಕೊಳ್ಳುತ್ತೇನೆ.ಇದು ಪ್ರಚಾರಕ್ಕೆ ಹೇಳುತ್ತಿರುವ ಮಾತಲ್ಲ.ನನ್ನ ಮನಸ್ಸಿನಿಂದ ಹೇಳುತ್ತಿರುವ ಮಾತು ಎಂದು ಭಾವುಕರಾಗಿ ನುಡಿದಿದ್ದರು. ನಟ ವಿಶಾಲ್ ಅವರ ಭಾವನೆಗೆ ನಾಡಿನಾದ್ಯಂತ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಯಿತು.

ಇತ್ತೀಚೆಗೆ ನಟ ವಿಶಾಲ್ ಅವರು ಗಿಡವೊಂದನ್ನು ನೆಟ್ಟಿ ಆ ಗಿಡಕ್ಕೆ ಪುನೀತ್ ಎಂದು ಹೆಸರಿಟ್ಟಿದ್ದರು.ಒಟ್ಟಾರೆಯಾಗಿ ಕನ್ನಡದ ಧೃವತಾರೆ ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಸೇವೆಗೆ ಎಲ್ಲೆಡೆ ಅಪಾರ ಗೌರವ ಮನ್ನಣೆ ದೊರೆಯಿತು.ಅದರಲ್ಲಿಯೂ ತಮಿಳು ಮತ್ತು ತೆಲುಗಿನ ಅನೇಕ ಕಿರುತೆರೆ ರಿಯಾಲಿಟಿ ಶೋ ಗಳಲ್ಲಿ ಅಪ್ಪು ಅವರ ಬಗ್ಗೆ ಅವರ ಫೋಟೋ ಮತ್ತು ವೀಡಿಯೋಗಳು ಪ್ರದರ್ಶನ ಮಾಡಿ ಅಪ್ಪು ಅವರನ್ನು ಸ್ಮರಿಸುತ್ತಿದ್ದಾರೆ.ಇದರ ನಡುವೆ ವಿಶಾಲ್ ಮೇಲೆ ನಟಿ ವಿಜಯಲಕ್ಷ್ಮಿ ಆರೋಪವೊಂದನ್ನ ಮಾಡುತ್ತಿದ್ದಾರೆ. ನಟ ವಿಶಾಲ್ ಇಂದು ಪುನೀತ್ ಅವರು ಮಾಡುತ್ತಿದ್ದ ಸೇವೆಯನ್ನ ಮುಂದುವರಿಸುವುದಾಗಿ ಹೇಳುತ್ತಿದ್ದಾರೆ.ಬಹಳ ಹಿಂದೆ ಈ ವ್ಯಕ್ತಿ ನನ್ನ ಅಕ್ಕನನ್ನ ಆಸ್ಪತ್ರೆಗೆ ಸೇರಿಸಿದ್ದಾಗ ಇದೇ ವಿಶಾಲ್ ನನಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ತದ ನಂತರ ಫೋನ್ ಸ್ವಿಚ್ ಆಫ್ ಮಾಡಿದ್ದರು.ಆಗ ನಾನು ನನ್ನ ಅಕ್ಕನನ್ನ ವಾಪಸ್ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಕೊಂಡು ಕರೆದುಕೊಂಡು ಬರಬೇಕಾಯಿತು.ನಾನು ಕನ್ನಡಿಗಳು ಎಂಬ ಕಾರಣಕ್ಕೆ ಅಂದು ವಿಶಾಲ್ ನನಗೆ ಸಹಾಯ ಮಾಡಲಿಲ್ಲ ಎಂದು ನಟ ವಿಶಾಲ್ ಅವರಿಂದ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.

Leave a Reply

%d bloggers like this: