ಅಪ್ಪು ಕೋಟ್ಯಧಿಪತಿ ಆಗಿದ್ದರು ತನ್ನ ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದ್ದು ಗೊತ್ತಾ? ನೋಡಿ ಒಮ್ಮೆ

ಚಂದನವನದ ಇತ್ತೀಚಿನ ತಲೆಮಾರಿನಲ್ಲಿ ಕೌಟುಂಬಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಅಂದರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ತಮ್ಮ ಮೊದಲ ನಾಯಕ ನಟನೆಯ ಅಪ್ಪು ಚಿತ್ರದ ಮೂಲಕ ನಾಡಿನಾದ್ಯಂತ ಅಭಿಮಾನಿಗಳ ಮನದಲ್ಲಿ ಅಪ್ಪು ಎಂದೇ ಹೆಸರು ಪಡೆದುಕೊಂಡರು ಪುನೀತ್ ರಾಜ್ ಕುಮಾರ್. ತಮ್ಮ ಡ್ಯಾನ್ಸ್,ಫೈಟ್,ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ ಅಪ್ಪು ತಮ್ಮ ಚಿತ್ರಗಳಲ್ಲಿ ಸಾಮಾಜಿಕ ಸಂದೇಶಗಳನ್ನ ನೀಡುವಂತಹ ಒಂದಷ್ಟು ವಿಚಾರಗಳನ್ನು ಸೇರಿಸಿಕೊಳ್ಳುತ್ತಿದ್ದರು. ಅಪ್ಪು ಅವರು ನಟಿಸಿದ ಬಹುತೇಕ ಸಿನಿಮಾಗಳು ಕುಟುಂಬದವರೆಲ್ಲರು ಕೂತು ನೋಡಬಹುದಾದ ಚಿತ್ರಗಳೇ ಆಗಿವೆ. ಅವರ ಯಾವುದೇ ಸಿನಿಮಾಗಳಲ್ಲಿ ಅನಗತ್ಯ ಎರಡರ್ಥ,ನಟಿಯ ಮೈ ಪ್ರದರ್ಶನದಂತಹುದಕ್ಕೆ ಅವಕಾಶ ನೀಡದೆ ಸಿನಿಮಾ ಅಂದರೆ ಹೀಗೆ ಇರಬೇಕೂ ಕ್ಲಾಸಿಕ್ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಾಣಬಹುದು ಎಂದು ಅಪ್ಪು ತೋರಿಸಿಕೊಟ್ಟಿದ್ದಾರೆ.

ಅದಕ್ಕೆ ಉತ್ತಮ ಉದಾಹರಣೆ ಅಂದರೆ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದ ಮಿಲನ ಚಿತ್ರ.ಈ ಮಿಲನ ಸಿನಿಮಾ ಬರೋಬ್ಫರಿ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿದೆ. ಇನ್ನು ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾ ಮಾತ್ರವಲ್ಲದೆ ಅನೇಕ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ಸರಿ ಸುಮಾರು ಎರಡು ಸಾವಿರ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಹಣ ಕಾಸು ಕಡಿಮೆ ಏನಿಲ್ಲ. ಕೋಟ್ಯಾಧಿಪತಿ ಆಗಿರುವ ಅಪ್ಪು ಅವರು ತಮ್ಮ ಮಕ್ಕಳನ್ನು ಯಾವುದೇ ಐ ಟೆಕ್ ಶಾಲೆಯಲ್ಲಿ ಓದಿಸುವುದಕ್ಕೆ ತೊಂದರೆ ಇರಲಿಲ್ಲ.ಆದರೆ ಅಪ್ಪು ಅವರು ತಮ್ಮ ಮಕ್ಕಳನ್ನ ತಾವು ಓದಿದಂತಹ ಶಾಲೆಯಲ್ಲಿಯೇ ಓದಿಸಿದ್ದಾರೆ. ಹೆಚ್ಚು ಓದದ ಪುನೀತ್ ರಾಜ್ ಕುಮಾರ್ ಅವರು ನಟನೆಗೆ ರಾಷ್ಟ್ರ ಪ್ರಶಸ್ತಿ ವಿಜೇತರಾದರು. ಬೆಟ್ಟದ ಹೂವು ಚಿತ್ರದಲ್ಲಿ ರಾಮು ಪಾತ್ರದ ನಟನೆಗೆ ಅಪ್ಪು ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು.

ಆರು ತಿಂಗಳ ಮಗುವಿರುವಾಗಲೇ ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಅಪ್ಪು ಚಲಿಸುವ ಮೋಡಗಳು,ಎರಡು ನಕ್ಷತ್ರಗಳು, ಭಾಗ್ಯವಂತ,ಭಕ್ತ ಪ್ರಹ್ಲಾದ ಸೇರಿದಂತೆ ಬಾಲ ನಟನಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರು ನಾಯಕ ನಟರಾಗಿ ಸಿನಿಮಾ ರಂಗಕ್ಕೆ ಬಂದ ಮೇಲು ಕೂಡ ತಮ್ಮ ಚಿತ್ರಗಳಲ್ಲಿ ಕಥೆಗೆ ಪ್ರಾಮುಖ್ಯ ನೀಡುತ್ತಿದ್ದರು. ಅವರ ನಟನೆಯ ಅಪ್ಪು, ಅಭಿ, ಆಕಾಶ್, ಮಿಲನ,ಮೌರ್ಯ,ವಂಶಿ,ಪರಮಾತ್ಮ, ಪೃಥ್ವಿ,ರಾಜ ಕುಮಾರ,ಇತ್ತೀಚೆಗೆ ತೆರೆಕಂಡ ಯುವರತ್ನ ಎಲ್ಲಾ ಸಿನಿಮಾ ಕೂಡ ಸಾಮಾಜಿಕ ಮೌಲ್ಯವನ್ನ ಸಾರುವಂತಹ ಕಥೆಯನ್ನಾಧರಿಸಿತ್ತು. ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಸಿನಿಮಾಗಳು ಪುಟ್ಟ ಮಕ್ಕಳಿಂದ ಹಿಡಿದ ವಯಸ್ಸಾದವರಿಗೂ ಕೂಡ ಅಚ್ಚು ಮೆಚ್ಚಾಗಿತ್ತು.ಅದಕ್ಕಾಗಿಯೇ ಅಪ್ಪು ಅವರನ್ನ ಕಂಡರೆ ಇಂದಿಗೂ ಕೂಡ ಮಕ್ಕಳು,ವಯಸ್ಕರು,ವೃದ್ದರು ನೆನೆದು ಕಣ್ಣೀರಾಕುತ್ತಿದ್ದಾರೆ.

Leave a Reply

%d bloggers like this: