ಅಪ್ಪು ಕೊನೆಯ ಚಿತ್ರ ನೋಡಿ ಮನಸೋತ ಪ್ರೇಕ್ಷಕರು, ಗಂಧದ ಗುಡಿ ಚಿತ್ರ ಹೇಗಿದೆ ಗೊತ್ತೇ

ಇಂದು ಅಕ್ಟೋಬರ್ 28 ರಾಜ್ಯಾದ್ಯಂತ ಪುನೀತ್ ರಾಜ್ ಕುಮಾರ ಕನಸಿನ ಮಹತ್ವಾಕಾಂಕ್ಷೆ ಸಿನಿಮಾ ಆಗಿದ್ದ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಅಮೋಘವರ್ಷ ಅವರ ನಿರ್ದೇಶನದಲ್ಲಿ ಪಿ.ಆರ್.ಕೆ ಸಂಸ್ಥೆಯಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಗಂಧದಗುಡಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಗಂಧದಗುಡಿ ಸಿನಿಮಾದಲ್ಲಿ ನಮ್ಮ ನಾಡಿನ ಪರಿಸರ, ಅರಣ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲವನ್ನ ತೋರಿಸಲಾಗಿದೆ. ನಮ್ಮ ಕರುನಾಡಿನಲ್ಲಿ ಇರುವ ನೈಸರ್ಗಿಕ ಸವಿಯನ್ನ ಸವಿಯಲು ಪುನೀತ್ ರಾಜ್ ಕುಮಾರ್ ಅವರು ನಿರ್ದೇಶಕ ಅಮೋಘವರ್ಷ ಅವರೊಟ್ಟಿಗೆ ನಾಡಿನುದ್ದಕ್ಕೂ ಪ್ರಯಾಣ ಮಾಡಿದ್ದಾರೆ. ಸಿನಿ ಪ್ರೇಕ್ಷಕರಿಗೆ ಇದು ಕೇವಲ ಸಿನಿಮಾ ಆಗಿಲ್ಲದೇ ಇದೊಂದು ಅನುಭೂತಿ ನೀಡುತ್ತದೆ.

ನಮ್ಮ ನಾಡಿನ ಕಾಡು-ಮೇಡು, ಪ್ರಾಣಿ ಪಕ್ಷಿಗಳನ್ನ ಉಳಿಸಿ ಪರಿಸರವನ್ನ ಸಂರಕ್ಷಣೆ ಮಾಡಬೇಕು ಎಂಬ ಒಂದು ಸಾಮಾಜಿಕ ಸಂದೇಶವನ್ನ ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಮಾಡಬೇಕು. ನದಿ ನೀರಿನ ತೊರೆಗಳಲ್ಲಿ ಪ್ಲಾಸ್ಟಿಕ್ ಬಿಸಾಡಿದರೆ ನದಿ ನೀರಿನ ತಳಭಾಗದಲ್ಲಿ ವಾಸಿಸುವ ಜಲಚರಗಳಿಗೆ ಹೇಗೆಲ್ಲಾ ತೊಂದರೆ ಹಾನಿ ಆಗುತ್ತದೆ ಅನ್ನೋದನ್ನ ಬಹಳ ಸೂಕ್ಷ್ಮವಾಗಿ ಗಂಧದಗುಡಿ ಸಿನಿಮಾದಲ್ಲಿ ತೋರಿಸಲಾಗಿದೆ. ಪವರ್ ಸ್ಟಾರ್ ಆಗಿ ಕಾಣಿಸಿಕೊಳ್ಳದೇ ಅಪ್ಪು ಅವರು ಈ ಚಿತ್ರದಲ್ಲಿ ಸಹಜವಾಗಿ ಪುನೀತ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸರ್ಕಾರ ಗಮನ ಹರಿಸಬೇಕಾದ, ಜಾಗೃತಿ ಮೂಡಿಸಬೇಕಾದ ವಿಚಾರವನ್ನ ಅಪ್ಪು ಅವರು ತಮ್ಮ ಸಿನಿಮಾದ ಮೂಲಕ ಸಂದೇಶ ನೀಡಿದ್ದಾರೆ. ನಿಜಕ್ಕೂ ಕೂಡ ಗಂಧದಗುಡಿ ಸಿನಿಮಾವನ್ನ ಕುಟುಂಬ ಸಮೇತ ನೋಡಲೇಬೇಕಾದ ಸಿನಿಮಾವಾಗಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಇಂತಹ ಅದ್ಭುತ ಸಿನಿಮಾ ನೀಡಿ ಅಪ್ಪು ಅವರು ನಮ್ಮೊಂದಿಗಿಲ್ಲ ಎಂದು ಭಾವುಕರಾಗಿ ಚಿತ್ರ ಮಂದಿರದಿಂದ ಹೊರ ಬರುತ್ತಿದ್ದಾರೆ.

Leave a Reply

%d bloggers like this: