ಅಪ್ಪು ಅವರಿಗೆ ಪವರ್ ಸ್ಟಾರ್ ಬಿರುದು ಕೊಟ್ಟಿದ್ದೆ ಈ ಸ್ಟಾರ್ ನಟ!.. ಯಾರು ಗೊತ್ತಾ ಅವರು? ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪವರ್ ಸ್ಟಾರ್ ಬಿರುದು ಕೊಟ್ಟಿದ್ದು ಯಾರ್ ಗೊತ್ತಾ…! ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ಗಾಯಕರಾಗಿ ಕರುನಾಡಿನ ಮನೆ ಮನಗಳಲ್ಲಿ ಹೆಸರು ಮಾಡಿದ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ನಾಲ್ಕು ತಿಂಗಳು ಕಳೆದಿವೆ. ಆದರೂ ಕೂಡ ಅವರ ನೆನಪು ಅವರ ಮಾಡಿದಂತೆ ಸಮಾಜಮುಖಿ ಕೆಲಸ ಕಾರ್ಯಗಳು ಸದಾ ನೆನಪಿನಲ್ಲಿ ಉಳಿಯುವಂತಿವೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರವಾಗಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಇದು ನಿಜಕ್ಕೂ ಕೂಡ ಅವರಿಗೆ ಸಲ್ಲಲೇಬೇಕಾದ ಗೌರವ. ಇನ್ನು ಅಪ್ಪು ಅವರು ನಾಯಕ ನಟರಾಗಿ ಅಭಿನಯಿಸಿದ ಕೊನೆಯ ಚಿತ್ರವಾದ ಜೇಮ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹೌದು ಇದೇ ಮಾರ್ಚ್ 17 ರಂದು ರಾಜ್ಯಾದ್ಯಂತ ಜೇಮ್ಸ್ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಜೇಮ್ಸ್ ಚಿತ್ರ ಈಗಾಗಲೇ ತನ್ನ ಟ್ರೇಲರ್ ಮತ್ತು ಲಿರಿಕಲ್ ಸಾಂಗ್ ಮೂಲಕ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇದೀಗ ಇನ್ನು ಅಪ್ಪು ಅವರು ಕನ್ನಡ ಇನ್ಮುಂದೆ ಚಿತ್ರರಂಗದ ದಂತಕತೆ ಆಗಿ ಹೋಗಿದ್ದಾರೆ. ಅಪ್ಪು ಚಿತ್ರದ ಮೂಲಕ ನಾಯಕ ನಟರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿ ತಮ್ಮ ಚೊಚ್ಚಲ ಚಿತ್ರದಲ್ಲೇ ತಮ್ಮ ಖಡಕ್ ಡೈಲಾಗ್, ಫೈಟ್ಸ್, ಡ್ಯಾನ್ಸ್, ನಟನೆ ಮೂಲಕ ಕನ್ನಡ ಚಿತ್ರರಂಗದ ಧೃವತಾರೆ ಎಂದು ನಿರೂಪಿಸಿದ್ದಾರೆ. ಇನ್ನು ಅಪ್ಪು ಅವರು ಸಿನಿಮಾದಲ್ಲಿ ಮಾಡುವ ಸ್ಟಂಟ್ ಎಂತವರನ್ನೂ ಮೂಕ ವಿಸ್ಮಿತರಾಗಿನ್ನಾಗಿಸುತ್ತದೆ. ಅಷ್ಟೇ ಅಲ್ಲ ಅವರ ಡ್ಯಾನ್ಸ್ ಕೂಡ ಅಷ್ಟೇ ಅದ್ಭುತ ಆಗಿರುತ್ತದೆ. ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರನ್ನ ಪ್ರೀತಿಯಿಂದ ಅಪ್ಪು ಅಂತಾನೇ ಕರೆಯುತ್ತಾರೆ.

ಅದರ ಜೊತೆಗೆ ಅವರನ್ನು ಸ್ಯಾಂಡಲ್ವುಡ್ ಪವರ್ ಸ್ಟಾರ್ ಎಂದು ಕರೆಯುತ್ತಾರೆ. ಅನೇಕ ಮಂದಿಗೆ ಈ ಪವರ್ ಸ್ಟಾರ್ ಎಂಬ ಬಿರುದನ್ನು ಪುನೀತ್ ರಾಜ್ ಕುಮಾರ್ ಅವರಿಗೆ ನೀಡದ್ದು ಯಾರು ಅಂತ ಗೊತ್ತೇ ಇಲ್ಲ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅವರ ಹಿರಿಯಣ್ಣ ಆಗಿರುವ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಅವರು ತನ್ನ ತಮ್ಮ ಪ್ರೀತಿಯ ಅಪ್ಪು ಅವರಿಗೆ ಪವರ್ ಸ್ಟಾರ್ ಬಿರುದು ಕೊಟ್ಟಿದ್ದು ನಾನೇ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕವೇ ಅಪ್ಪು ಅವರಿಗೆ ಪವರ್ ಸ್ಟಾರ್ ಬಿರುದು ಕೊಟ್ಟಿದ್ದು ಶಿವಣ್ಣ ಎಂದು ಬಹುತೇಕ ಮಂದಿಗೆ ತಿಳಿಯುತ್ತದೆ.