ಅಪ್ಪು ಅವರ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಚಾಲೇಂಜಿಂಗ್ ಸ್ಟಾರ್ ದರ್ಶನ್ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ…!

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಕಾಲಿಕ ನಿಧನರಾಗಿ ನಾಲ್ಕು ತಿಂಗಳು ಕಳೆದಿವೆ. ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಕೇವಲ ದೈಹಿಕವಾಗಿ ಮಾತ್ರ ಅಗಲಿದ್ದಾರೆ. ಆದರೆ ಅವರು ನಟಿಸಿದ ಸಿನಿಮಾಗಳು ಮತ್ತು ಅವರು ಮಾಡಿದಂತಹ ಪ್ರಚಾರ ಇಲ್ಲದ ಸಾಮಾಜಿಕ ಕೆಲಸ ಕಾರ್ಯಗಳು, ಮಾನವೀಯ ಕಾರ್ಯಗಳು ಸದಾ ಅವರನ್ನ ನಮ್ಮ ಜೊತೆಯಲ್ಲಿ ಇರುವಂತೆ ಮಾಡಿದೆ. ಅದರಂತೆ ಅಪ್ಪು ಅವರು ನಟಿಸಿದ ಕೊನೆಯ ಸಿನಿಮಾ ಜೇಮ್ಸ್ ಸಿನಿಮಾ ಇದೇ ಮಾರ್ಚ್ 17 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಅಪ್ಪು ಅಭಿಮಾನಿಗಳ ಜೇಮ್ಸ್ ಸಿನಿಮಾ ಜಾತ್ರೆ ಮಾಡಲು ಈಗಾಗಲೇ ಭರ್ಜರಿ ಸಿದ್ದತೆ ನಡೆಸಿದ್ದಾರೆ. ಚಿತ್ರ ಮಂದಿರ ಮತ್ತು ಆ ಚಿತ್ರ ಮಂದಿರದ ರಸ್ತೆ ಉದ್ದಗಲಕ್ಕೂ ಪುನೀತ್ ರಾಜ್ ಕುಮಾರ್ ಅವರ ಫೋಟೋ ಕಟೌಟ್ ಹಾಕಿ ಸಂಭ್ರಮ ಮಾಡುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಮತ್ತು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಸುದ್ದಿ ಒಂದು ಭಾರಿ ವೈರಲ್ ಆಗುತ್ತಿದೆ. ಅದೇನಪ್ಪಾ ಅಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅರಸು ಎಂಬ ಚಿತ್ರ ಮಾಡಿದ್ದಾರೆ.

ಈ ಸಿನಿಮಾವನ್ನ ಮಹೇಶ್ ಬಾಬ ಅವರು ನಿರ್ದೇಶನ ಮಾಡಿದ್ದಾರೆ. ಈ ಅರಸು ಸಿನಿಮಾದಲ್ಲಿ ಅಪ್ಪು ಅವರಿಗೆ ಜೋಡಿಯಾಗಿ ಸ್ಯಾಂಡಲ್ ವುಡ್ ಕ್ವಿನ್ ರಮ್ಯಾ ಮತ್ತು ಮಲೆಯಾಳಂ ಖ್ಯಾತ ನಟಿ ಮೀರಾ ಜಾಸ್ಮಿನ್ ನಟಿಸಿದ್ದಾರೆ. ಅದೇ ರೀತಿಯಾಗಿ ವಿಶೇಷ ಪಾತ್ರಗಳಲ್ಲಿ ನಟ ದರ್ಶನ್ ಮತ್ತು ನಟ ಆದಿತ್ಯ ಕೂಡ ಅಭಿನಯಿಸಿದ್ದಾರೆ. ಆ ಸಮಯದಲ್ಲಿ ನಟ ದರ್ಶನ್ ಫುಲ್ ಪೀಕ್ ಅಲ್ಲಿದ್ದ ನಟ. ಭೂಪತಿ ಚಿತ್ರದ ಬಿಝಿ಼ ಶೆಡ್ಯೂಲ್ ನಲ್ಲಿಯೂ ಕೂಡ ನಟ ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಅಂದಾಕ್ಷಣ ಯಾವುದೇ ರೀತಿಯ ಹಿಂದೆ ಮುಂದೆ ನೋಡದೆ ತಕ್ಷಣ ನಾನು ಆ ಪಾತ್ರ ಮಾಡುತ್ತೇನೆ ಎಂದು ಆರಸು ಚಿತ್ರದಲ್ಲಿ ದರ್ಶನ್ ತಾವು ಮಾತ್ರ ನಟಿಸುವುದಲ್ಲದೆ ತಮ್ಮ ಗೆಳೆಯ ನಟ ಆದಿತ್ಯ ಅವರನ್ನು ಕೂಡ ಮತ್ತೊಂದು ವಿಶೇಷ ಪಾತ್ರದಲ್ಲಿ ನಟಿಸುವುದಕ್ಕೆ ಕಾರಣ ಆಗುತ್ತಾರೆ. ಸ್ಟಾರ್ ನಟರ ನಡುವೆ ಕೋಲ್ಡ್ ವಾರ್ ನಡೀತಾವೆ ಎಂದು ಹೇಳುತ್ತಿದ್ದ ದಿನಗಳಲ್ಲೇ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸುತ್ತಾರೆ ದರ್ಶನ್ ಮತ್ತು ಪುನೀತ್. ಇನ್ನು ಪುನೀತ್ ರಾಜ್ ಕುಮಾರ್ ಈ ಅರಸು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ದರ್ಶನ್ ಅವರು ಯಾವುದೇ ರೀತಿಯ ಸಂಭಾವನೆ ಪಡೆಯಲಿಲ್ಲವಂತೆ.

ಸ್ವತಃ ರಾಘವೇಂದ್ರ ರಾಜ್ ಕುಮಾರ್ ಅವರು ಒತ್ತಾಯ ಮಾಡಿ ಸಂಭಾವನೆ ನೀಡಲು ಹೋದಾಗಲೂ ಕೂಡ ಅದನ್ನ ಸೌಮ್ಯತೆಯಿಂದಾನೇ ತಿರಸ್ಕಾರ ಮಾಡಿದ್ದರಂತೆ. ಅರಸು ಚಿತ್ರ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ ನಂತರ ದರ್ಶನ್ ಅವರ ಮನೆಗೆ ಅಪ್ಪು ಮತ್ತು ರಾಘಣ್ಣ ಇಬ್ಬರು ಕೂಡ ಹೋಗಿ ದುಬಾರಿ ಬೆಲೆಯ ವಾಚ್ ವೊಂದನ್ನು ಗಿಫ್ಟ್ ಆಗಿ ನೀಡಿದರಂತೆ. ಈ ವಾಚ್ ಅನ್ನು ಸಹ ದರ್ಶನ್ ಅವರು ತಿರಸ್ಕಾರ ಮಾಡುವಾಗ ನಾವು ಇದನ್ನ ಸಂಭಾವನೆ ರೂಪದಲ್ಲಿ ನೀಡುತ್ತಿಲ್ಲ. ಕುಟುಂಬದ ಸದಸ್ಯರಿಗೆ ನಮ್ಮ ಮನೆಯ ಮಗನಿಗೆ ಉಡುಗೊರೆ ನೀಡುತ್ತಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದಾಗ ದರ್ಶನ್ ಅವರು ಅಪ್ಪು ಮತ್ತು ರಾಘಣ್ಣ ಅವರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಟ್ಟು ಆ ಉಡುಗೊರೆಯನ್ನ ಪಡೆಯುತ್ತಾರಂತೆ. ಒಟ್ಟಾರೆಯಾಗಿ ದರ್ಶನ್ ಅವರಿಗೆ ತಮ್ಮತಂದೆಯವರರಂತೆ ಡಾ. ರಾಜ್ ಕುಟುಂಬದ ಬಗ್ಗೆ ಅಪಾರ ಗೌರವ ಪ್ರೀತಿ ಇದೆ ಎಂಬುದನ್ನ ಆಗಾಗ ನಿರೂಪಿಸುತ್ತಲೇ ಇರುತ್ತಾರೆ.

Leave a Reply

%d bloggers like this: