ಅಪ್ಪನಿಗಾಗಿ ಅಮೇರಿಕಾದಲ್ಲಿ ಪುನೀತ್ ಮಗಳು ಮಾಡಿರುವ ಕೆಲಸ ನೋಡಿ ಬೆಚ್ಚಿಬಿದ್ದ ಇಡೀ ರಾಜ್ಯದ ಜನತೆ

ಚಂದನವನದ ದೃವತಾರೆ ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮ ನ್ನು ದೈಹಿಕವಾಗಿ ಅಗಲಿ ನಾಲ್ಕು ತಿಂಗಳ ಸಮೀಪ ಅಗುತ್ತಿದ್ದರು ಸಹ ಅವರನ್ನ ಮಾನಸಿಕವಾಗಿ ಎಂದಿಗೂ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅಪ್ಪು ಅವರು ಕೇವಲ ಒಬ್ಬ ಸಿನಿಮಾ ನಟರಾಗಿ ಜೀವನ ಮಾಡಿದ್ದಲ್ಲ. ಒಬ್ಬ ಆದರ್ಶವಾದಿ ಆಗಿ ಬದುಕು ಸಾಗಿಸಿ ಜೀವನದಲ್ಲಿ ನಾವು ಹೇಗೆ ಬದುಕು ನಡೆಸಬೇಕು ಎಂಬುದನ್ನ ತಿಳಿಸಿ ಹೋಗಿದ್ದಾರೆ. ಇಂದು ಕರ್ನಾಟಕದಲ್ಲಿ ಮಾತ್ರ ಅಲ್ಲ ಇಡೀ ದೇಶ ಅದರ ಜೊತೆಗೆ ಹೊರ ದೇಶಗಳಲ್ಲಿಯೂ ಕೂಡ ನಟ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿತ್ತು. ಅಷ್ಟರ ಮಟ್ಟಿಗೆ ಆ ವ್ಯಕ್ತಿಯ ವ್ಯಕ್ತಿತ್ವ, ಅವರ ಸಾಮಾಜಿಕ ಕಾರ್ಯದ ಬಗ್ಗೆ ಜಗತ್ತಿನೆಲ್ಲೆಡೆ ಪಸರಿಸಿದೆ.

ಇದರ ನಡುವೆ ಪುನೀತ್ ರಾಜ್ ಕುಮಾರ್ ಪುಣ್ಯಭೂಮಿಗೆ ದಿನ ನಿತ್ಯ ನೂರಾರು ಸಂಖ್ಯೆಯಲ್ಲಿ ಅದರಲ್ಲಿಯೂ ವಾರಾಂತ್ಯದ ದಿನಗಳಲ್ಲಿ ನಾಡಿನ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಕುಟುಂಬ ಸಮೇತರಾಗಿ ಭೇಟಿ ನೀಡಿ ಅಪ್ಪು ಅವರಿಗೆ ನಮನ ಸಲ್ಲಿಸುತ್ತಿದ್ದಾರೆ. ಅದರಂತೆ ಅವರ ಹಿರಿಯ ಪುತ್ರಿ ಧೃತಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವದ ದಿನದಂದು ದೇವಾಲಯಕ್ಕೆ ತೆರಳಿ ತಮ್ಮ ಪೋಷಕರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಬಂದಿದ್ದಾರೆ. ವಿಧ್ಯಾಭ್ಯಾಸದ ನಿಮಿತ್ತ ಅಮೆರಿಕಾದಲ್ಲಿರುವ ಧೃತಿ ಡಿಸೆಂಬರ್ ಒಂದರಂದು ತಮ್ಮ ತಂದೆ ತಾಯಿಯ ಮದುವೆಯ ವಾರ್ಷಿಕೋತ್ಸವ ದಿನದಂದು ತಮ್ಮ ತಾಯಿ ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದ್ದಾರಂತೆ.

ಅಷ್ಟೇ ಅಲ್ಲದೆ ತಮ್ಮ ತಾಯಿಗೆ ಕರೆ ಮಾಡಿ ಧೈರ್ಯ ಹೇಳಿದ್ದಾರಂತೆ. ಇತ್ತೀಚೆಗೆ ತಾನೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆ ನಿಧನರಾದ ಕಾರಣ ಅವರು ಕೂಡ ತನ್ನ ತಾತನ ಕಳೆದುಕೊಂಡು ಕಣ್ಣೀರಾಕಿದ್ದಾರಂತೆ. ಇದೆಲ್ಲದರ ಸಂಕಷ್ಟದ ನಡುವೆ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ರಾಜ್ ಇಡೀ ಕುಟುಂಬ ಜೊತೆಯಾಗಿ ಅಶ್ವಿನಿ ಅವರ ಬೆಂಬಲವಾಗಿ ನಿಂತು ಧೈರ್ಯ ಹೇಳುತ್ತಿದ್ದಾರೆ. ಅದರಂತೆ ಮಗಳು ಧೃತಿ ಕೂಡ ತನ್ನ ತಾಯಿಗೆ ಕರೆ ಮಾಡಿ ಮಾತನಾಡಿದ್ದಾರಂತೆ. ಒಟ್ಟಾರೆಯಾಗಿ ಪುನೀತ್ ರಾಜ್ ಕುಮಾರ್ ಅವರ ಪುತ್ರಿ ವಾಸ್ತವ ಸ್ಥಿತಿಗತಿ ಅರಿತು ಪ್ರಬುದ್ದತೆಯಿಂದ ನಡೆದುಕೊಳ್ಳುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.