ಅಪ್ಪನ ಈ ಒಂದು ಆಸೆ ತೀರಿಸಲು ಎಷ್ಟೇ ನೋವಿದ್ದರೂ ದೃಢ ಮನಸ್ಸು ಮಾಡಿ ಅಮೆರಿಕಾಗೆ ಹೋಗಿದ್ದಾರೆ ದೃತಿ, ಶುಭವಾಗಲಿ ಎಂದು ಆರೈಸಿದ ಇಡೀ ನಾಡಿನ ಜನತೆ

ಅಪ್ಪನಿಲ್ಲದ ವಾಸ್ತವ ಅರಿತು ಧೃತಿಗೆಡದೆ ಸ್ಥಿತಿ ಪ್ರಜ್ಞೆ ಕಾಪಾಡಿಕೊಂಡು ಮತ್ತೆ ಅಮೇರಿಕಾಗೆ ತೆರಳಿದ್ದಾರೆ ಅಪ್ಪು ಅವರ ಹಿರಿಯ ಮಗಳು ಧೃತಿ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ನಿಧನರಾಗಿ ಎರಡು ವಾರಗಳ ಸನಿಹ ಆಗುತ್ತಿದೆ.ಆದರೂ ಕೂಡ ಈ ಆಘಾತದಿಂದ ಕನ್ನಡ ನಾಡು ಹೊರ ಬಂದಿಲ್ಲ.ಐದನೇ ದಿನದ ಹಾಲು ತುಪ್ಪ ವಿಧಿ ವಿಧಾನ ಕಾರ್ಯ ಮುಗಿದು,ನಿನ್ನೆ ಅಷ್ಟೇ ಅಪ್ಪು ಅವರ ಪುಣ್ಯಸ್ಮರಣೆ ಕೂಡ ನಡೆದಿದೆ.ಇಂದು ಮೈಸೂರು ಪ್ಯಾಲೆಸ್ ಗ್ರೌಂಡ್ ತ್ರಿಪುರ ವಾಸಿನಿಯಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ.ಇಂದು ದೊಡ್ಮನೆಯ ಅಭಿಮಾನಿಗಳ ಬಳಗ ದಂಡೇ ಸೇರಲಿದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.ಇದೆಲ್ಲದರ ನಡುವೆ ಅಪ್ಪು ಅವರ ಮನೆಯಲ್ಲಿ ಒಂದು ಸಂಗತಿ ವಿಚಾರ ನಡೆದಿದೆ.ಅದೇನಪ್ಪಾ ಅಂದರೆ ಅಪ್ಪು ಅವರ ಮೊದಲನೇ ಮಗಳು ಧೃತಿಯನ್ನು ಮತ್ತೆ ಅಮೇರಿಕಾಗೆ ಕಳುಹಿಸಿಕೊಡಲಾಗಿದೆಯಂತೆ.

ಶಿವಣ್ಣ ಅವರ ಸಲಹೆ ಸೂಚನೆ ಮೇರೆಗೆ ಕುಟುಂಬದವರು ಧೃತಿಗೆ ಧೈರ್ಯ ಹೇಳಿ ತನ್ನ ತಂದೆಯಂತೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು.ನೀನು ಇಲ್ಲೇ ಇದ್ದರೆ ತಂದೆಯ ನೆನಪು ಕಾಡುತ್ತದೆ.ಹಾಗಾಗಿ ಚೆನ್ನಾಗಿ ಓದಿ ನಿನ್ನ ತಂದೆಯಂತೆ ಉತ್ತಮ ಕೆಲಸ ಮಾಡು ಎಂದು ತಿಳಿ ಹೇಳಿ ಹೊರ ದೇಶಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.ಪುನೀತ್ ರಾಜ್ ಕುಮಾರ್ ಅವರು ನಿಧನದ ಸುದ್ದಿ ಕೇಳುತ್ತಿದ್ದಂತೆ ವಿದೇಶದಲ್ಲಿದ್ದ ಅಪ್ಪು ಮೊದಲ ಮಗಳು ಧೃತಿ ತಂದೆಯ ಇನ್ನಿಲ್ಲ ಎಂಬ ಸತ್ಯವನ್ನು ಊಹಿಸಿಕೊಳ್ಳಲಾಗದೆ ಅಮೇರಿಕಾದಿಂದ ಬೆಂಗಳೂರು ಏರ್ ಪೋರ್ಟ್ ತಲುಪುವವರೆಗೆ ಕಣ್ಣೀರಾಕುತ್ತಲೆ ಬಂದರಂತೆ.ಅಮೇರಿಕಾದ ಪ್ರತಿಷ್ಟಿತ ಯೂನಿವರ್ಸಿಟಿಯಲ್ಲಿ ಸ್ಕಾಲರ್ ಶಿಪ್ ಪಡೆದು ವಿಧ್ಯಾಭ್ಯಾಸ ಮಾಡುತ್ತಿರುವ ಧೃತಿ ತನ್ನ ತಂದೆಯ ಅಚ್ಚು ಮೆಚ್ಚಿನ ಮಗಳಾಗಿದ್ದಳಂತೆ.

ತನ್ನ ತಂದೆ ನಿಧನರಾದ ಬಳಿಕ ಧೃತಿ ಪುನಃ ಅಮೇರಿಕಾಗೆ ಹೋಗುವುದಿಲ್ಲ.ಇನ್ನು ಮುಂದೆ ತಾಯಿಯ ಬಳಿಯೇ ಇರುತ್ತಾರೆ ಎಂದು ಹೇಳಲಾಗುತ್ತಿತ್ತು.ಆದರೆ ಐದನೆ ದಿನದ ಹಾಲುತುಪ್ಪ ಕಾರ್ಯಕ್ರಮ ನಂತರ ಕುಟುಂಬದವರ ಸಲಹೆಯ ಮೇರೆಗೆ ಮತ್ತೆ ವಿಧ್ಯಾಭ್ಯಾಸಕ್ಕಾಗಿ ಅಮೇರಿಕಾ ಹೋಗಿದ್ದಾರೆ.ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸುದ್ದಿಯಾಗಿದ್ದು ಅಭಿಮಾನಿಗಳು ಹೋಗಿ ಬಾ ಸೋದರಿ ಎಂದು ಶುಭ ಹಾರೈಸಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: