ಅಪ್ಪ ‘ಬ್ಯಾಡ್ ಬಾಯ್’ ಎಂದು ಅಳುತ್ತಾ ರಾಧಿಕಾ ಪಂಡಿತ್ ಅವರಿಗೆ ಕಂಪ್ಲೇಂಟ್ ಹೇಳಿದ ಮಗ, ವಿಡಿಯೋ ವೈರಲ್ 

ಕನ್ನಡ ಚಿತ್ರರಂಗದ ಯಶಸ್ವಿ ತಾರಾ ಜೋಡಿ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರ ಹೆಸರು ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತದೆ. ಕೆಜಿಎಫ್2 ಸಿನಿಮಾದ ಅಭೂತಪೂರ್ವ ಯಶಸ್ಸು ರಾಕಿಂಗ್ ಸ್ಟಾರ್ ಯಶ್ ಅವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಕ್ಸಸ್ ಆದ ನಂತರ ಯಶ್ ಅವರು ಸ್ವಲ್ಪ ಸಿನಿಮಾ ಟೆನ್ಶನ್ ಬಿಟ್ಟು ತಮ್ಮ ಫ್ಯಾಮಿಲಿ ಜೊತೆ ಕಾಲ ಕಳೆಯಲು ಮುಂದಾಗಿದ್ದಾರೆ. ಅದರಂತೆ ಗೋವಾ ಮತ್ತು ಒಂದಷ್ಟು ಹೊರ ದೇಶಗಳಿಗೆ ತಮ್ಮ ಕುಟುಂಬವನ್ನು ಕರೆದುಕೊಂಡು ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ 2016ರಲ್ಲಿ ದಾಂಪತ್ಯ ಜೀವನ ಆರಂಭ ಮಾಡಿ ಇದೀಗ ಇಬ್ಬರು ಮಕ್ಕಳೊಂದಿಗೆ ಸುಂದರ ಸಾಂಸಾರಿಕ ಬದುಕನ್ನ ನಡೆಸುತ್ತಿದ್ದಾರೆ.

ಇವರ ದಾಂಪತ್ಯ ಜೀವನ ಅದೆಷ್ಟೋ ಪ್ರೇಮಿಗಳಿಗೆ ಆದರ್ಶವಾಗಿದೆ. ನಟಿ ರಾಧಿಕಾ ಪಂಡಿತ್ ತಮ್ಮಿಬ್ಬರ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ತಮ್ಮ ದೈನಂದಿನ ಅಪ್ ಡೇಟ್ಸ್ ಜೊತೆಗೆ ತಮ್ಮ ಮುದ್ದಾದ ಮಕ್ಕಳ ತುಂಟಾಟಗಳ ವೀಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಇತ್ತೀಚೆಗೆ ನಟ ಯಶ್ ಅವರು ಕೂಡ ತಮ್ಮ ಮಕ್ಕಳೊಟ್ಟಗೆ ಕೊಂಚ ಸಮಯ ಕಾಲ ಕಳೆಯುತ್ತಿರುತ್ತಾರೆ. ಆ ಸಂಧರ್ಭದಲ್ಲಿ ಯಶ್ ಅವರು ತಮ್ಮ ಮಗ ಯಥರ್ವ್ ನನ್ನ ಎತ್ಕೊಂಡು ಮುದ್ದಾಡುತ್ತಾ ಅಪ್ಪ ಗುಡ್ ಬಾಯ್ ಅಪ್ಪ ಗುಡ್ ಬಾಯ್ ಎಂದು ಹೇಳಿಕೊಡುತ್ತಿರುತ್ತಾರೆ.

ಯಶ್ ಅವರು ತನ್ನನ್ನ ಗುಡ್ ಬಾಯ್ ಅಂತ ಪುತ್ರ ಹೇಳಲಿ ಎಂದು ಹಾಗೇ ಹೇಳುತ್ತಾ ಇರುತ್ತಾರೆ. ಆದರೆ ಯಶ್ ಅವರ ಮಗ ಯಥರ್ವ್ ಮಾತ್ರ ತನ್ನ ಅಪ್ಪನನ್ನ ಗುಡ್ ಬಾಯ್ ಎಂದು ಹೇಳದೇ ಅಪ್ಪ ಬ್ಯಾಡ್ ಬಾಯ್ ಅಪ್ಪ ಬ್ಯಾಡ್ ಬಾಯ್, ಅಮ್ಮ ಗುಡ್ ಗರ್ಲ್ ಅಂತಾನೇ ಹೇಳುತ್ತಾನೆ. ಮಗನ ಈ ಮುದ್ದಾದ ಮಾತು ಯಶ್ ಅವರಿಗೆ ಆನಂದವನ್ನುಂಟು ಮಾಡುತ್ತಿರುತ್ತದೆ. ಯಶ್ ತಮ್ಮ ಮಗ ಯಥರ್ವ್ ಈ ರೀತಿ ಹೇಳುತ್ತಿರುವ ವೀಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟ ಯಶ್ ಅವರು ತಮ್ಮ ಮಗನ ಜೊತೆ ತುಂಟಾಟ ಮಾಡುತ್ತಾ ಕಾಲ ಕಳೆಯುತ್ತಿರುವ ಈ ಮುದ್ದಾದ ವೀಡೀಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Leave a Reply

%d bloggers like this: