ಅನುಶ್ರೀ ನೀವು ನೋಡಕ್ಕೆ ಹಂದಿ ತರಹ ಇದೀಯ ಎಂದ ವ್ಯಕ್ತಿ.. ಅನುಶ್ರೀ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಕಮ್ ನಟಿಗೆ ಅಯ್ಯೋ ನಿನ್ಗೇ ವಯಸ್ಸಾಗೋಗಿದೆ. ಒಳ್ಳೇ ಹಂದಿ ಥರಾ ಕಾಣ್ತಿದ್ಯ ಎಂದ ನೆಟ್ಟಿಗ. ನೆಟ್ಟಿಗನ ಕಮೆಂಟಿಗೆ ನಗುತ್ತಲೇ ಗ್ರಹಚಾರ ಚಳಿ ಬಿಡಿಸಿದ ನಟಿ. ಹೌದು ಸಾಮಾನ್ಯವಾಗಿ ಈ ಸಾರ್ವಜನಿಕ ಕ್ಷೇತ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ ಅಂದರೆ ಅನೇಕ ಪರ-ವಿರೋಧ, ಟೀಕೆ ವಿಮರ್ಶೆಗಳು ಬಂದೇ ಬರುತ್ತವೆ. ಬಂದಂತಹ ಟೀಕೆ ವಿಮರ್ಶೆಗಳನ್ನ ಹೇಗೆ ನಿಭಾಯಿಸಿಕೊಂಡು ಜೀವನ ಸಾಗಿಸಬೇಕು ಎಂಬುದು ಗಣ್ಯರಿಗೆ ತಿಳಿದಿರಬೇಕು. ಇಲ್ಲವಾದರೆ ಅದು ಅಚಾತುರ್ಯವಾಗುವುದರಲ್ಲಿ ಅನುಮಾನವಿಲ್ಲ. ಈ ಟೀಕೆ ವಿಮರ್ಶೆಗೆ ಹೆಚ್ಚು ಬೇಗ ಒಳಗಾಗುವುದು ಅಂದರೆ ಈ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ವ್ಯಕ್ತಿಗಳು. ರಾಜಕೀಯ ಕ್ಷೇತ್ರದ ವ್ಯಕ್ತಿಗಳಿಗೆ ಕೆಲವರು ಕಾಲೆಳೆದು ಟೀಕೆ ಮಾಡುತ್ತಾರೆ.

ಅವರ ಕಾರ್ಯ ಕೆಲಸ ಕಾರ್ಯಗಳ ಬಗ್ಗೆ ವಿಮರ್ಶೆ ಮಾಡಿ ತೃಪ್ತಿದಾಯಕ ವಾಗದಿದ್ದಲ್ಲಿ ಮುಕ್ತವಾಗಿ ಅಸಮಾದಾನ ವ್ಯಕ್ತಪಡಿಸುತ್ತಾರೆ. ಅಂತೆಯೇ ಈ ಸಿನಿಮಾ ನಟ-ನಟಿಯರಿಗಂತೂ ಈ ಸೋಶೀಯಲ್ ಮೀಡಿಯಾದಲ್ಲಿ ಊಹೆ ಕೂಡ ಮಾಡಲಾಗುವುದಿಲ್ಲ. ಅಷ್ಟರ ಮಟ್ಟಿಗೆ ರಿಯಾಕ್ಷನ್ ನೀಡುತ್ತಾರೆ ನೆಟ್ಟಿಗರು. ಇತ್ತೀತಿಗೆ ಸ್ಯಾಂಡಲ್ ವುಡ್ ನ ಅನೇಕ ನಟ – ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳು ತಮ್ಮ ವೃತ್ತಿ ಜೀವನದ ಒಂದಷ್ಟು ಹಾಗು-ಹೋಗುಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಅಪ್ ಡೇಟ್ಸ್ ಕೂಡ ನೀಡುತ್ತಿರುತ್ತಾರೆ.

ಅಂತೆಯೇ ಕೆಲವು ದಿನಗಳ ಹಿಂದೆ ತನ್ನ ಮುದ್ದಾದ ಮುಖ, ಹರಳು ಉದುರವ ಹಾಗೇ ಮಾತನಾಡುವ ಕೌಶಲ್ಯ, ತಮ್ಮ ಆಕರ್ಷಕ ಹಾವ ಭಾವಗಳಿಂದ ಕನ್ನಡ ಕಿರುತೆರೆಯಲ್ಲಿ ಸುಪ್ರಸಿದ್ದ ನಿರೂಪಕಿಯಾಗಿ ಗುರುತಿಸಿಕೊಂಡಿರುವ ನಟಿ ಕಮ್ ನಿರೂಪಕಿ ಅನುಶ್ರೀ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಫೇಸ್ ಬುಕ್ ಲೈವ್ ಬಂದಿರುತ್ತಾರೆ. ಲಕ್ಷಾಂತರ ಮಂದಿ ಅನುಯಾಯಿಗಳನ್ನ ಹೊಂದಿರುವ ಅನುಶ್ರೀ ಅವರು ತಮ್ಮ ಒಂದಷ್ಟು ಆಸಕ್ತಿಕರ ವಿಚಾರಗಳನ್ನ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳುತ್ತಿರುತ್ತಾರೆ. ಈ ಸಂಧರ್ಭದಲ್ಲಿ ತಮ್ಮ ಪ್ರೀತಿಯ ಶ್ವಾನ ನಿಧನವೊಂದಿದ ದುಃಖದ ಸುದ್ದಿಯನ್ನ ಶೇರ್ ಮಾಡುತ್ತಾರೆ.

ಹೀಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುತ್ತಿದ್ದ ಅನುಶ್ರೀ ಅವರಿಗೆ ಅವರ ಅಭಿಮಾನಿಗಳು ಕುಶಲೋಪರಿ ವಿಚಾರಿಸಿಕೊಳ್ಳುತ್ತಿರುತ್ತಾರೆ. ಈ ಸಂಧರ್ಭದಲ್ಲಿ ನೆಟ್ಟಿಗನೊಬ್ಬ ನಿನಗೆ ವಯಸ್ಸಾಗೋಗಿದೆ ಒಳ್ಳೇ ಹಂದಿ ಥರಾ ಕಾಣ್ತಿದಿಯಾ ಎಂದು ನಕರಾತ್ಮಕ ಕಮೆಂಟ್ ಮಾಡುತ್ತಾನೆ. ಈ ಕಮೆಂಟ್ ನೋಡಿದ ತಕ್ಷಣ ಅನುಶ್ರೀ ಅವರು ನೋಡಿ ಇವನ್ಯಾರೋ ನಾನು ಹಂದಿ ಥರಾ ಇದೀನಿ, ವಯಸ್ಸಾಗಿದೆ ಅಂತ ಕಮೆಂಟ್ ಮಾಡಿದ್ದಾರೆ ಎಂದು ನಗುತ್ತಲೇ ಕಮೆಂಟ್ ಮಾಡಿದ ವ್ಯಕ್ತಿಗೆ ನೋಡಿ ಹೌದು ನನಗೆ ಈಗ ವಯಸ್ಸಾಗಿದೆ. ಅದೇ ರೀತಿಯಾಗಿ ನಿಮಗೆ ನಿಮ್ಮ ತಾಯಿಗೆ, ನಿಮ್ಮ ಅಕ್ಕ ತಂಗಿಗೂ ಕೂಡ ಒಂದು ದಿನ ವಯಸ್ಸಾಗುತ್ತದೆ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಉತ್ತರಿಸುತ್ತಾರೆ.

ಅನುಶ್ರೀ ಅವರ ಈ ಪ್ರತಿಕ್ರಿಯೆಗೆ ನೀವು ತಾಳ್ಮೆಯ ಉತ್ತರ ಇಷ್ಟವಾಯಿತು ಎಂದು ಅವರ ಅಭಿಮಾನಿಗಳು ಅನುಶ್ರೀ ಅವರಿಗೆ ಬೆಂಬಲ ಸೂಚಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: