ಅಂತೂ ಇಂತೂ ಬಂದೇ ಬಿಡ್ತು ಬಹು ನಿರೀಕ್ಷೆಯ ಬಿಗ್ ಬಾಸ್ ಮಿನಿ ಸೀಸನ್1, ಯಾವಾಗ ಗೊತ್ತೇ

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುವ ಬಿಗ್ ಬಾಸ್ ಕಾರ್ಯಕ್ರಮ ಕಿರುತೆರೆಯ ಅದ್ದೂರಿಯಾದ ರಿಯಾಲಿಟಿ ಶೋ ಅಂತ ಹೇಳ್ಬೋದು. ಯಾಕಂದ್ರೆ ಈ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಕೂಡ ದುಬಾರಿಯೇ ಆಗಿರುತ್ತಾರೆ. ಸಿನಿಮಾ, ಕಿರುತೆರೆ, ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ತಕ್ಕ ಮಟ್ಟಗೆ ಜನಪ್ರಿಯರಾಗಿರುವ ಸೆಲೆಬ್ರಿಟಿಗಳನ್ನ ಒಂದು ಕಡೆ ಸೇರಿಸಿ ಅವರನ್ನ ಒಂದೇ ಮನೆಯಲ್ಲಿ ಅಷ್ಟು ದಿನಗಳ ಕಾಲ ಅವರ ಸಂಪೂರ್ಣ ಜವಬ್ದಾರಿ ತೆಗೆದುಕೊಂಡು ಅವರಿಂದ ವೀಕ್ಷಕರಿಗೆ ಮನರಂಜನೆ ತರೋ ಟಾಸ್ಕ್ ಇದೆಯಲ್ಲಾ ಅದು ತಮಾಷೆಯ ಸುಲಭದ ಸಂಗತಿ ಅಲ್ಲ. ಇಂತಹ ಬಹುದೊಡ್ಡ ರಿಯಾಲಿಟಿ ಶೋ ಈ ಬಾರಿ ವಿಭಿನ್ನವಾಗಿ ಮೂಡಿ ಬರುತ್ತಿದೆ.

ಹೌದು ಈ ಬಾರಿ ಕಲರ್ಸ್ ಕನ್ನಡ ಬಿಝೆನೆಸ್ ಕ್ರಿಯೇಟಿವ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮಿನಿ ಸೀಸನ್ ಎಂಬ ಹೊಸ ಕಲ್ಪನೆಯೊಂದಿಗೆ ಬರುತ್ತಿದ್ದಾರೆ. ಅಂದರೆ ಈ ಬಿಗ್ ಬಾಸ್ ಮಿನಿ ಸೀಸನ್1 ವೂಟ್ ಆಪ್ ನಲ್ಲಿ ದಿನದ 24 ಗಂಟೆ ಮೂಡಿ ಬರಲಿದೆಯಂತೆ. ಈ ವೂಟ್ ಆಪ್ ನಲ್ಲಿ ಬರಲಿರೋ ಮಿನಿ ಬಿಗ್ ಬಾಸ್ ವಾರಾಂತ್ಯದ ಕಟ್ಟೆ ಪಂಚಾಯ್ತಿಯಲ್ಲಿ ಸುದೀಪ್ ಅವರು ಬರಲಿದ್ದು, ಇಲ್ಲಿ ಕಿರುತೆರೆ ಮತ್ತು ಈ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯರಾಗಿರೋ ವ್ಯಕ್ತಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರಂತೆ. ಇನ್ನು ಈಗಾಗಲೇ ಮಿನಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರೋಮೋ ನಿನ್ನೆ ತಾನೇ ಬಿಡುಗಡೆಯಾಗಿದ್ದು.

ಕಿಚ್ಚ ಸುದೀಪ್ ಅವರು ಹೊಸ ಲುಕ್ ನಲ್ಲಿ ಸಖತ್ ಆಗಿ ಮಿಂಚಿದ್ದು ಪ್ರೋಮೋ ಭಾರಿ ರಿಚ್ ಆಗಿ ಮೂಡಿ ಬಂದಿದೆ. ಇದೇ ಆಗಸ್ಟ್ 6ರಿಂದ ಪ್ರತಿದಿನ ಸಂಜೆ 7ಗಂಟೆಗೆ ವೂಟ್ ಓಟಿಟಿ ಪ್ಲಾಟ್ ಫಾರ್ಮ್ನಲ್ಲಿ ಪ್ರಸಾರವಾಗಲಿದೆ ಎಂದು ವಾಹಿನಿಯ ಮೂಲಕ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಇನ್ನು ಇದೀಗ ಈ ಮಿನಿ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬುದು ವೀಕ್ಷಕರಿಗೆ ಭಾರಿ ಕುತೂಹಲ ಮೂಡಿಸಿದೆ. ಅದೇ ರೀತಿಯಾಗಿ ಪ್ರೊಮೋ ಮೂಲಕ ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಯಾವ ರೀತಿಯಾಗಿ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಲಿದೆ ಅನ್ನೋದನ್ನ ಕೆಲವೇ ದಿನಗಳಲ್ಲಿ ಕಾದು ನೋಡಬಹುದಾಗಿದೆ.