ಸ್ವತಃ ಅಣ್ಣಾವ್ರೇ ಬಂದು ತಮ್ಮ ಸಿನೆಮಾ ಮುಹೂರ್ತಕ್ಕೆ ವಿಷ್ಣು ಸರ್ ಅವರನ್ನು ಕರೆದಾಗ ವಿಷ್ಣು ಸರ್ ಮಾಡಿದ್ದೇನು ಗೊತ್ತಾ

ಈ ಸಿನಿಮಾ ಕ್ಷೇತ್ರದಲ್ಲಿ ಯಾರು,ಯಾವಾಗ ಯಾವ ಸ್ಟಾರ್ ಪಟ್ಟ ಏರುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ.ಸ್ಟಾರ್ ನಟನ ಸಿನಿಮಾದ ಎದುರು ಹೊಸ ನಾಯಕನ ಚಿತ್ರ ಸೂಪರ್ ಹಿಟ್ ಆಗಬಹುದು.ಯಶಸ್ಸಿನ ಉತ್ತುಂಗದಲ್ಲಿದ್ದ ನಟ ಏಕಾಏಕಿ ತನ್ನ ಸ್ಟಾರ್ ಪಟ್ಟದಿಂದ ಕೆಳಗಿಳಿಯಬಹುದು.ಇಲ್ಲಿ ಯಾರೂ ಕೂಡ ಯಾವುದೂ ಕೂಡ ಶಾಶ್ವತವಲ್ಲ.ಆದರೆ ಸ್ಟಾರ್ ಕಲಾವಿದರು ಪರಸ್ಪರ ಚೆನ್ನಾಗಿದ್ದರು ಕೂಡ ಅವರ ಅಭಿಮಾನಿಗಳು ಮಾಡುವ ಸಣ್ಣ ಪುಟ್ಟ ಅತೀ ಅಂಧಾಭಿಮಾನ ವರ್ತನೆಯಿಂದಾಗಿ ಇಲ್ಲದ ಕಂದಕ ಸ್ಟಾರ್ ನಟರ ನಡುವೆ ಉಂಟಾಗುತ್ತದೆ.ಈ ಕೋಲ್ಡ್ ವಾರ್,ಸ್ಟಾರ್ ವಾರ್ ಆರಂಭ ಮತ್ತು ಇದರ ಅಂತ್ಯ ಎರಡೂ ಕೂಡ ಭಾರಿ ಜೋರಾಗಿಯೇ ನಡೆಯುತ್ತದೆ.ಅಂತೆರೇ 80-90 ರ ದಶಕದಲ್ಲಿ ಈ ಸ್ಟಾರ್ ಅಂತ ಕರೆಯುತ್ತಿದದ್ದು ಡಾ.ರಾಜ್ ಕುಮಾರ್ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸಿನಿಮಾಗಳಿಗೆ.

ಡಾ.ರಾಜ್ ಕುಮಾರ್ ಅವರ ಕೆಲವು ಅಭಿಮಾನಿಗಳು ವಿಷ್ಣುವರ್ಧನ್ ಅವರ ಸಿನಿಮಾಗಳು ರಿಲೀಸ್ ಆಗುವ ಸಂಧರ್ಭದಲ್ಲಿ ಒಂದಷ್ಟು ಸಮಸ್ಯೆ ಮಾಡುತ್ತಿದ್ದರು.ಗಂಧದಗುಡಿ ಚಿತ್ರದ ಸಂಧರ್ಭದಲ್ಲಿ ಈ ಇಬ್ಬರು ನಟರ ವೈಮನಸ್ಸು ಉಂಟಾಗಿತ್ತು ಎಂಬುದು ಅಂದಿನ ಗಾಂಧಿನಗರದ ಸುದ್ದಿ.ಆದರೆ ಇವರಿಬ್ಬರು ಎಲ್ಲಿಯೂ ಕೂಡ ಈ ಬಗ್ಗೆ ಮಾತಾಡಿಲ್ಲ.ಪರಸ್ಪರ ಎಲ್ಲಿಯೂ ಕೂಡ ಒಬ್ಬರಿಗೊಬ್ಬರು ಟಾಂಗ್ ಕೂಡ ಕೊಟ್ಟಿರುವುದಿಲ್ಲ. ವಿಶೇಷ ಅಂದರೆ ಡಾ.ರಾಜ್ ಕುಮಾರ್ ಅವರ ಶೃತಿ ಸೇರಿದಾಗ ಚಿತ್ರದ ಮುಹೂರ್ತಕ್ಕೆ ವಿಷ್ಟು ವರ್ಧನ್ ಅವರು ಆಗಮಿಸಿ ಸಿನಿಮಾಗೆ ಕ್ ಕ್ಲಾಪ್ ಕೂಡ ಮಾಡಿದ್ದರು.ಇದರ ಮುಹೂರ್ತ ಕಾರ್ಯಕ್ರಮಕ್ಕೆ ಸ್ವತಃ ಡಾ.ರಾಜ್ ಕುಮಾರ್ ಅವರೇ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದರು.

ಅವರ ಆಹ್ವಾನಕ್ಕೆ ಓಗೊಟ್ಟು ನಟ ವಿಷ್ಣು ವರ್ಧನ್ ಕೂಡ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು.ಅದರಂತೆ ಈ ಶೃತಿ ಸೇರಿದಾಗ ಸಿನಿಮಾ ಸೂಪರ್ ಹಿಟ್ ಆಯಿತು. ಹೀಗೆ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರು ಪರಸ್ಪರ ಉತ್ತಮ ಸ್ನೇಹ ಸಂಬಧವನ್ನು ಹೊಂದಿದ್ದರು.ವಿಷ್ಣು ವರ್ಧನ್ ಅವರು ಕಾರ್ಯಕ್ರಮದ ವೇದಿಕೆಯೊಂದರ ಮೇಲೆ ಡಾ.ರಾಜ್ ಅವರು ಇಲ್ಲದಿದ್ದರೆ ಚಿತ್ರರಂಗ ಬಡವಾಗುತ್ತದೆ ಎಂದು ಅವರ ಅನುಪಸ್ಥಿತಿಯಲ್ಲಿ ನಾವು ಕನ್ನಡ ಚಿತ್ರರಂಗವನ್ನು ನೆನೆಪಿಸಿಕೊಳ್ಳುವುದು ಕಷ್ಟಕರ ಎಂದು ಭಾವುಕರಾಗಿ ನುಡಿದಿದ್ದರು. ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.

Leave a Reply

%d bloggers like this: