ಅಣ್ಣಾವ್ರ ಜೊತೆ ಆಡಿಸಿ ನೋಡು ಬೀಳಿಸಿ ನೋಡು ಹಾಡಿನಲ್ಲಿ ಇದ್ದ ಮಗು ಈಗ ಖ್ಯಾತ ನಟಿ, ಹೇಗಿದ್ದಾರೆ ನೋಡಿ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಎರಡು ದಶಕಗಳ ಹಿಂದೆ ಸ್ಟಾರ್ ನಟ-ನಟಿಯರಂತೆ ಬಾಲ ಪ್ರತಿಭೆಗಳು ಅಪಾರ ಜನಪ್ರಿಯತೆ ಗಳಿಸಿದ್ದರು.ಬಾಲ ಕಲಾವಿದರ ಮುಖ್ಯಭೂಮಿಕೆಯಲ್ಲಿಯೆ ಸಿನಿಮಾಗಳು ತಯಾರಾಗುತ್ತಿದ್ದಂತಹ ಕಾಲ ಅದು. ಕನ್ನಡದಲ್ಲಿ ಬಾಲ ಪ್ರತಿಭೆಗಳಾಗಿ ಗುರುತಿಸಿಕೊಂಡಿದ್ದು ಅಂದರೆ ಅದು ಮಾಸ್ಟರ್ ಪುನೀತ್ (ಅಪ್ಪು) ಮಾಸ್ಟರ್ ಮಂಜುನಾಥ್ , ಮಾಸ್ಟರ್ ಆನಂದ್, ಬಾಲ ನಟಿಯರಲ್ಲಿ ಬೇಬಿ ಶ್ಯಾಮಿಲಿ.ಬ್ಯಾಬಿ ಶ್ಯಾಮಿಲಿಗೆ ಅಂದಿನ ದಿನಮಾನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅಪಾರ ಬೇಡಿಕೆ ಇತ್ತು.ಈ ಮಗುವಿನ ಸಂಭಾವನೆ ಕೂಡ ಅಷ್ಟೇ ದೊಡ್ಡದಾಗಿತ್ತು.ಅಂತೆಯೇ ಮತ್ತೊಬ್ಬ ಜನಪ್ರಿಯ ಬಾಲನಟಿ ಅಂದರೆ ಅದು ರಾಣಿ.ರಾಣಿ ಅಂದಾಕ್ಷಣ ಅಷ್ಟಾಗಿ ನೆನಪಾಗುವುದಿಲ್ಲ. ಏಕೆಂದರೆ ರಾಣಿ ತಮಿಳು ಚಿತ್ರಗಳಲ್ಲಿ ಹೆಚ್ಚು ನಟಿಸಿರುವುದು. ಕರ್ನಾಟಕದಲ್ಲಿ ಬಾಲ ನಟಿ ರಾಣಿ ಅಪಾರ ಜನಪ್ರಿಯತೆ ಗಳಿಸಲು ಬಹು ಮುಖ್ಯ ಕಾರಣ ಅಂದರೆ ಅಣ್ಣಾವ್ರು.

ಅಣ್ಣಾವ್ರ ಅಭಿನಯದ ಕಸ್ತೂರಿ ನಿವಾಸ ಸಿನಿಮಾದಲ್ಲಿ ರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ಥರು.ಕಸ್ತೂರಿ ನಿವಾಸ ಸಿನಿಮಾದಲ್ಲಿ ಪ್ರಸಿದ್ದ ಹಾಡುಗಳಲ್ಲಿ ಒಂದಾದ ಅಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಈ ಹಾಡಿನಲ್ಲಿ ಮುದ್ದು ಪುಟಾಣಿಯಾಗಿ ಕಾಣಿಸಿಕೊಂಡಿರುವ ಮಗುವೇ ಈ ರಾಣಿ.ಈ ಹಾಡಿನ ಮೂಲಕ ರಾಣಿ ನಾಡಿನ ಮನೆ ಮನೆ ಮಾತಾದರು.1966 ರಲ್ಲಿ ತೆರೆಕಂಡ ತಮಿಳಿನ ಚಿಟ್ಟಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಬೇಬಿ ರಾಣಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.ಇನ್ನು ಬೇಬಿ ರಾಣಿ ಅವರಿಗೆ ಕುಂಜ ತಾಯಗ ಎಂಬ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ.ಜೊತೆಗೆ ಕಣ್ಣೆ ಪಾಪ ಎಂಬ ಚಿತ್ರಕ್ಕೆ ತಮಿಳು ರಾಜ್ಯ ಸರ್ಕಾರ ಸ್ಟೇಟ್ ಅವಾರ್ಡ್ ನೀಡಿದೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: