ಅಣ್ಣ ವಿನಯ್ ರಾಜ್ ಕುಮಾರ್ ಮದುವೆ ಆಗದಿದ್ದರು ತಮ್ಮ ಯುವ ರಾಜ್ ಕುಮಾರ್ ಮದುವೆ ಆದದ್ದು ಯಾಕೆ..! ಅಸಲಿ ಸತ್ಯ ಏನು ಗೊತ್ತಾ?

ಅಣ್ಣ ವಿನಯ್ ರಾಜ್ ಕುಮಾರ್ ಮದುವೆ ಆಗದಿದ್ದರು ತಮ್ಮ ಯುವ ರಾಜ್ ಕುಮಾರ್ ಮದುವೆ ಆದದ್ದು ಯಾಕೆ..!
ಕನ್ನಡ ಚಿತ್ರರಂಗದ ದಿಗ್ಗಜ ಮೇರು ನಟ ಡಾ. ರಾಜ್ ಕುಮಾರ್ ಅವರ ಕುಟುಂಬ ಅಂದರೆ ಅದು ಚಿತ್ರರಂಗದ ದೊಡ್ಡ ಯಜಮಾನರ ಮನೆ ಇದ್ದಂತೆ. ಅಣ್ಣಾವ್ರು ಇದ್ದಾಗ ಚಂದನವನದ ಪ್ರತಿಯೊಂದು ಆಗು-ಹೋಗುಗಳು ಎಲ್ಲಾ ವಿಚಾರಗಳ ಚರ್ಚೆ ಅಲ್ಲಿ ನಡೆಯುತ್ತಿದ್ದವು. ಮೂರೋ ಆರೋ ತಿಂಗಳಿಗೊಮ್ಮೆ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ತಂತ್ರಜ್ಞರು ಇನ್ನಿತರ ವಿಭಾಗದವರು ಎಲ್ಲರನ್ನ ಒಟ್ಟು ಹಾಕಿ ಪರಸ್ಪರ ಕಷ್ಟ ಸುಖ ಕುಶಲೋಪರಿ ವಿಚಾರ ನಡೆಸುತ್ತಿದ್ದರು.ಡಾ.ರಾಜ್ ಕುಮಾರ್ ಅವರ ಈ ಒಂದು ರೀತಿಯ ವ್ಯಕ್ತಿತ್ವ ನಡವಳಿಕೆಯ ಗುಣವೇ ಉಳಿದ ಕಲಾವಿದರಿಗೆ ರಾಜ್ ಅವರು ಸ್ವಂತ ಅಣ್ಣನಂತೆ ಮನೆಯ ಯಜಮಾನರಂತೆ ಕಾಣಲು ಪೂರಕವಾಯಿತು ಎನ್ನಬಹುದು. ಹಾಗಾಗಿಯೇ ಚಿತ್ರರಂಗದಲ್ಲಿ ರಾಜ್ ಅವರನ್ನ ಪ್ರೀತಿ, ಗೌರವದಿಂದ ಅಣ್ಣಾವ್ರು ಎಂದು ಕರೆಯುವುದು.

ಇನ್ನು ಅಣ್ಣಾವ್ರು ನಂತರ ಅವರ ಕುಟುಂಬದಲ್ಲಿ ಮುಂದಿನ ತಲೆ ಮಾರುಗಳಾಗಿ ದೊಡ್ಮನೆಯ ಬಣ್ಣದ ನಂಟನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಹೊತ್ತವರು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್. ಇದೀಗ ಸದ್ಯಕ್ಕೆ ದುಃಖದ ವಿಷಾದನೀಯ ಸುದ್ದಿ ಏನಪ್ಪಾ ಅಂದ್ರೆ ಅಪ್ಪು ಅವರು ಅಕಾಲಿಕ ಕಾಲವಾದರು. ಶಿವಣ್ಣ ಅವರ ಬಲಗೈ ಬಂಟರಂತೆ ಇದ್ದ ಅಪ್ಪು ಇವರೇ ಹೋದಮೇಲೆ ದೊಡ್ಮನೆಯಲ್ಲಿ ಕತ್ತಲು ಆವರಿಸಿದಂತಾಯಿತು. ಶಿವಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಈಗಾಗಲೇ ವೈದ್ಯರಾಗಿರುವ ಒಬ್ಬರು ಮದುವೆ ಆಗಿದ್ದಾರೆ. ಇನ್ನೊಬ್ಫ ಮಗಳು ನಿವೇದಿತಾ ಅವರು ಪ್ರೊಡಕ್ಷನ್ ಹೌಸ್ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪು ಅವರಿಗೆ ಕೂಡ ಇಬ್ಬರು ಹೆಣ್ಣು ಮಕ್ಕಳು. ಈ ಇಬ್ಬರು ಕೂಡ ಓದುತ್ತಿದ್ದಾರೆ.

ಇನ್ನು ರಾಜ್ ಕುಟುಂಬದಲ್ಲಿ ಮುಂದೆ ಸಿನಿಮಾದ ನಂಟು ಉಳಿಸಬೇಕಾದ ಜವಬ್ದಾರಿ ಇರುವುದು ಅಂದರೆ ಅದು ರಾಘಣ್ಣ ಅವರ ಪುತ್ರರಿಬ್ಬರಿಗೆ. ರಾಘಣ್ಣ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಅವರು ಈಗಾಗಲೇ ಸಿದ್ದಾರ್ಥ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ರನ್ ಆಂಟೋನಿ ಅಂತಹ ಪ್ರಯೋಗಾತ್ಮಕ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಗ್ರಾಮಾಯಣ ಎಂಬ ವಿಭಿನ್ನ ಚಿತ್ರದಲ್ಲಿ ನಟಿಸಿದ್ದಾರೆ ವಿನಯ್ ರಾಜ್ ಕುಮಾರ್. ಹೀಗೆ ಒಂದಷ್ಟು ವಿಭಿನ್ನ ಕಥೆಗಳ ಆಯ್ಕೆ ಮಾಡಿಕೊಂಡು ವೈವಿಧ್ಯಮ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಇಚ್ಚೆ ಹೊಂದಿದ್ದಾರಂತೆ ವಿನಯ್. ಜೊತೆಗೆ ಇವರ ಸೋದರ ಯುವ ರಾಜ್ ಕುಮಾರ್ ಸಹ ರಣಧೀರ ಕಂಠೀರವ ಸಿನಿಮಾದ ಮೂಲಕ ಚಂದನವನಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ಯುವ ರಾಜ್ ಕುಮಾರ್ ಅವರು ಶ್ರೀದೇವಿ ಎಂಬುವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟರು. ಇದು ಅನೇಕ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿತು. ಏಕೆಂದರೆ ಸಾಮಾನ್ಯವಾಗಿ ಮನೆಯ ಹಿರಿಯ ಮಗನಿಗೆ ಮದುವೆ ಮಾಡದೆ ಕಿರಿಯ ಮಕ್ಕಳಿಗೆ ಮದುವೆ ಮಾಡುವುದಿಲ್ಲ. ಆದರೆ ರಾಜ್ ಕುಟುಂಬದಲ್ಲಿ ಮನೆಯ ಹಿರಿಯ ಮಗನ ಬಿಟ್ಟು ಕಿರಿಯ ಮಗನಿಗೆ ಮದುವೆ ಮಾಡಲಾಯಿತು. ಇದು ಅನೇಕರಿಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ವಿನಯ್ ರಾಜ್ ಕುಮಾರ್ ಅವರು ರಾಘಣ್ಣ ಅವರ ದೊಡ್ಡ ಮಗ. ಯುವ ಎರಡನೇಯವರು. ಆದರು ಕೂಡ ಯುವ ರಾಜ್ ಕುಮಾರ್ ಮೊದಲೇ ಮದುವೆ ಆದರು. ಇದರ ನಡುವೆ ವಿನಯ್ ರಾಜ್ ಕುಮಾರ್ ಅವರ ಬಗ್ಗೆ ಒಂದಷ್ಟು ಗಾಸಿಪ್ ಗಳು ಹರಿದಾಡಿದವು.

ಅವುಗಳು ವಿನಯ್ ರಾಜ್ ಕುಮಾರ್ ಅವರು ರನ್ ಆಂಟೋನಿ ಸಿನಿಮಾ ನಾಯಕಿ ಜೊತೆ ಕೆಲವು ಕಡೆ ಜೊತೆಯಾಗಿ ಓಡಾಡುತ್ತಿದ್ದನ್ನ ಕಂಡು ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ತದ ನಂತರ ಈ ಬಗ್ಗೆ ವಿನಯ್ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದರು. ಅದಲ್ಲದೆ ಮಿಸ್ ಕರ್ನಾಟಕ ತೆಲುಗು ಚಿತ್ರದ ನಟಿಯೊಬ್ಬರ ಹೆಸರಿನ ಜೊತೆ ವಿನಯ್ ರಾಜ್ ಕುಮಾರ್ ಅವರ ಹೆಸರು ಕೇಳಿ ಬಂತು. ಆದರೆ ಈ ಬಗ್ಗೆ ವಿನಯ್ ರಾಜ್ ಕುಮಾರ್ ಅವರು ಇವೆಲ್ಲಾ ಸುಳ್ಳು ಸುದ್ದಿ ಎಂದು ಅಂತ್ಯ ಹಾಡಿದ್ದರು. ಆದರೆ ಅಸಲಿಗೆ ವಿನಯ್ ರಾಜ್ ಕುಮಾರ್ ಅವರು ಮದುವೆ ಮಾಡಿಕೊಳ್ಳುವುದಕ್ಕೆ ವಿಳಂಬ ಮಾಡಿರುವುದು ಅವರು ಒಪ್ಪಿಕೊಂಡಿದ್ದ ಸಾಲು ಸಾಲು ಸಿನಿಮಾಗಳು. ಬೇರೆ ಯಾವುದೇ ಕಾರಣ ಅಲ್ಲ ಎಂದು ಅವರ ತಂದೆ ಸ್ವತಃ ರಾಘಣ್ಣ ಅವರೇ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು.