ಅನಿರುದ್ದ್ ಅವರಿಂದ ಗುಡ್ ನ್ಯೂಸ್, ಮತ್ತೆ ಧಾರಾವಾಹಿಯತ್ತ ಮರಳಿದ ನಟ

ಕನ್ನಡ ಕಿರುತೆರೆಯಲ್ಲಿ ಅದ್ದೂರಿ ಮೇಕಿಂಗ್ ಅಂತ ಏನಾದ್ರು ಅರಂಭ ಆಗಿದ್ದು ಅಂದ್ರೆ ಅದು ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಅಂತೇಳಿದ್ರೇ ಅತಿಶಯೋಕ್ತಿ ಆಗಲ್ಲ. ಹೌದು ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾದ ಜೊತೆ ಜೊತೆಯಲಿ ಧಾರಾವಾಹಿ ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡಿತು. ಅದೇ ರೀತಿಯಾಗಿ ಈ ಧಾರಾವಾಹಿ ಪ್ರಧಾನ ಪಾತ್ರಗಳಾದ ಆರ್ಯವರ್ಧನ್ ಮತ್ತು ಅನು ಸಿರಿ ಮನೆ ನಾಡಿನ ಮನೆ ಮನಗಳಲ್ಲಿ ಹೆಸರುವಾಸಿಯಾದರು. ಹೀಗೆ ನಿರಂತರವಾಗಿ ಮೂರು ವರ್ಷಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲಿ ನಂಬರ್ ಒನ್ ಧಾರಾವಾಹಿಯಾಗಿ ಅತಿ ಹೆಚ್ಚು ಟಿ.ಆರ್.ಪಿ ಪಡೆಯುವ ಮೂಲಕ ಸಾಕಷ್ಟು ಹೆಸರಾಯಿತು.

ಇದರ ನಡುವೆ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ನಟ ಅನಿರುದ್ದ್ ಅವರ ನಡವಳಿಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ ನಿರ್ದೇಶಕ ಆರೂರು ಜಗದೀಶ್ ಟೆಲಿವಿಶನ್ ಅಸೋಸಿಯೇಶನ್ ಗೆ ಹೋಗಿ ದೂರು ನೀಡಿ ಅನಿರುದ್ದ್ ಅವರನ್ನ ಎರಡು ವರ್ಷಗಳ ಕಾಲ ಯಾವುದೇ ವಾಹಿನಿಗಳಲ್ಲಿ ಕೆಲಸ ನೀಡಬಾರದು ಅನ್ನೋಷ್ಟರ ಮಟ್ಟಿಗೆ ನಿರ್ಧಾರ ಆಯ್ತು. ಆದರೆ ಈಗ ನಟ ಅನಿರುದ್ದ್ ಅವರಿಗೆ ಸೂರ್ಯವಂಶ ಎಂಬ ಧಾರಾವಾಹಿಯಲ್ಲಿ ನಟಿಸೋ ಅವಕಾಶ ಸಿಕ್ಕಿದೆ. ಈ ಸೂರ್ಯವಂಶ ಧಾರಾವಾಹಿಯನ್ನ ಎಸ್. ನಾರಾಯಣ್ ಅವರು ರಚಿಸಿ, ನಿ ರ್ದೇಶನ ಮಾಡುವುದರ ಜತೆಗೆ ತಾವೂ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನಟ ಅನಿರುದ್ದ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ತಾಯಿದ್ದೀನಿ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತೀ ಶೀಘ್ರದಲ್ಲಿ ಪ್ರಸಾರ ಆಗಲಿರುವ ಕಲಾ ಸಾಮ್ರಾಟ್ ಎಸ್.ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ಸೂರ್ಯವಂಶ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಸಂತಸಗೊಂಡು ಅಭಿನಂದನೆ ತಿಳಿಸಿದ್ದಾರೆ. ಇನ್ನೂ ಈ ಮೂಲಕ ನಟ ಅನಿರುದ್ದ್ ಅವರು ನಿಷೇಧ ಏರಿಕೆ ನಡುವೆಯೂ ಕಿರುತೆರೆಗೆ ಮರಳಿದ್ದಾರೆ.

Leave a Reply

%d bloggers like this: