ಅನಿಲ್ ಕುಂಬ್ಳೆ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸಂಬಂಧಿಯಂತೆ..! ಏನಾಗಬೇಕು ಗೊತ್ತಾ? ನೋಡಿ ಒಮ್ಮೆ

ಕ್ರಿಕೆಟ್ ಭಾರತ ತಂಡದ ಕನ್ನಡದ ಈ ಖ್ಯಾತ ಕ್ರಿಕೆಟಿಗ ಸ್ಯಾಂಡಲ್ ವುಡ್ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸಂಬಂಧಿಯಂತೆ..! ಸಾಮಾನ್ಯವಾಗಿ ಈ ಕ್ರಿಕೆಟ್ ಕ್ಷೇತ್ರದ ಸ್ಟಾರ್ ಆಟಗಾರಿಗೂ ಮತ್ತು ಸಿನಿಮಾ ಮಂದಿಗೂ ಒಂದು ರೀತಿಯ ಅವಿನಾಭಾವ ನಂಟಿದೆ ಎನ್ನಬಹುದು. ಅದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದೆ ಇವೆ. ಭಾರತೀಯ ಚಿತ್ರರಂಗದ ಅನೇಕ ತಾರೆಯರು ಕ್ರಿಕೆಟ್ ಆಟಗಾರರನ್ನು ಪ್ರೀತಿಸಿ ಮದುವೆ ಆಗಿರುವ, ಪ್ರೀತಿಸುತ್ತಿರುವ ಅನೇಕ ಜೋಡಿಗಳನ್ನು ಇಂದಿಗೂ ನಾವು ನೋಡಬಹುದು‌. ಇದೀಗ ಅಚ್ಚರಿಯ ಸುದ್ದಿ ಏನಪ್ಪಾ ಅಂದರೆ ಭಾರತ ಕ್ರಿಕೆಟ್ ತಂಡದ ಖ್ಯಾತ ಬೌಲರ್ ಆಗಿರುವ ಕರ್ನಾಟಕದ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಚಂದನವನದ ಯಜಮಾನ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸಂಬಂದಿ ಎಂಬ ವಿಚಾರ ನಿಜಕ್ಕೂ ಕೂಡ ಅಚ್ಚರಿಯ ಸುದ್ದಿಯಾಗಿದೆ ಎನ್ನಬಹುದು. ವಿಷ್ಣು ವರ್ಧನ್ ಮತ್ತು ಅನಿಲ್ ಕುಂಬ್ಳೆ ಅವರು ಒಂದೇ ಕಾಲೇಜಿನಲ್ಲಿ ಓದಿದವರಾಗಿದ್ದಾರೆ.

ಬೆಂಗಳೂರಿನ ಬಸವನಗುಡಿ ನ್ಯಾಶನಲ್ ವಿಧ್ಯಾಸಂಸ್ಥೆಯಲ್ಲಿ ಅಧ್ಯಾಯನ ಮಾಡಿರುವ ಇವರು ತಮ್ಮ ತಮ್ಮ ಕ್ಷೇತ್ರದಲ್ಲಿ ದಿಗ್ಗಜರಾಗಿ ಹೆಸರು ಮಾಡಿದ್ದಾರೆ. ಇತ್ತೀಚೆಗೆ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಮರಣ ಹೊಂದಿದಾಗ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಅಪ್ಪು ಅವರ ಅಂತಿಮ ದರ್ಶನಕ್ಕೆ ಬರುತ್ತಾರೆ. ಅಂತಿಮ ದರ್ಶನ ಪಡೆದು ಅಪ್ಪು ಅವರು ಸರಳತೆಯ ಶ್ರೀಮಂತ ಅವರು ನನ್ನ ಜೊತೆ ಉತ್ತಮ ಭಾಂದವ್ಯ ಹೊಂದಿದ್ದರು ಎಂದು ಭಾವುಕ ನುಡಿಗಳನ್ನ ನುಡಿಯುತ್ತಾರೆ. ಹೀಗೆ ಅನಿಲ್ ಕುಂಬ್ಳೆ ಅವರಿಗೂ ಸಿನಿಮಾ ಮಂದಿಗೂ ಇರುವ ನಂಟನ್ನ ತಿಳಿಯುವುದಾದರೆ ಕಿಚ್ಚ ಸುದೀಪ್ ಅವರೊಟ್ಟಿಗೆ ಉತ್ತಮ ಸ್ನೇಹ ಸಂಬಂಧವೊಂದಿರುವ ಕುಂಬ್ಳೆ ಕಿಚ್ಚನ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನ ನೀಡಿದ್ದರು‌. ಇದು ಭಾರಿ ಸುದ್ದಿಯಾಗಿತ್ತು.ಇದೀಗ ಹೊರ ಬಂದಿರುವ ಹೊಸ ಸುದ್ದಿ ಏನೆಂದರೆ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಡಾ.ವಿಷ್ಣುವರ್ಧನ್ ಅವರ ತಾಯಿಯ ಸಂಬಂಧಿಯಂತೆ.

ಈ ವಿಚಾರವನ್ನ ಅನಿಲ್ ಕುಂಬ್ಳೆ ಅವರ ಗೆಳೆಯ ತಿಳಿಸಿದ್ದಾರೆ. ಅನಿಲ್ ಕುಂಬ್ಳೆ ಇತ್ತೀಚೆಗೆ ಪಾರ್ಟಿವೊಂದರಲ್ಲಿ ಕನ್ನಡದ ಹಾಡೊಂದನ್ನ ಹಾಡಿರುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇನ್ನು ನಟ ಡಾ. ವಿಷ್ಣು ವರ್ಧನ್ ಅವರಿಗೂ ಮತ್ತು ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ನಡುವೆ ಯಾವ ರೀತಿಯ ಭಾಂಧವ್ಯ ಇತ್ತು ಅಂದರೆ ವಿಷ್ಣು ವರ್ಧನ್ ಅವರ ಮನೆಯ ಸದಸ್ಯರೆಲ್ಲರು ಕುಂಬ್ಳೆ ಅವರ ಬಗ್ಗೆ ಬ್ಯಾಟ್ ವೊಂದರ ಮೇಲೆ ಒಂದೊಂದು ಪ್ರೀತಿಯ ಸಾಲುಗಳನ್ನು ಬರೆದು ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದರಂತೆ. ವಿಶೇಷ ಅಂದರೆ ಈ ಬ್ಯಾಟ್ ಅನ್ನು ಸರ್ಪೈಸ್ ಗಿಫ್ಟ್ ಆಗಿ ನೀಡಿದ್ದು ಬೇರಾರು ಅಲ್ಲ ಸಾಹಸ ಸಿಂಹ ವಿಷ್ಣುವರ್ಧನ್ ಅವರಂತೆ. ಹೀಗೆ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ವಿಷ್ಣುವರ್ಧನ್ ಅವರ ಸಂಬಂಧ ಉತ್ತಮ ಭಾಂಧವ್ಯ ಹೊಂದಿದ್ದರು ಎಂಬುದು ತಿಳಿದು ಬಂದಿದೆ.

Leave a Reply

%d bloggers like this: