ಅನಿಲ್ ಕುಂಬ್ಳೆ ಪತ್ನಿ ಅವರ ಮೊದಲ ಗಂಡ ಯಾರು ಗೊತ್ತಾ? ವಿಚ್ಛೇದನವಾದ ಮಹಿಳೆಯನ್ನು ಕುಂಬ್ಳೆ ಎರಡನೇ ಮದುವೆಯಾಗಲು ಕಾರಣವೇನು ಗೊತ್ತಾ?.

ದಾಂಪತ್ಯ ಜೀವನವೇ ಬೇಡವೆಂದು ಸ್ವತಂತ್ರವಾಗಿ ಜೀವನ ಮಾಡುತ್ತಿದ್ದ ವಿಚ್ಚೇದನ ಪಡೆದ ಮಹಿಳೆಯ ಬದುಕಿಗೆ ದೀಪವಾದ ಖ್ಯಾತ ಕ್ರಿಕೆಟಿಗ..! ಜೀವನ ಯಾರನ್ನ ಯಾವ ದಿಕ್ಕಿನೆಡೆಗೆ ಕರೆದೊಯ್ಯುತ್ತದೆ ಎಂಬುದನ್ನ ಊಹಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಒಂದು ಭೂತಕಾಲ ಅನ್ನುವುದು ಇದ್ದೇ ಇರುತ್ತದೆ. ಕೆಲವರ ಬದುಕಲ್ಲಿ ನಡೆಯಬಾರದ ಘಟನೆ ನಡೆದು ಕಡುಕಷ್ಟ ನೋವನ್ನು ಅನುಭವಿಸಿರುತ್ತಾರೆ. ಇದರಿಂದ ಹೊರ ಬರಲು ಅವರು ವರ್ಷಾನುಗಟ್ಟಲೇ ಸಮಯ ತೆಗೆದುಕೊಂಡು ನೋವನ್ನ ಪಟ್ಟಿರುತ್ತಾರೆ. ಜೀವನದಲ್ಲಿ ನಡೆದ ಕೆಟ್ಟ ಘಟನೆಗಳನ್ನ ಮರೆತು ಮುಂದಿನ ಜೀವನವನ್ನು ಸಾಗಿಸುತ್ತಿರುವಾಗ ಹೊಸ ಅಧ್ಯಾಯ ಎಂಬಂತೆ ಜೀವನಕ್ಕೆ ಹೊಸ ವ್ಯಕ್ತಿ ಪ್ರವೇಶ ಪಡೆದು ಕತ್ತಲಲ್ಲಿದ್ದ ಅವರ ಬದುಕನ್ನ ಬೆಳಕಿನತ್ತ ಕೊಂಡ್ಯೊಬಹುದು.

ಅದೇ ರೀತಿಯಾಗಿ ಇಂಗ್ಲೀಷ್ ಪ್ರಾಧ್ಯಾಪಕಿಯಾಗಿದ್ದ ಚೇತನಾ ರಾಮತೀರ್ಥ ಎಂಬ ಒಂದು ಹೆಣ್ಣು ಮಗುವಿರುವ ವಿಚ್ಚೇದನ ಮಹಿಳೆಗೆ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ ಅವರು ಹೊಸ ಬದುಕನ್ನ ನೀಡುತ್ತಾರೆ. ಹೌದು ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ರಾಮತೀರ್ಥ ಅವರಿಗೆ ಅನಿಲ್ ಕುಂಬ್ಳೆ ಅವರನ್ನ ಮದುವೆ ಆಗುವ ಮುನ್ನ ಮದುವೆ ಆಗಿರುತ್ತದೆ. 1986 ರಲ್ಲಿ ಚೇತನಾ ಅವರು ಮೈಸೂರಿನಲ್ಲಿ ಕುಮಾರ್ ವಿ ಜಾಗೀದಾರ್ ಎಂಬುವರನ್ನ ಮದುವೆ ಆಗಿರುತ್ತಾರೆ. ಇವರಿಬ್ಬರ ಸುಂದರ ಸಾಂಸಾರಿಕ ಜೀವನಕ್ಕೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಜನಿಸುತ್ತದೆ.

ಹೀಗೆ ಇವರಿಬ್ಬರ ದಾಂಪತ್ಯ ಜೀವನ ಸುಗಮವಾಗಿ ಸಾಗಬೇಕಾದರೆ ಅನಗತ್ಯ ಕೆಲವು ಭಿನ್ನಾಭಿಪ್ರಾಯಗಳು ಮನಸ್ತಾಪಗಳು ಎದುರಾಗುತ್ತವೆ. ಇದರಿಂದ ಮನನೊಂದ ಚೇತನಾ ಅವರು ಕುಮಾರ್ ಅವರಿಂದ ವಿಚ್ಚೇದನ ಪಡೆಯುತ್ತಾರೆ. ಬಳಿಕ ದಂಪತಿಗಳು ತಮಗಾಗಿದ್ದ ಹೆಣ್ಣು ಮಗು ತಮ್ಮ ಬಳಿಯೇ ಇರಬೇಕು ಎಂದು ನ್ಯಾಯಾಲಯದಲ್ಲಿ ಮನವಿಯನ್ನ ಕೂಡ ಮಾಡುತ್ತಾರೆ. ನ್ಯಾಯಾಲಯ ಚೇತನಾ ಅವರ ಪರವಾಗಿ ತೀರ್ಪು ನೀಡಿ ಅರುಣಿ ತನ್ನ ತಾಯಿ ಚೇತನಾ ಅವರ ಬಳಿ ಇರುವಂತೆ ತಿಳಿಸುತ್ತದೆ. ಹೀಗಾಗಿ 1998 ರಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಇತಿ ಶ್ರೀ ಹಾಡಿದ ಚೇತನಾ ಅವರು ತನ್ನ ಮಗಳೊಂದಿಗೆ ಸ್ವತಂತ್ರ ಬದುಕು ನಡೆಸುತ್ತಿರುತ್ತಾರೆ.

ಜೀವನಕ್ಕಾಗಿ ಟ್ರಾವೆಲ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಚೇತನಾ ಅವರನ್ನ ಅನಿಲ್ ಕುಂಬ್ಳೆ ಅವರು ಆಕಸ್ಮಿಕವಾಗಿ ಭೇಟಿ ಮಾಡುತ್ತಾರೆ. ಆ ಭೇಟಿ ಪರಿಚಯವಾಗಿ ಸ್ನೇಹವಾಗಿ ಬೆಳೆದು ನಂತರ ಪ್ರೀತಿಯಾಗಿ ನಿಲ್ಲುತ್ತದೆ. ಅನಿಲ್ ಕುಂಬ್ಳೆ ಅವರು ಚೇತನಾ ಅವರ ಹಿನ್ನೆಲೆಯನ್ನ ತಿಳಿದು ನೇರವಾಗಿ ಅವರಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸುತ್ತಾರೆ. ಇದಕ್ಕೆ ಆರಂಭದಲ್ಲಿ ನಿರಾಕರಿಸಿದ ಚೇತನಾ ಅವರು ತದ ನಂತರ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ. ಅವರ ಸಮ್ಮತಿಯಂತೆ ಅನಿಲ್ ಕುಂಬ್ಳೆ ಅವರು 1999 ರಲ್ಲಿ ಚೇತನಾ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ.

ಚೇತನಾ ಅವರಿಗಿದ್ದ ಅರುಣಿ ಹೆಣ್ಣು ಮಗುವನ್ನು ಕೂಡ ತನ್ನ ಮಗಳಾಗಿ ಒಪ್ಪಿ ಅನಿಲ್ ಕುಂಬ್ಳೆ ಅವರು ಉತ್ತಮ ಬದುಕನ್ನ ನೀಡಿದ್ದಾರೆ. ಅದಲ್ಲದೆ ಅನಿಲ್ ಕುಂಬ್ಳೆ ಮತ್ತೂ ಚೇತನಾ ಅವರಿಗೂ ಕೂಡ ಇಬ್ಬರು ಮಕ್ಕಳಿದ್ದು ಇದೀಗ ಮೂವರು ಮಕ್ಕಳೊಂದಿಗೆ ಅನಿಲ್ ಕುಂಬ್ಳೆ ಮತ್ತು ಚೇತನಾ ದಂಪತಿಗಳು ಆದರ್ಶ ಜೀವನ ನಡೆಸುತ್ತಿದ್ದಾರೆ. ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: