ಅಂದು ಮೂವತ್ತು ಲಕ್ಷಕ್ಕೆ ಖರೀದಿಸಿದ್ದ ಆಸ್ತಿಯನ್ನು ಇಂದು 70 ಕೋಟಿಗೆ ಮಾರಿದ ದಕ್ಷಿಣ ಭಾರತದ ಖ್ಯಾತ ನಟ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಆಸ್ತಿಯನ್ನ ಮಾರಾಟ ಮಾಡುತ್ತಿದ್ದಾರಂತೆ. ಈ ಒಂದು ಸುದ್ದಿ ಇದೀಗ ತೆಲುಗು ಚಿತ್ರ ರಂಗದಲ್ಲಿ ಭಾರಿ ಸುದ್ದಿಯಾಗಿದೆ. ಹಾಗಿದ್ರೆ ಆಚಾರ್ಯ ಸಿನಿಮಾ ಸೋಲು ಅವರನ್ನ ಆಸ್ತಿ ಮಾರಾಟ ಮಾಡುವ ಮಟ್ಟಿಗೆ ತಳ್ಳಿತಾ ಎಂಬ ಪ್ರಶ್ನೆಯನ್ನ ಕೆಲವರು ಕೇಳುತ್ತಿದ್ದಾರೆ. ಅಸಲಿಗೆ ಮೆಗಾ ಸ್ಟಾರ್ ಚಿರಂಜೀವಿ ಅವರು ಯಾವುದೇ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಆಸ್ತಿಯನ್ನ ಮಾರಾಟ ಮಾಡುತ್ತಿಲ್ಲ. ಟಾಲಿವುಡ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅಂದ್ರೆ ಲೆಜೆಂಡರಿ ಆಕ್ಟರ್. ಸಿನಿಮಾವೊಂದಕ್ಕೆ ಇಪ್ಪತ್ತೈದರಿಂದ ಮೂವತ್ತು ಕೋಟಿ ಸಂಭಾವನೆ ಪಡೆಯುವ ಚಿರಂಜೀವಿ ಅವರು ಇಂದಿಗೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಇಟ್ಟಿದ್ದಾರೆ. 150ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಚಿರಂಜೀವಿ ಅವರು ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನ ಹೊಂದಿದ್ದಾರೆ.

ಹೈದರಬಾದಿನ ಫಿಲ್ಮ್ ನಗರದ ಮೇನ್ ರೋಡ್ ನಲ್ಲಿ ಅಂದಿನ ಕಾಲಘಟ್ಟದಲ್ಲಿ ಹತ್ತು ಲಕ್ಷ ರೂಗೆ ಫ್ಲ್ಯಾಟ್ ವೊಂದನ್ನ ಖರೀದಿ ಮಾಡಿರುತ್ತಾರೆ. ಇದೀಗ ಇದೇ ಪ್ರತಿಷ್ಟಿತ ಏರಿಯಾ ಭಾರಿ ಡಿಮ್ಯಾಂಡ್ ಹೊಂದಿದೆ. ಇದೇ ಸಂಧರ್ಭದಲ್ಲಿ ಇಲ್ಲಿನ ಮಾರುಕಟ್ಟೆ ಬೆಲೆ ಗಗನಕ್ಕೇರಿದೆ. ಚಿರಂಜೀವಿ ಅವರ ಈ ಫ್ಲ್ಯಾಟ್ ಮೂರು ಸಾವಿರ ಗಜ ವಿಸ್ತೀರ್ಣ ಒಳಗೊಂಡಿದೆಯಂತೆ. ಈ ಪ್ರಾಪರ್ಟಿಯನ್ನ ಇದೀಗ ಚಿರಂಜೀವಿ ಅವರು ಮಾರಾಟ ಮಾಡುತ್ತಿದ್ದಾರೆ. ಅದೂ ಕೂಡ ಬರೋಬ್ಬರಿ ಎಪ್ಪತ್ತು ಕೋಟಿಗೆ ಎಂಬದು ಅಚ್ಚರಿಯಾದಂತದ್ದು. ತೆಲುಗಿನ ಪ್ರಸಿದ್ದ ದಿನ ಪತ್ರಿಕೆಯ ಮಾಲೀಕರೊಬ್ಬರಿಗೆ ಚಿರಂಜೀವಿ ಅವರ ಈ ಪ್ರಾಪರ್ಟಿ ಮೇಲೆ ಮೊದಲಿನಿಂದಾನೂ ವಿಶೇಷವಾದ ಆಸಕ್ತಿ ಇತ್ತಂತೆ.

ಇಲ್ಲಿ ದಿನನಿತ್ಯ ವಾಹಿನಿಯೊಂದನ್ನ ಆರಂಭ ಮಾಡಬೇಕು ಎಂದು ಈ ದಿನ ಪತ್ರಿಕೆಯ ಮಾಲೀಕರು ಚಿರಂಜೀವಿ ಅವರ ಬಳಿ ಪ್ರಾಪರ್ಟಿ ನಮಗೆ ಕೊಡಿ ಎಂದು ಮನವಿ ಮಾಡಿದ್ದರಂತೆ. ಅನೇಕ ಬಾರಿ ಕೇಳಿದ್ದರಿಂದ ಚಿರಂಜೀವಿ ಅವರು ಕೊನೆಗೂ ಮನಸ್ಸು ಮಾಡಿ ಇದೀಗ ತಮ್ಮ ಈ ಅತ್ಯಮೂಲ್ಯವಾದ ಪ್ರಾಪರ್ಟಿಯನ್ನ ಎಪ್ಪತ್ತು ಕೋಟಿಗೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದಾರಂತೆ. ಹೈದರಬಾದಿನ ಫಿಲಂ ನಗರದಲ್ಲಿ ಯಾರ್ಡ್ ಎರಡು ಲಕ್ಷಕ್ಕೂ ಅಧಿಕ ಮೊತ್ತ ಇದೆ ಎಂದು ಹೇಳಲಾಗುತ್ತದೆ. ಆದರೆ ಚಿರಂಜೀವಿ ಅವರು ದಿನ ಪತ್ರಿಕೆಯ ಮಾಲೀಕರಿಗೆ ಕಡಿಮೆ ಬೆಲೆಯಲ್ಲಿ ಪ್ರಾಪರ್ಟಿ ಮಾಡಿದ್ದಾರಂತೆ. ಹಾಗಾಗಿ ಟಾಲಿವುಡ್ ನ ಒಂದಷ್ಟು ಮಂದಿಗೆ ಕುತೂಹಲ ಉಂಟಾಗಿದೆ. ಇನ್ನು ಚಿರಂಜೀವಿ ಅವರು ಸದ್ಯಕ್ಕೆ ಗಾಡ್ ಫಾದಯ್, ಬೋಳಶಂಕರ್, ವಾಲ್ತೇರು ವೀರಯ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Leave a Reply

%d bloggers like this: