ಅಂದು ಕೋಟ್ಯಾಧಿಪತಿಯಲ್ಲಿ 1 ಕೋಟಿ ಗೆದ್ದ ಹುಡುಗ ಈಗ IPS ಅಧಿಕಾರಿಯಾಗಿದ್ದಾರೆ! ಯಾರು ಗೊತ್ತಾ ಇವರು

ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಕೌನ್ ಬನೇಗಾ ಕರೌಡ್ ಪತಿ ಕ್ವಿಚ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಒಂದು ಕೋಟಿ ಗಳಿಸಿದ ಹುಡುಗ ಇಂದು ಐಪಿಎಸ್ ಅಧಿಕಾರಿಯಾಗಿದ್ದಾರೆ.ಹೌದು ಬಾಲಿವುಡ್ ಬಿಗ್ – ಬಿ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಮೂಡಿ ಬರುವ ಈ ಜನಪ್ರಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅನೇಕರು ಕೋಟಿ ಗೆದ್ದು ಕ್ಷಣಾರ್ಧದಲ್ಲಿ ಶ್ರೀಮಂತರಾಗಿದ್ದಾರೆ.ಈ ಕ್ವಿಜ್ ರಿಯಾಲಿಟಿ ಶೋ ದೇಶಾದ್ಯಂತ ಅಪಾರ ಜನ ಮೆಚ್ಚುಗೆ ಗಳಿಸಿತ್ತು.ಈ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕು ಎಂಬುದು ದೇಶದ ಅನೇಕರ ಕನಸಾಗಿದೆ.ಇಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮದೆರು ತಮ್ಮ ನೆಚ್ಚಿನ ಸ್ಟಾರ್ ನಟನನ್ನ ಕಣ್ತುಂಬಿಕೊಳ್ಳುವುದರ ಜೊತೆಗೆ ಲಕ್ಷ ಲಕ್ಷ ಹಣವನ್ನು ಕೂಡ ಗಳಿಸುವ ಅವಕಾಶ ಪಡೆದುಕೊಳ್ಳುತ್ತಾರೆ.ಅಂತೆಯೇ 2001 ರಲ್ಲಿ ಈ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಬಾಲಕನೊಬ್ಬ ಭಾಗವಹಿಸಿರುತ್ತಾನೆ.

ಆತನ ಹೆಸರು ರವಿ ಮೋಹನ್ ಶೈನಿ.ಇವರ ತಂದೆ ನೌಕಾಪಡೆಯ ನೌಕರರಾಗಿದ್ದರು.ರವಿ ಮೋಹನ್ ಶೈನಿ ಈ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅವನಿಗೆ ಕೇವಲ 14 ವರ್ಷ ವಯಸ್ಸಾಗಿತ್ತು.ಹಾಟ್ ಸೀಟ್ ನಲ್ಲಿ ಕೂತ ರವಿ ಮೋಹನ್ ಶೈನಿಗೆ ಬಚ್ಚನ್ ಅವರು ಕಾರ್ಯಕ್ರಮದ ನಿಯಮದಂತೆ ಹದಿ ನೈದು ಪ್ರಶ್ನೆಗಳನ್ನು ಕೇಳುತ್ತಾರೆ.ತನಗೆ ಕೇಳಿದ ಈ ಹದಿನೈದು ಪ್ರಶ್ನೆಗಳಿಗೂ ಉತ್ತರ ನೀಡಿದ ರವಿ ಮೋಹನ್ ಎಲ್ಲರೂ ಅಚ್ಚರಿ ಪಡುವಂತೆ ಒಂದು ಕೋಟಿ ಗೆದ್ದೇ ಬಿಡುತ್ತಾರೆ. ಆಗತಾನೇ ಹತ್ತನೇ ತರಗತಿ ಓದುತ್ತಿದ್ದ ಈ ರವಿ ಮೋಹನ್ ಶೈನಿ ಕೋಟಿ ಗೆದ್ದದ್ದು ಆಗ ದೇಶಾದ್ಯಂತ ಭಾರಿ ಸುದ್ದಿ ಯಾಗಿತ್ತು.ತದ ನಂತರ ಈ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಆಯೋಜಕರು ರವಿಮೋಹನ್ ಶೈನಿಗೆ ಹದಿನೆಂಟು ವರ್ಷ ತುಂಬಿದ ಬಳಿಕ ಎಲ್ಲಾ ರೀತಿಯ ತೆರಿಗೆ ಕಳೆದು ಬರೋಬ್ಬರಿ ಅರವತ್ತು ಲಕ್ಷ ರೂ.ಗಳನ್ನು ನೀಡಲಾಯಿತು.

ಇನ್ನು ರವಿ ಮೋಹನ್ ಶೈನಿ ಇದಾದ ಬಳಿಕ ತನ್ನ ವಿಧ್ಯಾಭ್ಯಾಸವನ್ನು ವಿಶಾಖಪಟ್ಟಣಂ ನಲ್ಲಿ ಪೂರೈಸಿಕೊಂಡು ಜೈಪುರ ದಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಾಯನ ಮಾಡುತ್ತಾರೆ.ಎಂಬಿಬಿಎಸ್ ಪದವಿ ಪಡೆದ ರವಿಮೋಹನ್ ಶೈನಿ ತಾನು ಕೂಡ ತಮ್ಮ ತಂದೆಯಂತೆ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಎಂದು ಸಿವಿಲ್ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.ಸಿವಿಲ್ ಪರೀಕ್ಷೆ ಬರೆದು ಇಂದು 461 ರ್ಯಾಂಕ್ ಪಡೆಯುತ್ತಾರೆ.ಪ್ರಸ್ತುತ ರವಿ ಮೋಹನ್ ಶೈನಿ ಅವರು ಪೋರ್ ಬಂದರ್ ನಲ್ಲಿ ಸೂಪರ್ ಡೆಂಟ್ ಪೋಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.