ಅಂದು ಹೋಟೆಲ್ ನಲ್ಲಿ ಸಪ್ಲೆಯರ್ ಕೆಲಸ, ಇಂದು ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್ ನಟ.. ರೋಚಕ ಕಥೆ

ಸ್ಯಾಂಡಲ್ ವುಡ್ ಈ ಸ್ಟಾರ್ ನಟ ಅಂದು ಚೆನ್ನೈನ ಹೋಟೆಲ್ ವೊಂದರಲ್ಲಿ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದ್ದು ಯಾಕೆ ಗೊತ್ತಾ..ಪ್ರತಿಯೊಬ್ಬ ವ್ಯಕ್ತಿಗೂ ತಾನು ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎಂಬ ಹಠ ಛಲ ಇದ್ದೇ ಇರುತ್ತದೆ.ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ಬೆಂಬಿಡದೇ ಬೆನ್ನತ್ತಿ ಹೋಗಿ ಅದಕ್ಕಾಗಿ ಹಗಲಿರುಳು ಶ್ರಮಿಸಿ ಸಾಧಿಸುತ್ತಾರೆ.ಅಂತೆಯೇ ಕನ್ನಡ ಚಿತ್ರರಂಗದ ಬ್ಲ್ಯಾಕ್ ಕೋಬ್ರಾ ಎಂದೇ ಹೆಸರಾದ ದುನಿಯಾ ವಿಜಯ್ ಕೂಡ ತನ್ನ ನೆಚ್ಚಿನ ಹೀರೋ ನೋಡಲು ಹೋದಾಗ ತನಗಾದ ಅವಮಾನಕ್ಕೆ ತಾನೂ ಕೂಡ ಒಬ್ಬ ಸ್ಟಾರ್ ನಟನಾಗಿಯೇ ನನ್ನ ಹೀರೋ ಭೇಟಿ ಮಾಡುತ್ತೇನೆ ಎಂದು ಛಲತೊಟ್ಟು ಬಂದರಂತೆ.ಹೌದು ನಟ ದುನಿಯಾ ವಿಜಯ್ ಮೂಲತಃ ಆನೇಕಲ್ ಗ್ರಾಮೀಣ ಭಾಗದವರು.

ಮೂಲತಃ ಕೃಷಿ ಕುಟುಂಬದವರಾದ ನಟ ವಿಜಯ್ ಅವರು ಬಾಲ್ಯದಿಂದಾನೇ ತಾನೊಬ್ಬ ಕಲಾವಿದನಾಗಬೇಕು ಎಂಬ ಕನಸ್ಸನ್ನು ಕಟ್ಟಿಕೊಂಡಿರುತ್ತಾರೆ.ಇವರ ತಂದೆ-ತಾಯಿಯಾದ ರುದ್ರಪ್ಪ ನಾರಯಣಮ್ಮ ಇತ್ಚೀಚೆಗಷ್ಟೇ ಇಬ್ಬರು ಕೂಡ ಅಗಲಿದ್ದಾರೆ.ವಿಜಯ್ ಅವರ ಪೂರ್ಣ ಹೆಸರು ವಿಜಯ್ ಕುಮಾರ್.ಪದವಿ ವ್ಯಾಸಂಗ ಮಾಡಿರುವ ವಿಜಯ್ ಕಾಲೇಜು ದಿನಗಳಿಂದಾನೂ ಬಾಡಿ ಬಿಲ್ಡಿಂಗ್ ಮಾಡುವ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.ತದ ನಂತರ ಹಲವು ದೇಹಧಾರ್ಡ್ಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಅನೇಕ ಕಡೆ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಾರೆ. ಬಳಿಕ ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲು ಅವಕಾಶ ಸಿಗುತ್ತದೆ.

ಹೀಗೆ ಸಿನಿಮಾದವರ ಸಂಪರ್ಕ ಬೆಳೆಯುತ್ತಾ ಸಿನಿಮಾಗಳಲ್ಲಿ ಫೈಟರ್ ಆಗಿ ಸಣ್ಣ ಪುಟ್ಟ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.ಇದಾದ ಬಳಿಕ ತಮ್ಮ ಗೆಳೆಯ ಸೂರಿ ಅವರೊಂದಿಗೆ ದುನಿಯಾ ಎಂಬ ಚಿತ್ರ ಮಾಡುತ್ತಾರೆ.ತಮ್ಮ ಅಕ್ಕ ಅಂಬುಜಾ ಅವರ ಪತಿ ಸಿದ್ದರಾಜು ಅವರಿಗೆ ತಿಳಿಸಿ ಈ ಚಿತ್ರಕ್ಕೆ ಬಂಡವಾಳ ಹೂಡಲು ಹೇಳಿ ಅವರಿಗೂ ಕೂಡ ಗಾಂಧಿನಗರದಲ್ಲಿ ನಿರ್ಮಾಪಕರಾಗಿ ನೆಲೆ ಕಂಡುಕೊಳ್ಳಲು ಅವಕಾಶ ಮಾಡುತ್ತಾರೆ.ಇದು ಈ ದುನಿಯಾ ಚಿತ್ರದ ಯಶಸ್ಸು ಇವರ ಕುಟುಂಬಕ್ಕೆ ಹೊಸದೊಂದು ತಿರುವನ್ನು ನೀಡುತ್ತದೆ.ದುನಿಯಾ ಸಿನಿಮಾ ಸೂಪರ್ ಹಿಟ್ ಆಗಿ ನೂರು ದಿನಗಳನ್ನು ಪೂರೈಸಿದ ನಂತರ ದುನಿಯಾ ವಿಜಯ್ ತನ್ನ ನೆಚ್ಚಿನ ನಟ ರಜಿನಿಕಾಂತ್ ಅವರನ್ನು ಭೇಟಿ ಆಗುತ್ತಾರೆ.

ಹೀರೋ ಆಗುವುದಕ್ಕೆ ಮುಂಚೆ ಇದೇ ವಿಜಯ್ ರಜನಿಕಾಂತ್ ಅವರನ್ನ ನೋಡಲು ಚೆನ್ನೈ ನಲ್ಲಿರುವ ಅವರ ನಿವಾಸಕ್ಕೆ ಹೋಗಿರುತ್ತಾರೆ.ಆಗ ರಜನಿಕಾಂತ್ ಅವರ ಗೇಟ್ ಸೆಕ್ಯೂರಿಟಿ ನಿನ್ನನ್ನು ಒಳಗೆ ಬಿಡಲು ಸಾಧ್ಯವಿಲ್ಲ. ರಜಿನಿಕಾಂತ್ ಸರ್ ಅವರು ಬಿಝಿ಼ ಇದ್ದಾರೆ ಎಂದು ವಾಪಸ್ ಕಳುಹಿಸಿದ್ದರಂತೆ.ಅಂದು ಬೆಂಗಳೂರಿನಿಂದ ರಜನಿಕಾಂತ್ ಅವರನ್ನ ನೋಡಲು ಚೆನ್ನೈಗೆ ಹೋಗಿದ್ದ ವಿಜಯ್ ಅವರು ವಾಪಸ್ ಬರಲು ಕೈಯಲಿದ್ದ ಕಾಸು ಕೂಡ ಖರ್ಚಾಗಿತ್ತಂತೆ.ಆ ಸಂಕಷ್ಟದ ಸಮಯದಲ್ಲಿ ಅನಿವಾರ್ಯವಾಗಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿ ವಿಜಯ್ ಬೆಂಗಳೂರಿಗೆ ಬರುತ್ತಾರಂತೆ.

ಇಂದು ದುನಿಯಾ ವಿಜಯ್ ಕನ್ನಡದ ರಜನಿಕಾಂತ್ ಅಂತಾನೇ ಕರೆಸಿಕೊಳ್ಳುತ್ತಾರೆ.ಇತ್ತೀಚೆಗೆ ಸಲಗ ಚಿತ್ರ ನಿರ್ದೇಶನ ಮಾಡುವ ಮೂಲಕ ನಟ ಮಾತ್ರ ಅಲ್ಲದೆ ನಿರ್ದೇಶಕನಾಗಿಯೂ ಕೂಡ ಯಶಸ್ವಿ ಆಗಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.