ಅಂದು 1800 ಅನಾಥ ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದು ಎಂದ ವಿಶಾಲ್ ಈಗ ಮಾಡಿದ್ದೇನು ಗೊತ್ತಾ! ನಿಜಕ್ಕೂ ಆಗಿದ್ದೇನು ಗೊತ್ತಾ

ಕರ್ನಾಟಕ ರತ್ನ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ. ಅವರು ನಡೆಸಿಕೊಂಡು ಬರುತ್ತಿದ್ದ ಸಮಾಜ ಸೇವೆಗಳು, ಅವರು ಮಾಡಿದ ದಾನ ಧರ್ಮಗಳು ಅವರ ಹೆಸರನ್ನು ನಾಡಿನಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದೆ. ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಸುದ್ದಿ ತಿಳಿದ ಇಡೀ ಭಾರತೀಯ ಚಿತ್ರರಂಗ ನಿಜಕ್ಕೂ ಕೂಡ ಶಾಕ್ ಆಗಿತ್ತು. ಆ ಒಂದು ಸುದ್ದಿ ಅಂದು ಇಡೀ ಕರುನಾಡಿನಲ್ಲಿ ಕತ್ತಲು ಆವರಿಸಿದಂತೆ ಮಾಡಿತ್ತು. ಕನ್ನಡ ಚಿತ್ರರಂಗದ ಕಿರೀಟದಂತಿದ್ದ ಅಪ್ಪು ಅವರು ಇನ್ನು ಇಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.ಅಂತೆಯೇ ತೆಲುಗು ಮತ್ತು ತಮಿಳು ಚಿತ್ರರಂಗದ ಬಹುತೇಕ ನಟರಿಗೆ ಇದು ನುಂಗಲಾರದ ಬಿಸಿತುಪ್ಪದ ವಿಷಯವಾಗಿತ್ತು. ತೆಲುಗಿನ ನಟ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ತಮ್ಮ ಸಿನಿಮಾಗಳ ಕಾರ್ಯಕ್ರಮದಲ್ಲಿ ಅಪ್ಪು ಅವರನ್ನ ನೆನೆದು ಮೌನಾಚಾರಣೆ ಮಾಡಿ ಅವರಿಗೆ ನಮನ ಸಲ್ಲಿಸಿ, ಅಪ್ಪು ಅವರ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇತ್ತ ತಮಿಳಿನ ನಟ ವಿಶಾಲ್ ಅವರು ತಮ್ಮ ಸಿನಿಮಾದ ಕಾರ್ಯಕ್ರಮದಲ್ಲಿ ಅಪಾರ ಮನನೊಂದು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿ,ಮೌನಾಚಾರಣೆ ಮಾಡಿ ಪುನೀತ್ ರಾಜ್ ಕುಮಾರ್ ಅವರು ನನ್ನ ಸೋದರ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರು ಮಾಡುತ್ತಿದ್ದಂತಹ ಸಮಾಜ ಸೇವೆಗಳನ್ನ ಕೇಳಿ ನಿಜಕ್ಕೂ ನನಗೆ ಅವರ ಮೇಲಿದ್ದ ಅಭಿಮಾನ ದುಪ್ಪಾಟ್ಟಾಗಿದೆ. ಅವರು 1800 ಮಕ್ಕಳ ವಿಧ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಮುಂದೆ ಆ ಜವಾಬ್ದಾರಿಯನ್ನು ಒಬ್ಬ ಸೋದರನಾಗಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಅದೇ ಮಾತನ್ನು ರಾಜ್ಯ ಸರ್ಕಾರ ಅಪ್ಪು ಅವರ ನೆನಪಿನಾರ್ಥವಾಗಿ ಆರೋಜನೆ ಮಾಡಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿಯೂ ಕೂಡ ಅದೇ ಮಾತನ್ನ ಮತ್ತೆ ಹೇಳಿದ್ದರು.

ಈ ವಿಚಾರವಾಗಿಯೇ ನಟ ವಿಶಾಲ್ ಅವರು ಬೆಂಗಳೂರಿನಲ್ಲಿ ಉಳಿದು ಅಪ್ಪು ಅವರ ಪತ್ನಿ ಅಶ್ವಿನಿ ಅವರ ಬಳಿ ಮಾತನಾಡಿದ್ದು ಶಕ್ತಿದಾಮ ಕೇಂದ್ರದ ಜವಾಬ್ದಾರಿ ನೋಡಿಕೊಳ್ಳಲು ಅನುಮತಿ ಕೇಳಿದ್ದಾರಂತೆ. ಈ ಬಗ್ಗೆ ಶಿವಣ್ಣ ಅವರ ಮನೆಗೂ ಭೇಟಿ ಕೊಟ್ಟು ಮಾತನಾಡಿ ಚರ್ಚಿಸಿರುವ ವಿಶಾಲ್ ಅವರಿಗೆ ರಾಜ್ ಕುಟುಂಬ ಸಕರಾತ್ಮಕವಾಗಿ ಸ್ಪಂದಿಸಿ ಕೊಂಚ ಸಮಯ ಕೊಡಿ ಈ ಬಗ್ಗೆ ಎಲ್ಲೆಲ್ಲಿ ಅಗತ್ಯವಿದೆ ಎಂಬುದನ್ನ ಪರಿಶೀಲಿಸಿ ನಿಮಗೆ ತಿಳಿಸುತ್ತೆವೆ ಎಂದಿದ್ದಾರಂತೆ. ನಟ ವಿಶಾಲ್ ಅವರು ಅಂದು ವೇದಿಕೆಯ ಮೇಲೆ ಏನು ನುಡಿದಿದ್ದರು ಆ ಮಾತನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವುದು ನಿಜಕ್ಕೂ ಕೂಡ ಪ್ರಶಂಸನೀಯವಾದದ್ದು.

Leave a Reply

%d bloggers like this: