ಅಂದಾಜಿಗಿಂತ ದುಪ್ಪಟ್ಟು ಹಣ ಗಳಿಕೆ, ತೆಲುಗಿನಲ್ಲಿ ಕಾಂತಾರ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು

ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ರಿಲೀಸ್ ಆದ ರಿಷಬ್ ಶೆಟ್ಟಿ ಮತ್ತು ಸಪ್ತಮಿಗೌಡ ಮುಖ್ಯ ಭೂಮಿಕೆಯ ಕಾಂತಾರ ಸಿನಿಮಾ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿತು. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ಪಾತ್ರದಲ್ಲಿ ಅಮೋಘ ನಟನೆ ಬಗ್ಗೆ ಅಲ್ಟಿಮೇಟ್ ಆಕ್ಟಿಂಗ್ ಎಂದು ಭಾರಿ ಹೊಗಳಿದ್ದರು. ಅದೇ ರೀತಿಯಾಗಿ ಕಾಂತಾರ ಸಿನಿಮಾವನ್ನ ಕೇವಲ ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲದೆ ಪರಭಾಷಿಕರು ಕೂಡ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯಕ್ಕೆ ಕಾಂತಾರ ಸಿನಿಮಾ ಬರೋಬ್ಬರಿ ನೂರು ಕೋಟಿ ಕ್ವಬ್ ಸೇರೋ ಹಂತದಲ್ಲಿದೆ. ಈ ಚಿತ್ರ ನೋಡಿದ ಪರಭಾಷಿಕರು ನಮ್ಮ ಭಾಷೆಗೂ ಕೂಡ ಡ‌ಬ್ ಮಾಡಿ ಎಂದು ಮನವಿ ಮಾಡಿದರು.

ಅದರಂತೆ ಹೊಂಬಾಳೆ ಫಿಲಂಸ್ ನವರು ಕಾಂತಾರ ಸಿನಿಮಾವನ್ನ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿಯೂ ಕೂಡ ಸರಿ ಸುಮಾರು ಎರಡೂವರೆ ಸಾವಿರ ಪರದೆಗಳಲ್ಲಿ ಮೊನ್ನೆ ತಾನೇ ಶುಕ್ರವಾರ ರಿಲೀಸ್ ಮಾಡಿದ್ದಾರೆ. ಕನ್ನಡ ಪ್ರೇಕ್ಷಕರು ತೋರಿದಂತೆಯೇ ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಪ್ರೇಕ್ಷಕರು ಕೂಡ ಕಾಂತಾರ ಸಿನಿಮಾಗೆ ಫಿಧಾ ಆಗಿದ್ದಾರೆ. ಹಿಂದಿಯಲ್ಲಿ ಮೊದಲನೇ ದಿನವೇ ಬರೋಬ್ಬರಿ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದೇ ರೀತಿಯಾಗಿ ಇತ್ತು ತೆಲುಗಿನಲ್ಲಿಯೂ ಕೂಡ ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರ ಮಾಲೀಕತ್ವದ ಎಎಂಬಿ ಸಿನಿ‌ಮಾಸ್ ನಲ್ಲಿಯೂ ಕಾಂತಾರ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ ಬರೋಬ್ಬರಿ 295 ಮತ್ತು 350 ರೂ ಗಳಷ್ಟಿರುತ್ತದೆ. ಈ ಎಎಂಬಿ ಸಿನಿಮಾಸ್ ಮಾಲ್ ನಲ್ಲಿ ಬರೋಬ್ಬರಿ ಆರು ಶೋಗಳನ್ನ ಪಡೆದಿರೋ ಕಾಂತಾರ ಸಿನಿಮಾ ಎಲ್ಲಾ ಶೋ ನಲ್ಲಿಯೂ ಕೂಡ ಪ್ರೇಕ್ಷಕರಿಂದ ತುಂಬಿದೆ.

ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ ತೆಲುಗು ಪ್ರೇಕ್ಷಕರು ಕಾಂತಾರ ಸಿನಿಮಾ ನೋಡಲು ಮುಂದಾಗಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬೊಬರು ಕೂಡ ರಿಷಬ್ ಶೆಟ್ಟಿ ಅವರನ್ನ ಕೊಂಡಾಡುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಅವರ ನಿರ್ಮಾಣದಲ್ಲಿ ಮೂಡಿಬಂದ ಕೆಜಿಎಫ್, ಕೆಜಿಎಫ್2 ಚಿತ್ರಕ್ಕೆ ಸಿಕ್ಕಂತಹ ಅಭೂತ ಪೂರ್ವ ಪ್ರತಿಕ್ರಿಯೆಯೇ ಈ ಕಾಂತಾರ ಸಿನಿಮಾಗೂ ಸಿಗುತ್ತಿದೆ. ಈ ಮೂಲಕ ಕನ್ನಡದ ಕಾಂತಾರ ಸಿನಿಮಾ ಮತ್ತೊಮ್ಮೆ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದೆ. ಮೂಲಗಳ ಪ್ರಕಾರ ಕಾಂತಾರ ಸಿನಿಮಾ ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಮುಂಬೈನಲ್ಲಿಯೂ ಕೂಡ ಜೋರಾಗಿಯೇ ಹವಾ ಕ್ರಿಯೆಟ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಹೆಸರಾಗಿದ್ದ ರಿಷಬ್ ಶೆಟ್ಟಿ ಈಗ ಕಾಂತಾರ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಸದ್ದು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾ ಇಂದು ದೇಶ ಮಾತ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂತಾರ ಚಿತ್ರ ತೆಲುಗು ಅಲ್ಲಿ ಮೊದಲ ದಿನವೇ ಬರೋಬ್ಬರಿ ನಾಲ್ಕು ಕೋಟಿ ಗಳಿಕೆ ಮಾಡಿದ್ದು ಎರಡನೇ ದಿನ ಇದು ದುಪ್ಪಟ್ಟಾಗುವ ನಿರೀಕ್ಷೆ ಇದೆ.

Leave a Reply

%d bloggers like this: