ಅಮ್ಮನಿಗಾಗಿ ಕೊನೆಗೂ ಸಿಹಿಸುದ್ದಿ ಹಂಚಿಕೊಂಡ ಅನುಶ್ರೀ

ಕಿರುತೆರೆಯ ಸ್ಟಾರ್ ಸುಪ್ರಸಿದ್ದ ನಿರೂಪಕಿ ಕಮ್ ನಟಿ ಇದೀಗ ಕೆಲವು ವರ್ಷಗಳ ನಂತರ ಸಿನಿಮಾ ಕ್ಷೇತ್ರದಲ್ಲಿ ಹೊಸ ಇನ್ನಿಂಗ್ಸ್ ಆರಂಭ ಮಾಡಲು ಸಿದ್ದವಾಗಿದ್ದಾರೆ. ಹೌದು ಕನ್ನಡ ಚಿತ್ರರಂಗ ಇದೀಗ ತನ್ನ ಮಾರುಕಟ್ಟೆಯನ್ನು ವಿಸ್ತರಿಸಸಿಕೊಂಡಿದೆ. ಕೆಲವು ವರ್ಷಗಳ ಹಿಂದೀಚೆಗೆ ಕನ್ನಡ ಸಿನಿಮಾಗಳು ಭಾಷೆಯ ಗಡಿದಾಟಿ ಸದ್ದು ಮಾಡುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಕೂಡ ಪರಭಾಷಾ ಸಿನಿಮಾರಂಗ ನಿಬ್ಬೆರಗಾಗುವಂತೆ ಸಿನಿಮಾ ನಿರ್ಮಾಣ ಆಗುತ್ತಿವೆ. ಅಂತೆಯೇ ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ತಯಾರಾಗುತ್ತಿವೆ. ಇದೀಗ ಹೊಸ ವಿಷಯ ಏನಪ್ಪಾ ಅಂದರೆ ತನ್ನ ನಿರೂಪಣೆ ಶೈಲಿ ಆಕರ್ಷಕ ಮುದ್ದಾದ ನಗುವಿನ ಮೂಲಕ ಕನ್ನಡ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಆಂಕರ್ ಕಮ್ ನಟಿ ಅನುಶ್ರೀ ಅವರ ಬಹು ವರ್ಷಗಳ ನಂತರ ಮತ್ತೆ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ. ಕನ್ನಡದ ಬೇಡಿಕೆಯ ನಿರೂಪಕಿಯಾಗಿ ಹೆಸರು ಮಾಡಿರುವ ಅನುಶ್ರೀ ಅವರು ರಿಯಾಲಿಟಿ ಶೋ, ಸಿನಿಮಾ ಪ್ರಮೋಶನ್ ಇವೆಂಟ್, ಇನ್ನಿತರ ಖಾಸಗಿ ಕಾರ್ಯಕ್ರಮ ಹೀಗೆ ನಿರೂಪಣಾ ಕ್ಷೇತ್ರದಲ್ಲಿ ತನ್ನದೇಯಾದ ಒಂದು ಸ್ಥಾನಮಾನ ಗಿಟ್ಟಿಸಿಕೊಂಡಿದ್ದಾರೆ.

ನಿರೂಪಣಾ ಕ್ಷೇತ್ರದ ಜೊತೆಯಲ್ಲಿ ಸಿನಿಮಾದಲ್ಲಿ ಕೂಡ ನಟಿಸಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹೌದು ಆಂಕರ್ ಕಮ್ ನಟಿ ಅನುಶ್ರೀ ಅವರು ಈಗಾಗಲೇ ಭೂಮಿ ತಾಯಿ, ಬೆಳ್ಳಿ ಕಿರಣ, ಬೆಂಕಿ ಪಟ್ನ, ರಿಂಗ್ ಮಾಸ್ಟರ್, ಉತ್ತಮ ವಿಲನ್, ಉಪ್ಪು ಉಳಿ ಖಾರ ಮತ್ತು ಪ್ರಜ್ವಲ್ ದೇವರಾಜ್ ಅಭಿನಯದ ಮಾದ ಮತ್ತು ಮನಸಿ ಸಿನಿಮಾದ ಟೈಟಲ್ ಟ್ರ್ಯಾಕ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಇದೀಗ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಇದೀಗ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಇರುವುದಕ್ಕೆ ಕಥೆಯಂತೆ. ಉತ್ತಮವಾದ ಕಥೆ ಅದರಲ್ಲಿ ತಾನು ನಟಿಸುವ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಹಾಗಾಗಿ ಅವಕಾಶ ಇದ್ದರು ಕೂಡ ಬಂದಂತಹ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿರಲಿಲ್ಲವಂತೆ.

ಆದರೆ ತಮ್ಮ ಮೊದಲ ನಿರ್ದೇಶನದ ಪ್ರಯತ್ನದಲ್ಲೇ ಮಮ್ಮಿ ಎಂಬ ಹಾರರ್ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ಲೋಹಿತ್ ಅವರ ತಂಡ ಹೇಳಿದ ಕಥೆ ನನಗೆ ತುಂಬಾ ಇಷ್ಟ ಆಯ್ತು. ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದ ಬಗ್ಗೆ ನನಗೆ ನಿರೀಕ್ಷೆ ಇದೆ ಎಂದು ಅನುಶ್ರೀ ಅವರು ತಿಳಿಸಿದ್ದಾರೆ. ಇನ್ನು ಮಮ್ಮಿ ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಭಾಕರನ್ ಎಂಬುವವರು ಈ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಸೈತಾನ್ ಎಂಬ ಶೀರ್ಷಿಕೆ ಇಟ್ಟಿದ್ದಾರಂತೆ. ನಿರ್ದೇಶಕರಾಗಿದ್ದ ಲೋಹಿತ್ ಎಚ್. ಅವರು ಈ ಸೈತಾನ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಸೈತಾನ್ ಸಿನಿಮಾದ ಶೂಟಿಂಗ್ ತಯಾರಿ ನಡೆಯುತ್ತಿದೆ. ನಿರೂಪಕಿ ಆಗಿ ಯಶಸ್ಸನ್ನು ಕಂಡಿರುವ ಅನುಶ್ರೀ ಅವರು ಈ ಸೈತಾನ್ ಚಿತ್ರದ ಮೂಲಕ ನಟಿಯಾಗಿ ನೆಲೆ ಕಂಡು ಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

%d bloggers like this: