ಅಮ್ಮನಿಗಾಗಿ ಹೊಸ ಮನೆ ಖರೀದಿಮಾಡಿದ ಪಾವಗಡ ಮಂಜ, ಆ ಮನೆ ಬೆಲೆ ಅಸಲಿಗೆ ಎಷ್ಟು ಗೊತ್ತಾ?

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಆದಂತಹ ಮಜಾಭಾರತ ಕಾಮಿಡಿ ಶೋ ಮೂಲಕ ಪರಿಚಯವಾಗಿ ತನ್ನ ಅತ್ಯಧ್ಭುತ ಹಾಸ್ಯ ಪ್ರಜ್ಞೆಯಿಂದಾಗಿ ನಾಡಿನಾದ್ಯಂತ ಮನೆಮಾತಾದ ನಟ ಮಂಜು ಪಾವಗಡ ಅಲಿಯಾಸ್ ಲ್ಯಾಗ್ ಮಂಜು ಇದೀಗ ರಾಜಧಾನಿಯಲ್ಲಿ ತನ್ನ ತಾಯಿಯ ಆಸೆಯಂತೆ ಸುಂದರ ಮನೆಯೊಂದನ್ನ ಖರೀದಿ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದೆ.
ಒಂದೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದ ಮಂಜು ಪಾವಗಡ ಯಾವಾಗ ಮಜಾಭಾರತ ರಿಯಾಲಿಟಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದರೋ ಅಂದಿನಿಂದ ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರಂತೆಯೇ ಮಂಜು ಪಾವಗಡ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ವಿಜೇತರಾಗಿಯೇ ಬಿಟ್ಟರು.

ಬೈಕ್ ರೈಡರ್ ಕೆ.ಪಿ.ಅರವಿಂದ್ ಅವರೊಂದಿಗೆ ಟಫ್ ಫೈಟ್ ಕೊಟ್ಟ ಮಂಜು ಪಾವಗಡ ಬರೋಬ್ಬರಿ ನಲವತ್ತೈದು ಲಕ್ಷ ಓಟ್ ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 8 ರ ಟ್ರೋಫಿ ಮುಡಿಗೇರಿಸಿಕೊಂಡು ಐವತ್ತು ಲಕ್ಷ ರೂ.ಗಳನ್ನು ತಮ್ಮದಾಗಿಸಿಕೊಂಡರು.ಬಿಗ್ ಬಾಸ್ ಸೀಸನ್ 8 ಅನ್ನು ಗೆದ್ದ ನಂತರ ದೊಡ್ಮನೆಯೊಳಗೆ ಉತ್ತಮ ಭಾಂಧವ್ಯ ಹೊಂದಿದ್ದ ದಿವ್ಯಾ ಸುರೇಶ್ ಅವರೊಟ್ಟಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಭಾರಿ ಸೌಂಡ್ ಮಾಡಿತ್ತು.ಇವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಕೂಡ ಆದವು.ಆದರೆ ಇವರಿಬ್ಬರ ಮದುವೆಯ ಬಗ್ಗೆ ಯಾವುದೇ ರೀತಿಯ ಹೆಚ್ಚಾಗಿ ಮಾಹಿತಿ ಹೊರ ಬರಲೇ ಇಲ್ಲ.ಇದೀಗ ಮಂಜು ಪಾವಗಡ ಅವರ ಬಗ್ಗೆ ಹೊಸ ಸುದ್ದಿ ಏನಪ್ಪಾ ಅಂದರೆ ಅವರು ಬಿಗ್ ಬಾಸ್ ಶೋ ಮೂಲಕ ಗೆದ್ದ ಹಣದಿಂದ ತಮ್ಮ ತಾಯಿಯ ಆಸೆಯಂತೆ ಸರಿ ಸುಮಾರು ಇಪ್ಪತ್ತೆರಡು ಲಕ್ಷ ಮೌಲ್ಯದ ಮನೆಯನ್ನು ಖರೀದಿ ಮಾಡಿದ್ದಾರೆ ಎಂದು ಸುದ್ದಿ ಹೊರ ಬಿದ್ದಿದೆ.

ಒಟ್ಟಾರೆಯಾಗಿ ಮಂಜು ಪಾವಗಡ ಮೂಲಭೂತ ಸೌಕರ್ಯಗಳಿಲ್ಲದೆ ಕುಗ್ರಾಮ ಆಗಿರುವ ಪಾವಗಡ ಊರಿಂದ ಬಂದು ತನ್ನ ಪ್ರತಿಭೆಯ ಮೂಲಕ ಇಂದು ಅಪಾರ ಜನಪ್ರಿಯತೆ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುವುದಕ್ಕೆ ಅವರ ಆಪ್ತ ಬಳಗ ಊರಿನವರಿಗೆ ಹೆಮ್ಮೆಯಾಗಿದೆಯಂತೆ.ಇನ್ನು ಮಂಜು ಪಾವಗಡ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕೂಡ ಹರಿದು ಬರುತ್ತಿವೆಯಂತೆ.ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಟ್ಟಿಗೆ ಅಭಿನಯಿಸಿರುವ ಮಂಜು ಪಾವಗಡ ಅವರನ್ನ ಕಂಡರೆ ಕಿಚ್ಚ ಸುದೀಪ್ ಅವರ ಕುಟುಂಬದವರೆಲ್ಲರಿಗೂ ಬಹಳ ಅಚ್ಚು ಮೆಚ್ಚಂತೆ.