ಅಮ್ಮನ ಜನ್ಮದಿನದಂದೇ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಮಾಡಿಕೊಂಡ ನಟ ಅಭಿಷೇಕ್ ಅಂಬರೀಶ್

ಇತ್ತೀಚೆಗೆ ನಟಿ ಮತ್ತು ಸಂಸದೆ ಆಗಿರುವ ಸುಮಲತಾ ಅವರು ಬೆಂಗಳೂರಿನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು. ಅದೇ ಸುಸಂಧರ್ಭದಲ್ಲಿ ತಾಯಿ ಸುಮಲತಾ ಅವರಿಗೆ ಸ್ಪೆಷಲ್ ಗಿಫ್ಟ್ ಕೊಡಬೇಕು ಎಂಬ ಉದ್ದೇಶದಿಂದ ನಟ ಅಭಿಷೇಕ್ ಅಂಬರೀಶ್ ಅವರು ತಮ್ಮ ಹೊಸ ಸಿನಿಮಾದ ಪೋಸ್ಟರ್ ವೊಂದನ್ನ ಲಾಂಚ್ ಮಾಡಿದ್ದಾರೆ. ಈ ಹೊಸ ಸಿನಿಮಾ ಅಭಿಷೇಕ್ ಅಂಬರೀಶ್ ಅವರಿಗೆ ನಾಲ್ಕನೇ ಸಿನಿಮಾವಾಗಿದೆ. ಮೈನಾ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅಮರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ರು. ಈ ಚಿತ್ರದ ಮೂಲಕ ತಂದೆಯಂತೆ ಅಭಿಷೇಕ್ ಅವರು ಕೂಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ನಿರೀಕ್ಷೆ ಮೂಡಿಸಿದ್ದರು. ಇದೀಗ ಅದರಂತೆ ಖ್ಯಾತ ನಿರ್ದೇಶಕ ಸೂರಿ ಅವರ ನಿರ್ದೇಶನದಲ್ಲಿ ಬ್ಯಾಡ್ ಮ್ಯಾನರ್ಸ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ.

ಇನ್ನೆನೋ ಕೆಲವೇ ದಿನಗಳಲ್ಲಿ ಈ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ. ಇದರ ಜೊತೆಗೆ ಕಾಳಿ ಅನ್ನೋ ಸಿನಿಮಾದಲ್ಲಿಯೂ ಕೂಡ ಅಭಿಷೇಕ್ ಅವರು ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇದು ಕೂಡ ಮಾಸ್ ಎಲಿಮೆಂಟ್ ಹೊಂದಿರುವ ಸಿನಿಮಾವಾಗಿದೆ. ಇದೀಗ ಮತ್ತೊಂದು ಮಾಸ್ ಸಿನಿಮಾದಲ್ಲಿ ಅಭಿಷೇಕ್ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅಯೋಗ್ಯ , ಮದಗಜ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣದ ಜವಬ್ದಾರಿಯನ್ನ ಧೀರ ರಾಕ್ ಲೈನ್ ವೆಂಕಟೇಶ್ ಅವರು ಹೊತ್ತಿದ್ದಾರೆ. ಈ ಹೊಸ ಚಿತ್ರದ ಪೋಸ್ಟರ್ ನಲ್ಲಿ ಅಭಿಷೇಕ್ ಅಂಬರೀಶ್ ಅವರು ವಾರಿಯರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಇನ್ನೂ ಕೂಡ ಶೀರ್ಷಿಕೆ ಇಟ್ಟಿಲ್ಲ. AA04 ಎಂಬ ಹೆಸರಿನಡಿ ಈ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಕಥೆ ಚಿತ್ರಕಥೆ ಸಿದ್ದವಾಗಿದ್ದು, ಚಿತ್ರತಂಡ ಶೂಟಿಂಗ್ ಹೊರಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ನಟ ಅಭಿಷೇಕ್ ಅಂಬರೀಶ್ ಅವರ ಈ ನಾಲ್ಕನೇ ಹೊಸ ಚಿತ್ರದ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದೆ.