ಅಮಿರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಮೊದಲ ದಿನ ಗಳಿಸಿದ್ದೆಷ್ಟು ಗೊತ್ತೇ

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಇದೇ ಆಗಸ್ಟ್ 11ರಂದು ವರ್ಲ್ಡ್ ವೈಡ್ ರಿಲೀಸ್ ಆಗಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಸಿನಿಮಾದ ಕಲೆಕ್ಷನ್ ಕಂಡು ಇಡೀ ಬಾಲಿವುಡ್ ರಂಗವೇ ಅಚ್ಚರಿ ವ್ಯಕ್ತಪಡಿಸಿದೆ. ಕಾರಣ ಈ ಲಾಲ್ ಸಿಂಗ್ ಚಡ್ಡಾ ಚಿತ್ರದ ಕಲೆಕ್ಷನ್ ಅಮೀರ್ ಖಾನ್ ಅವರ ಕಳೆದ ಒಂದು ದಶಕಗಳಲ್ಲಿ ತೆರೆಕಂಡ ಅವರ ಸಿನಿಮಾಗಳು ಮಾಡಿದ ಕಲೆಕ್ಷನ್ ಪೈಕಿ ಈ ಚಿತ್ರದ ಕಲೆಕ್ಷನ್ ಅತ್ಯಂತ ಕಡಿಮೆ ಆಗಿದೆ ಅಂತೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಫಾರೆಸ್ಟ್ ಗಂಪ್ ಚಿತ್ರದ ರೀಮೇಕ್ ಸಿನಿಮಾ. ಈ ಚಿತ್ರಕ್ಕಾಗಿ ಅಮೀರ್ ಖಾನ್ ಅವರು ಪ್ಯಾರಾಮೌಂಟ್ ಪಿಕ್ಚರ್ಸ್ ಜೊತೆಗೂಡಿ ಬರೋಬ್ಬರಿ 180 ಕೋಟಿಗೂ ಅಧಿಕ ವೆಚ್ಚ ಮಾಡಿ ಈ ಚಿತ್ರ ನಿರ್ಮಾಣ ಮಾಡಿದ್ದರು. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ಅದರಲ್ಲಿಯೂ ಕೂಡ ನಮ್ಮ ದಕ್ಷಿಣ ಭಾರತದ ಸಿನಿಮಾಗಳ ಕಲೆಕ್ಷನ್ ಅನ್ನು ಟಚ್ ಕೂಡ ಮಾಡೋಕ್ಕಾಗಿಲ್ಲ ಅನ್ನೋದು ಅಚ್ಚರಿ.

ಅವರ ಹಿಂದಿನ ಸಿನಿಮಾಗಳು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ರೂಲ್ ಮಾಡಿದ್ದವಂತವು. ಅವರ ದಂಗಲ್ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡಿತ್ತು. ಅದರ ಜೊತೆಗೆ ಅಮೀರ್ ಖಾನ್ ಅವರ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಫ್ಲಾಪ್ ಆಗಿದ್ರು ಕೂಡ ಬಾಕ್ಸ್ ಆಫೀಸ್ ನಲ್ಲಿ ಮೊದಲನೇ ದಿನವೇ 52 ಕೋಟಿಯಷ್ಟು ಕಲೆಕ್ಷನ್ ಮಾಡಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ನಮ್ಮ ಕೆಜಿಎಫ್2, ಆರ್.ಆರ್.ಆರ್ ಸಿನಿಮಾದಷ್ಟು ಕಲೆಕ್ಷನ್ ಮಾಡಿಲ್ಲ. ಕೆಜಿಎಫ್2 ಸಿನಿಮಾ ಮೊದಲನೇ ದಿನ 53.95 ಕೋಟಿ, ಆರ್.ಆರ್.ಆರ್ ಸಿನಿಮಾ ಮೊದಲನೇ ದಿನ 20.7 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕೇವಲ 12 ಕೋಟಿ ರುಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ಇದು ಅಮೀರ್ ಖಾನ್ ಅವರ ಅತ್ಯಂತ ಕಡಿಮೆ ಗಳಿಕೆ ಮಾಡಿದ ಚಿತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಚಿತ್ರದ ನಟ ಅಮೀರ್ ಖಾನ್ ಮತ್ತು ನಾಯಕಿ ಕರೀನಾ ಕಪೂರ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಎಂದು ಹೇಳಲಾಗುತ್ತಿದೆ.