ಅಮಿರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಇಲ್ಲಿಯ ತನಕ ಆದ ನಷ್ಟ ಎಷ್ಟು ಗೊತ್ತಾ

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಡವಿದ್ದು ಎಲ್ಲಿ. ಇದೀಗ ಲಾಲ್ ಸಿಂಗ್ ಚಡ್ಡಾ ಸಿನಿಮಾದ ವಿತರಕರು ನಿರ್ಮಾಪಕರ ಬಳಿ ನಷ್ಟ ತುಂಬಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಅದೃಷ್ಟ ಕೈ ಕೊಟ್ಟಿರುವ ಅಮೀರ್ ಖಾನ್ ಗೆ ಇದೀಗ ತಲೆ ಬಿಸಿ ಹೆಚ್ಚಾಗಿದೆ. ಹೌದು ನಟ ಅಮೀರ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು‌. ಇದಕ್ಕೆ ಪ್ರಮುಖ ಕಾರಣ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಸೂಪರ್ ಹಿಟ್ ಆಸ್ಕರ್ ಅವಾರ್ಡ್ ಪಡೆದಿರುವ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಆಗಿತ್ತು. ಹಾಗಾಗಿ ಅಮೀರ್ ಖಾನ್ ಕೂಡ ಲಾಲ್ ಸಿಂಗ್ ಚಡ್ಡಾ ಸಿನಿಮಾ ಒಳ್ಳೇ ಸಿನಿಮಾ ಆಗುತ್ತೆ. ಉತ್ತಮ ಗಳಿಕೆ ಮಾಡುತ್ತದೆ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಯಾಕೋ ಏನೋ ಅಮೀರ್ ಖಾನ್ ಅವರಿಗೆ.

ಅವರು ಕೆಲವು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಮುಳುವಾಗಿ ಭಾರತದಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಬಾಯ್ಕಟ್ ಬಿದ್ದ ಪರಿಣಾಮ ಚಿತ್ರದ ಕಲೆಕ್ಷನ್ ಗಣನೀಯವಾಗಿ ಕೆಳಗಿಳಿದಿದೆ. ಇನ್ನೊಂದು ಕಡೆ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬರೋಬ್ಬರಿ 180 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾ ವಾರದಲ್ಲಿ ಕೇವಲ 37 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಅಮೀರ್ ಖಾನ್ ಅವರ ಸಿನಿಮಾಗಳು ವಾರಂತ್ಯದ ವೇಳೆಗೆ ನೂರಾರು ಕೋಟಿ ಬಾಚುತ್ತಿದ್ದವು. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. ವಯಾಕಾಮ್18 ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಅಮೀರ್ ಖಾನ್ ಅವರು ಕೂಡ ಬಂಡವಾಳ ಹೂಡಿಕೆದ್ದಾರೆ.

ಹಾಗಾಗಿ ನಟ ಅಮೀರ್ ಖಾನ್ ಅವರು ಈ ಚಿತ್ರದಲ್ಲಿ ನಟಿಸುವುದಕ್ಕಾಗಿ ಯಾವುದೇ ರೀತಿಯ ಸಂಭಾವನೆ ಪಡೆದುಕೊಂಡಿಲ್ಲ. ಆದರೆ ಇತ್ತೀಚೆಗೆ ಕೇಳಿ ಬರುತ್ತಿರುವ ಸುದ್ದಿ ಏನಪ್ಪಾ ಅಂದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ವಿತರಕರು ಸಿನಿಮಾದಿಂದ ನಷ್ಟ ಆಗಿದೆ. ಹಾಗಾಗಿ ನಮಗೆ ನಷ್ಟ ತುಂಬಿಕೊಡಿ ಎಂದು ನಿರ್ಮಾಪಕರಿಗೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿತ್ತು. ಆದರೆ ವಯಾಕಾಮ್ 18ಪ್ರೊಡಕ್ಷನ್ ಸಂಸ್ಥೆ ಹೇಳುವ ಪ್ರಕಾರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನೂ ಯಾವುದೇ ವಿತರಕರು ಹಕ್ಕನ್ನ ಪಡೆದಿರುವುದಿಲ್ಲ. ಈಗ ಕೇಳಿ ಬಂದಿರುವ ಸುದ್ದಿ ಸುಳ್ಳು ಸುದ್ದಿ. ನಾವೇ ಈ ಚಿತ್ರವನ್ನು ವಿತರಣೆ ಮಾಡಿದ್ದೇವೆ. ಹಾಗಾಗಿ ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡಬೇಡಿ. ಚಿತ್ರ ಇನ್ನೂ ಕೂಡ ಥಿಯೇಟರ್ ಗಳಲ್ಲಿ ಪ್ರದರ್ಶನ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

%d bloggers like this: