ಅಮೇರಿಕಾದಲ್ಲಿ ಮನೆ ಕೆಲಸ ಮಾಡುತ್ತಿದ್ದಾಳೆ 150 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ ಖ್ಯಾತ ನಟಿ

ಬಣ್ಣದ ಲೋಕ ಬಣ್ಣ ಮಾಸಿದ ಮೇಲೆ ಭಯಂಕರವಾಗಿರುತ್ತದೆ ಎಂಬುದಕ್ಕೆ ತೆಲುಗಿನ ಈ ಖ್ಯಾತ ನಟಿ ಸಾಕ್ಷಿಯಾಗಿದ್ದಾರೆ.ಒಂದು ಕಾಲದಲ್ಲಿ ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದ ಈ ನಟಿ ಅಮೇರಿಕಾ ದೇಶದಲ್ಲಿ ಇನ್ನೊಬ್ಬರ ಮನೆ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತದೆ.ಹೌದು ಸಿನಿಮಾ ಬೆಳ್ಳಿ ತೆರೆಯಲ್ಲಿ ಬಣ್ಣ ಬಣ್ಣಗಳಿಂದ ರಂಜಿತವಾದುದ್ದಲ್ಲ. ಪರದೆಯ ಮೇಲೆ ಮಿಂಚುವ ಅನೇಕ ಕಲಾವಿದರ ಬದುಕು ವೈಯಕ್ತಿಕವಾಗಿ ಬಲು ದುಸ್ತರವಾಗಿರುತ್ತದೆ.ಪ್ರತಿಭೆಗೆ ತಕ್ಕಂತೆ ಉತ್ತಮ ಅವಕಾಶಗಳು ಸಿಕ್ಕಿ,ಅದೃಷ್ಟವೊಂದು ಜೊತೆಗಿದ್ದರೆ ಅವರ ಬದುಕಿನ ಶೈಲಿ ನಿಜ್ಕಕೂ ಕೂಡ ಅದ್ಭುತವಾಗಿರುತ್ತದೆ.ಆದರೆ ಬದುಕು ನಿರೀಕ್ಷೆಗೂ ಮೀರಿದ್ದು.ಜೀವನ ಯಾವಾಗ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನ ತಿಳಿಯಲಾಗುವುದಿಲ್ಲ.ಅದರಂತೆ ತೆಲುಗಿನಲ್ಲಿ ಬರೋಬ್ಬರಿ ನೂರೈವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಮಿಂಚಿದ ನಟಿ ಕೃಷ್ಣವೇಣಿ ಅವರು ಕೂಡ ತಮ್ಮಲ್ಲಿದ್ದ ಕಲಾ ಪ್ರತಿಭೆಯ ಮೂಲಕ ಅಪಾರ ಜನಪ್ರಸಿದ್ದತೆ ಪಡೆದಿದ್ದರು.

ನಟಿ ಕೃಷ್ಣವೇಣಿ ಅವರು ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಅಂದಿನ ಪ್ರಸಿದ್ದ ನಿರ್ದೇಶಕರಾದ ರಾಮಚಂದ್ರ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ.ಆದರೆ ದುರಾದೃಷ್ಟವಶಾತ್ ಈ ಜೋಡಿಗೆ ಯಾರ ಕಣ್ಣು ಬಿತ್ತೋ ಏನೋ ಕೃಷ್ಣವೇಣಿ ಅವರ ಪತಿಯಾದ ರಾಮಚಂದ್ರ ಅವರು ಅಪಘಾತಕ್ಕೀಡಾಗುತ್ತಾರೆ.ಇದು ಕೃಷ್ಣವೇಣಿ ಅವರಿಗೆ ಸಂಪೂರ್ಣವಾಗಿ ಬದುಕು ಅಂತಿಮಗೊಂಡ ಭಾವ ಉಂಟಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಸಿನಿ ಪ್ರೇಕ್ಷಕರನ್ನ ತೆರೆಯ ಮೇಲೆ ರಂಜಿಸುತ್ತಿದ್ದ ಈ ಹಾಸ್ಯ ನಟಿಯ ಬದುಕು ಶೋಕಸಾಗರದಲ್ಲಿ ಮುಳುಗುತ್ತದೆ.ದಿನ ಕಳೆದಂತೆ ಬದುಕಿನಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಒಂದೆಡೆ ಗಂಡನ ಸಾವು ಮತ್ತೊಂದೆಡೆ ಚಿಕ್ಕ ಹೆಣ್ಣು ಮಗು ಭವಿಷ್ಯ,ಇನ್ನೊಂದೆಡೆ ಸಿನಿಮಾಗಳಲ್ಲಿ ಅವಕಾಶ ಕೊರತೆ.ಇದೆಲ್ಲದರ ನಡುವೆ ಬದುಕಬೇಕು ಎಂಬ ಹಠ ಅವರಲ್ಲಿತ್ತು.

ಹೀಗಾಗಿ ದೃತಿಗೆಡದೇ ಅಮೇರಿಕಾದಲ್ಲಿ ಒಬ್ಬರ ಮನೆಯಲ್ಲಿ ಬರೋಬ್ಬರಿ ಆರು ವರ್ಷಗಳ ಕಾಲ ಮನೆಗೆಲಸ ಮಾಡುತ್ತಾರೆ.ತದ ನಂತರ ಆ ಆರು ವರ್ಷಗಳಲ್ಲಿ ತಾನು ದುಡಿದ ಉಳಿಸಿದ ಹಣದಲ್ಲಿ ಮನೆಯನ್ನು ಕಟ್ಟಿಕೊಂಡು ಹೈದರಾಬಾದ್ ನಲ್ಲಿ ಜೀವನ ಸಾಗಿಸುತ್ತಿದ್ದಾರೆ.ಇವರ ಸೋದರಿಯರು ಇಂದಿಗೂ ಕೂಡ ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ನಟಿಸುತ್ತಾದ್ದಾರೆ. ಒಟ್ಟಾರೆಯಾಗಿ ಸಂಕಷ್ಟದ ದಿನಗಳನ್ನು ಎದುರಿಸಿ ಎದೆಗುಂದದೆ ದುಡಿದು ಬದುಕುಬೇಕು ಎಂಬ ಈ ಖ್ಯಾತ ನಟಯ ಆತ್ಮವಿಶ್ವಾಸ ಬದುಕಿನ ಉತ್ಸಾಹ ನಿಜಕ್ಕೂ ಕೂಡ ಇಂದಿನ ಯುವ ಜನರಿಗೆ ಮಾದರಿಯಾಗಿದೆ. ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.