ಅಮೇರಿಕಾದ ದೊಡ್ಡ ಕಂಪನಿಗೆ ವೈಸ್ ಪ್ರೆಸಿಡೆಂಟ್ ಆದ ಕನ್ನಡ ಖ್ಯಾತ ನಟಿ, ನಮ್ಮ ಹೆಮ್ಮೆ

ಸಾಮಾನ್ಯವಾಗಿ ಬಣ್ಣದ ಲೋಕದಲ್ಲಿ ಮಿಂಚುವ ಸ್ಟಾರ್ ನಟ-ನಟಿಯರು ಒಂದು ಅವಧಿವರೆಗೆ ತಮ್ಮ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದು ಜನಮಾನಸದಲ್ಲಿ ಮೆರೆಯುತ್ತಾರೆ.ನಟರು ಎಂದಿಗೂ ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಂಡು ನಿರಂತರವಾಗಿ ಕಲಾ ಸೇವೆಯಲ್ಲಿ ತೊಡಗಿಕೊಳ್ಳಬಹುದು.ಆದರೆ ಚಿತ್ರರಂಗದಲ್ಲಿ ಉತ್ತುಂಗ ಮಟ್ಟಕ್ಕೆ ಏರಿ ಸಾಧಕಿ ಆಗಿದ್ದ ಸಂಧರ್ಭದಲ್ಲಿ ಅನೇಕ ನಟಿಯರು ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದು ಬಣ್ಣದ ಜಗತ್ತಿನಿಂದ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ.ತದ ನಂತರ ಗಂಡ ಮನೆ ಮಕ್ಕಳು ಸಂಸಾರ ಎಂದು ಸಂಪೂರ್ಣವಾಗಿ ಬಿಝಿ಼ ಆಗುತ್ತಾರೆ.ಅಂತಹ ಸ್ಟಾರ್ ನಟಿಯರಲ್ಲಿ ನಟಿ ಮಾಧವಿ ಕೂಡ ಒಬ್ಬರು. ಭಾರತೀಯ ಚಿತ್ರರಂಗದ ಎಂಭತ್ತು-ತೊಂಭತ್ತು ದಶಕದಲ್ಲಿ ಪಂಚ ಭಾಷೆ ತಾರೆಯಾಗಿ ಮಿಂಚಿದ ನಟಿ ಮಾಧವಿ ಇಂದು ಅಮೇರಿಕಾ ಕಂಪನಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೌದು ತಮಿಳು,ತೆಲುಗು,ಮಲೆಯಾಳಂ,ಹಿಂದಿ ಸೇರಿದಂತೆ ಕನ್ನಡ ಚಿತ್ರಗಳಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ ನಟಿ ಮಾಧವಿ ಅಂದಿನ ಬೇಡಿಕೆಯ ನಟಿಯಾಗಿ ಮಿಂಚಿದ್ದಾರೆ.ಕನ್ನಡದಲ್ಲಿ ಡಾ.ರಾಜ್ ಕುಮಾರ್,ವಿಷ್ಣು ವರ್ಧನ್,ಅಂಬರೀಶ್ ಅಂತಹ ದಿಗ್ಗಜ ನಟರೊಂದಿಗೆ ನಟಿ ಮಾಧವಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ನಕ್ಷತ್ರ ತಾರೆಯಾಗಿ ಯಶಸ್ಸು ಕಂಡ ಮಾಧವಿ ಉದ್ಯಮಿ ರಾಘವ ಶರ್ಮಾ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು. ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟ ಮಾಧವಿ ತಮ್ಮ ಬಾಳ ಸಂಗಾತಿ ರಾಘವ ಶರ್ಮಾ ಅವರೊಟ್ಟಿಗೆ ಅಮೇರಿಕಾಗೆ ತೆರಳುತ್ತಾರೆ. ಬಳಿಕ ಸಿನಿಮಾ ಲೋಕದಿಂದ ದೂರ ಉಳಿದ ಮಾಧವಿ ತಮ್ಮ ಪತಿ ರಾಘವ ಶರ್ಮಾ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ. ಇನ್ನು ಮೂವರು ಮುದ್ದು ಹೆಣ್ಣು ಮಕ್ಕಳ ತಾಯಿಯಾಗಿರುವ ಮಾಧವಿ ತಮ್ಮಂತೆಯೇ ತಮ್ಮ ಮಕ್ಕಳಿಗೂ ಕೂಡ ಭರತನಾಟ್ಯ,ನಮ್ಮ ಭಾರತೀಯ ಸಂಸ್ಕೃತಿಯ ಪರಂಪರೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ನಟಿ ಮಾಧವಿ ಅವರ ಪತಿ ರಾಘವ್ ಶರ್ಮಾ ಅವರು ಸಾವಿರಾರು ಕೋಟಿ ವಹಿವಾಟು ನಡೆಸುವ ಫಾರ್ಮಸಿಟಿಕಲ್ ಉದ್ಯಮವನ್ನು ನಡೆಸುತ್ತಾರೆ.ಈ ಬೃಹತ್ ಉದ್ಯಮವನ್ನ ತಮ್ಮ ಪತಿಯೊಬ್ಬರೇ ನಿರ್ವಹಿಸಲು ಕಷ್ಟ ಸಾಧ್ಯವೆಂದು ಅರಿತ ಮಾಧವಿ ತಮ್ಮ ಪತಿಯ ಜೊತೆಗೆ ತಾವೂ ಕೂಡ ಉದ್ಯಮ ನಿರ್ವಹಣೆಯಲ್ಲಿ ತೊಡಗಿಕೊಳ್ಳುತ್ತಾರೆ.ಸದ್ಯಕ್ಕೆ ಈ ಫಾರ್ಮಸಿಟಿಕಲ್ ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಟಿ ಮಾಧವಿ ಅಂತರಾಷ್ಟ್ರೀಯ ವ್ಯವಹಾರಗಳಿಗೆ ವಿಮಾನವನ್ನು ಬಳಸುತ್ತಾರೆ.ಅಚ್ಚರಿ ಅಂದರೆ ತಮ್ಮದೇಯಾದ ಸ್ವಂತ ವಿಮಾನ ಹೊಂದಿರುವ ನಟಿ ಮಾಧವಿ ಆ ವಿಮಾನವನ್ನು ತಾವೇ ಸ್ವತಃ ಚಲಾಯಿಸುತ್ತಾರೆ.ಹೀಗೆ ನಟಿ ಮಾಧವಿ ಅವರು ತಮ್ಮ ತುಂಬು ಕುಟುಂಬದೊಂದಿಗೆ ಸುಂದರ ಬದುಕನ್ನ ಕಟ್ಟಿಕೊಂಡು ಜೀವನದ ಎಲ್ಲಾ ಸ್ಥರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.