ಅಂಬರೀಷ್ ಗೆ ಕೊಡದೆ ಪುನೀತ್ ಗೆ ಕರ್ನಾಟಕ ರತ್ನ! ಸುಮಲತಾ ಹೇಳಿದ್ದೆ ಬೇರೆ, ನೋಡಿ ಒಮ್ಮೆ

ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಕಲಿಯುಗ ಕರ್ಣ ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಳೆದ ವಾರವಷ್ಟೇ ನಡೆಯಿತು. ಜೆಪಿ ನಗರದ ನಿವಾಸ ಬಳಿ ಅಂಬಿ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟಿ,ಸಂಸದೆ ಸುಮಲತಾ ಅಂಬರೀಶ್ ಅವರೇ ಸ್ವತಃ ಅಭಿಮಾನಿಗಳಿಗೆ ಊಟ ಬಡಿಸಿದ್ದರು. ಈ ಅಂಬಿ ಅವರ ಪುಣ್ಯ ಸ್ಮರಣೆಯ ದಿನದಂದೇ ಅವರ ಅಭಿಮಾನಿಗಳು ಅಂಬರೀಶ್ ಅವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭ ಮಾಡಿದರು. ಇದು ಒಂದಷ್ಟು ಮಂದಿಗೆ ಅಸಮಾಧನಾ ಕೂಡ ಆಯಿತು. ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಒಂದು ತಿಂಗಳಾಗುವುದಯಲ್ಲೇ ಈ ರೀತಿಯಾಗಿ ನಟರ ನಡುವೆ ವೈಮನಸ್ಸು ಮೂಡಿಸುವಂತಹ ಕಾರ್ಯ ಚಟುವಟಿಕೆಗಳು ಕೇಳಿ ಬರುತ್ತಿರುವುದು ಸೂಕ್ತ ಸಮಂಜಸ ಅಲ್ಲ ಎಂಬುದು ಬಹುತೇಕರ ಅಭಿಪ್ರಾಯ.

ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಟಿ ಸಂಸದೆ ಸುಮಲತಾ ಅಂಬರೀಶ್ ಅವರೇ ಖುದ್ಧಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಂಬರೀಶ್ ಅಭಿಮಾನಿಗಳಿಗೆ ಪತ್ರ ಒಂದನ್ನು ಬರೆದು ಪೋಸ್ಟ್ ಮಾಡುತ್ತಾರೆ. ಅಭಿಮಾನಿಗಳಲ್ಲಿ ನನ್ನ ಮನವಿ ಇತ್ತೀಚೆಗಷ್ಟೇ ನಮ್ಮ ಮನೆ ಮಗನಂತಿದ್ದ ಅಪ್ಪು ನಮ್ಮನ್ನಗಲಿ ನಾವು ಮತ್ತು ಇಡೀ ನಾಡು ನೋವಿನಲ್ಲಿದೆ. ಅಂಬರೀಶ್ ಅವರಿಗೆ ನೀವು ಕರ್ನಾಟಕ ರತ್ನ ಪ್ರಶಸ್ತಿ ಸಿಗಬೇಕು ಎಂದು ನೀವು ಅಪೇಕ್ಷೆ ಪಡುತ್ತಿರುವುದಕ್ಕೆ ನನಗೆ ಆಕ್ಷೇಪ ಇಲ್ಲ. ಆದರೆ ಅಂಬರೀಷ್ ಅವರು ಯಾವತ್ತೂ ಕೂಡ ಪ್ರಶಸ್ತಿ,ಅಧಿಕಾರ ಬಯಸಿದವರಲ್ಲ‌.

ಅವರು ಮಾಡಿರುವ ಕಲಾ ಸೇವೆಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ನೀವು ಅಪಾರ ಗೌರವ ಅಭಿಮಾನ ತೋರಿದ್ದೀರಿ. ಅದು ನಮಗೆ ಸಾಕಾಗುವಷ್ಟು. ನಿಮ್ಮ ಪ್ರೀತಿ, ಅಭಿಮಾನ ಹೀಗೆ ಇರಲಿ. ಆದರೆ ಅಪ್ಪು ಬಿಟ್ಟು ಹೋಗಿರುವ ಇಂತಹ ಸಮಯದಲ್ಲಿ ನೀವು ಈ ರೀತಿ ಪ್ರಶಸ್ತಿ ವಿಚಾರ ಮಾತನಾಡಿ ಅಂಬರೀಶ್ ಅವರಿಗೆ ಕೆಟ್ಟ ಹೆಸರು ತರಬೇಡಿ. ಇದು ನಿಜಕ್ಕೂ ಸೂಕ್ತ ಸಮಯ ಸಂಧರ್ಭವಲ್ಲ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Leave a Reply

%d bloggers like this: