ಅಂಬಾನಿ ಬಳಿಯಿರುವ 500 ಕಾರುಗಳ ಡ್ರೈವರ್ ಆಗೋಕೂ ಕೊಡಬೇಕಾಗುತ್ತೆ ಈ ಕಠಿಣಾತಿ ಕಠಿಣ ಪರೀಕ್ಷೆಗಳು, ಸಂಬಳ ಲಕ್ಷಗಳಲ್ಲಿ

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಈ ವ್ಯಕ್ತಿಯ ಬಳಿ ಚಾಲಕನಾಗಿ ಕೆಲಸ ಮಾಡಬೇಕೆಂದರೆ ಹಲವು ಪರೀಕ್ಷೆಗಳನ್ನ ಎದುರಿಸಬೇಕಾಗುತ್ತದೆ.ಅರೇ, ಚಾಲಕ ಕೆಲಸಕ್ಕೆ ಅದೆಂತಹ ಪರೀಕ್ಷೆ.ಚಾಲಕ ಎನಿಸಿಕೊಳ್ಳಬೇಕೆಂದರೆ ವಾಹನ ಚಾಲನಾ ಪರವನಾಗಿ ಮತ್ತು ಅವರಿಗೆ ವಾಹನ ಚಾಲನೆಯ ಕೌಶಲ್ಯ ಇದ್ದರೆ ಸಾಕಲ್ಲವೇ.ಹೌದು ವಾಹನ ಚಾಲನೆ ಮಾಡುವ ಕೌಶಲ್ಯ,ಅದಕ್ಕೆ ತಕ್ಕಂತೆ ಅರ್ಹತಾ ಪರೀಕ್ಷೆಯ ಪರವಾನಾಗಿ ಇದ್ದರೆ ವಾಹನಗಳನ್ನು ಚಾಲನೆ ಮಾಡಬಹುದಾಗಿರುತ್ತದೆ.ಇದು ಸಾಮಾನ್ಯ ಟೂರಿಸ್ಟ್,ಸಣ್ಣ ಪುಟ್ಟ, ಮಧ್ಯಮ ಉದ್ಯಮಿಗಳ ಬಳಿ ಕಾರು ಚಲಾಯಿಸುವುದಕ್ಕೆ ಮತ್ತು ಇತರೆ ಕ್ಷೇತ್ರಗಳಲ್ಲಿ ಕಾರು ಚಲಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ ಭಾರತ ಮತ್ತು ಏಷ್ಯಾದಲ್ಲೇ ಶ್ರೀಮಂತ ವ್ಯಕ್ತಯಾಗಿರುವ ಮುಖೇಶ್ ಅಂಬಾನಿ ಅವರಿಗೆ ಕಾರು ಚಾಲಕನಾಗಿ ಕೆಲಸ ಮಾಡಬೇಕೆಂದರೆ ಅವರಿಗೆ ವಿವಿಧ ರೀತಿಯ ಪರೀಕ್ಷೆಗಳನ್ನ ನಡೆಸಲಾಗುತ್ತದೆಯಂತೆ.

ಮುಂಬೈ ನಗರದಲ್ಲಿ ಐದು ಸಾವಿರ ಕೋಟಿ ಬೆಲೆಯ ಆಂಟಿಲಿಯಾ ಎಂಬ 27 ಅಂತಸ್ತಿನ ಬೃಹತ್ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿರುವ ಅಂಬಾನಿ ಅವರ ಜೀವನ ಶೈಲಿ,ಕಾರ್ಯ ಚಟುವಟಿಕೆಗಳು ತುಂಬಾ ಶಿಸ್ತು ಬದ್ದವಾಗಿರುತ್ತವೆ.ಅವರ ಜೊತೆ ಕೆಲಸ ಮಾಡುವ ಸಹೋದ್ಯೋಗಿಗಳು ಕೂಡ ಅಷ್ಟೇ ಶಿಸ್ತು ಬದ್ದವಾಗಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.ಅದು ಅವರ ಮನೆಯ ಸೆಕ್ಯೂರಿಟಿ ಇಂದ ಹಿಡಿದು ಅವರ ಪರ್ಸನಲ್ ಸೆಕ್ರೆಟರಿವರೆಗೆ ಎಲ್ಲರೂ ಕೂಡ ತುಂಬಾ ಜಾಗರೂಕರಾಗಿ ಕೆಲಸ ಮಾಡಬೇಕಾಗಿರುತ್ತದೆ.ಮಾಡುತ್ತಾರೆ ಕೂಡ.ಅದರಂತೆ ಅವರಿಗೆ ಚಾಲಕನಾಗಿ ಕೆಲಸ ಮಾಡಬೇಕಾದರೆ ಚಾಲಕನಿಗೆ ಎಲ್ಲಾ ರೀತಿಯ ಐಷಾರಾಮಿ ವಾಹನಗಳ ಚಾಲನೆಯಲ್ಲಿ ನೈಪುಣ್ಯತೆ ಹೊಂದಿರಬೇಕು.ಅವರಿಗೆ ಬುದ್ದಿ ಕೌಶಲ್ಯ ಸಾಮರ್ಥ್ಯದ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ.

ಐನೂರಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವ ಮುಖೇಶ್ ಅಂಬಾನಿಯವರು ತಮ್ಮ ಚಾಲಕನಿಗೆ ಬರೋಬ್ಬರಿಗೆ ಎರಡು ಲಕ್ಷ ರೂ.ಗಳನ್ನು ವೇತನವಾಗಿ ನೀಡುತ್ತಾರೆ.ಚಾಲಕರನ್ನ ಆಯ್ಕೆ ಮಾಡಿಕೊಳ್ಳಬೇಕಾದರೇ ಅವರು ಸರ್ಕಾರಿ ಸಂಸ್ಥೆಗಳಲ್ಲಿ ಟೆಂಡರ್ ಕರೆಯುವಂತೆ ಚಾಲಕರಾಗೆ ಆಹ್ವಾನ ಕೊಟ್ಟು ಅವರಲ್ಲಿ ಅನೇಕ ಪರೀಕ್ಷೆಗಳಿಟ್ಟು,ಅದರಲ್ಲಿ ಉತ್ತೀರ್ಣರಾದವರನ್ನ ಮಾತ್ರ ಅಯ್ಕೆ ಮಾಡಲಾಗುತ್ತದೆ.ಈ ಪರೀಕ್ಷೆ ಪ್ರಕ್ರಿಯೆಯಲ್ಲಿ ಬಹುತೇಕರು ಅನುತ್ತೀರ್ಣರಾಗುತ್ತಾರಂತೆ.ಅಷ್ಟರ ಮಟ್ಟಿಗೆ ವಿವಿಧ ರೀತಿಯ ಕಠಿಣ ಪರೀಕ್ಷೆಗಳನ್ನ ನೀಡಲಾಗುತ್ತದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Leave a Reply

%d bloggers like this: