ಆಲಿಯಾ ಭಟ್ ಮುಟ್ಟಿದ್ದೆಲ್ಲಾ ಚಿನ್ನ, ಆಸ್ಕರ್ ರೇಸ್ ನಲ್ಲಿ ಎರಡೆರಡು ಚಿತ್ರಗಳು

ಬಾಲಿವುಡ್ ಈ ಎಂಗ್ ಅಂಡ್ ಎನರ್ಜೆಟಿಕ್ ನಟಿಯ ಒಂದಲ್ಲ ಎರಡು ಸಿನಿಮಾಗಳು ಆಸ್ಕರ್ ಪಟ್ಟಿಯಲ್ಲಿವೆ. ಯಾವ ಸಿನಿಮಾಗೆ ಆಸ್ಕರ್ ಅವಾರ್ಡ್ ಸಿಗಬಹುದು ಎಂದು ಎಲ್ಲರೂ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಹಾಗಾದರೆ ಯಾರು ಈ ನಟಿ. ಯಾವ ಎರಡು ಸಿನಿಮಾಗಳಿಗೆ ಆಸ್ಕರ್ ಅವಾರ್ಡ್ ಲಭಿಸುವ ಅವಕಾಶ ಇದೆ ಅನ್ನೋದನ್ನ ನೋಡೋಣ. ಹೌದು ಬಾಲಿವುಡ್ ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಆಲಿಯಾ ಭಟ್ ನಟಿಸಿರುವ ಎರಡು ಸಿನಿಮಾಗಳು ಆಸ್ಕರ್ ಅವಾರ್ಡ್ ಗೆ ನಾಮಿನೇಟ್ ಆಗುವ ಚಾನ್ಸ್ ಇದೆ. ನಟಿ ಆಲಿಯಾ ಭಟ್ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕನ ಪುತ್ರಿ. ಹಾಗಂತ ನಟಿ ಆಲಿಯಾ ಭಟ್ ಅವರು ತಂದೆಯ ಕೃಪಾಕಟಾಕ್ಷದಿಂದ ಬಣ್ಣದ ಲೋಕದಲ್ಲಿ ಅವಕಾಶ ಗಿಟ್ಟಿಸಿಕೊಂಡವರಲ್ಲ. ತನ್ನ ಸ್ವಯಂ ಪ್ರತಿಭೆಯಿಂದ ಬೆಳೆದು ಇಂದು ಬಾಲಿವುಡ್ ರಂಗದಲ್ಲಿ ಆಳುತ್ತಿದ್ದಾರೆ.

ತಮ್ಮ ನಟನಾ ವೃತ್ತಿಯಲ್ಲಿ ಆಲಿಯಾ ಭಟ್ ಅವರು ಎಷ್ಟು ಬದ್ದತೆ ಇಟ್ಟುಕೊಂಡಿದ್ದಾರೆ ಅಂದರೆ ಸದ್ಯಕ್ಕೆ ಅವರು ಗರ್ಭಿಣಿಯಾಗಿದ್ದಾರೆ. ಆದರೂ ಕೂಡ ಈ ನಟಿ ಬ್ರಹ್ಮಾಸ್ತ್ರ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಬದ್ದತೆ ಕಂಡು ಬಾಲಿವುಡ್ ನ ಅನೇಕ ಸ್ಟಾರ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಕಾರ್ಯ ವೈಖರಿ, ಬದ್ದತೆಗೆ ಒಂದೊಳ್ಳೆ ಪ್ರತಿಫಲ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ. ಹೌದು ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಆಸ್ಕರ್ ಅವಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭಾರಿ ಪೈಪೋಟಿ ಮಾಡುತ್ತಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಅವರ ನಟನೆಗೆ ದೇಶ ಮಾತ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಸಿನಿಮಾದ ನಂತರ ಆಲಿಯಾ ಭಟ್ ಅವರು ನಟಿಸಿದ ರಾಜಮೌಳಿ ನಿರ್ದೇಶನದ ಥ್ರಿಬಲ್ ಆರ್ ಸಿನಿಮಾ ಆಸ್ಕರ್ ಅವಾರ್ಡ್ ರೇಸ್ ನಲ್ಲಿದೆ. ಥ್ರಿಬರ್ ಆರ್ ಸಿನಿಮಾದಲ್ಲಿಯೂ ಕೂಡ ಆಲಿಯಾ ಭಟ್ ನಟಿಸಿದ್ದಾರೆ‌. ಇದೀಗ ಆಸ್ಕರ್ ಅವಾರ್ಡ್ ನಲ್ಲಿ ಗಂಗೂಬಾಯಿ ಕಥಿಯಾವಾಡಿ ಮತ್ತು ಥ್ರಿಬಲ್ ಆರ್ ಸಿನಿಮಾಗಳು ಆಸ್ಕರ್ ಅವಾರ್ಡ್ ರೇಸ್ ನಲ್ಲಿ ಇರೋದ್ರಿಂದ ಯಾವ ಸಿನಿಮಾಗೆ ಪ್ರಶಸ್ತಿ ಲಭಿಸಿದರು ಕೂಡ ಆಲಿಯಾ ಭಟ್ ಅವರಿಗೆ ಒಂದೊಳ್ಳೆ ಹೆಸರು ಬರುತ್ತದೆ. ಆಲಿಯಾ ಭಟ್ ನಟಿಸಿದ ಎರಡೂ ಸಿನಿಮಾಗಳು ಆಸ್ಕರ್ ಅವಾರ್ಡ್ ನಲ್ಲಿ ಪೈಪೋಟಿ ಮಾಡುತ್ತಿರೋದು ಅವರಿಗೆ ಖುಷಿ ತಂದಿದೆ. ಸದ್ಯಕ್ಕೆ ಆಲಿಯಾ ಭಟ್ ಅವರು ಗರ್ಭಿಣಿಯಾಗಿದ್ದು, ಅವರ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ದತೆ ನಡೆಸುತ್ತಿದೆ.

Leave a Reply

%d bloggers like this: