ಅಜಯ್ ದೇವಗನ್ ಅವರಿಗೆ ಜಯ ತಂದು ಕೊಟ್ಟ ದೃಶ್ಯಂ2 ಚಿತ್ರ, ಎರಡು ವಾರದ ಗಳಿಕೆ ಎಷ್ಟು

ಬಾಲಿವುಡ್ ನಲ್ಲಿ ಅಜಯ್ ದೇವಗನ್ ಅಭಿನಯದ ದೃಶ್ಯಂ2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಈ ಚಿತ್ರ ಇತ್ತೀಚೆಗೆ ಹಿಂದಿಯ ಯಾವ ಸಿನಿಮಾಗಳು ಮಾಡದಷ್ಟು ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಹೌದು ಬಾಲಿವುಡ್ ನಲ್ಲಿ ಇತ್ತೀಚೆಗೆ ಯಾವ ಸ್ಟಾರ್ ಚಿತ್ರಗಳು ಕೂಡಾ ಜನ ಮೆಚ್ಚುಗೆ ಗಳಿಸಿ ಬಾಕ್ಸ್ ಅಫೀಸ್ ನಲ್ಲಿ ನಿರೀಕ್ಷೆಮಟ್ಟ ಯಶಸ್ಸು ಗಳಿಸಿಲ್ಲ. ಆದರೆ ಇದೀಗ ಕಳೆದ ವಾರ ಅಂದರೆ ನವೆಂಬರ್ 18 ರಂದು ರಿಲೀಸ್ ಆದ ದೃಶ್ಯಂ2 ಸಿನಿಮಾ ಬಾಲಿವುಡ್ ಬಾಕ್ಸ್ ಅಫೀಸ್ ನಲ್ಲಿ ಬರೋಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡಿದೆ. ಅಜಯ್ ದೇವಗನ್ ಮುಖ್ಯ ಭೂಮಿಕೆಯಲ್ಲಿ ಮೂಡಿಬಂದಿರೋ ಈ ದೃಶ್ಯಂ2 ಸಿನಿಮಾ 2015 ರಲ್ಲಿ ತೆರೆಕಂಡಿದ್ದ ಕ್ರೈಮ್ ಥ್ರಿಲ್ಲರ್ ದೃಶ್ಯಂ ಸಿನಿಮಾದ ಮುಂದುವರಿದ ಭಾಗವಾಗಿದೆ. ಇನ್ನು ಈ ದೃಶ್ಯಂ ಸಿನಿಮಾದ ಮೂಲ ಮಲೆಯಾಳಂ ನ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅವರ ದೃಶ್ಯ ಸಿನಿಮಾದ್ದು. ಈ ಚಿತ್ರ ಪಂಚಭಾಷೆಗಳಿಗೆ ರೀಮೇಕ್ ಆಗಿತ್ತು.

ಇನ್ನು ಇದೀಗ ಅಭಿಷೇಕ್ ಪತಾಕ್ ಆಕ್ಷನ್ ಕಟ್ ಹೇಳಿರೋ ದೃಶ್ಯಂ2 ಸಿನಿಮಾ ಅಜಯ್ ದೇವಗನ್ ಅವರಿಗೆ ಬ್ರೇಕ್ ನೀಡಿದೆ. ಈ ಚಿತ್ರಕ್ಕೆ ವಿಯಾಕಾಮ್ 18 ಸ್ಟೂಡಿಯೋ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕುಮಾರ ಮಂಗತ್ ಪಾಠಕ್, ಕ್ರಿಶನ್ ಕುಮಾರ್ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಕಳೆದ ನವೆಂಬರ್ 18 ರಂದು ರಿಲೀಸ್ ಆದ ದೃಶ್ಯಂ2 ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ ನೂರು ಕೋಟಿ ಕ್ಲಬ್ ಸೇರೋ ಮೂಲಕ ಸದ್ದು ಮಾಡುತ್ತಿದೆ. ಎರಡೇ ವಾರದಲ್ಲಿ ಇನ್ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ದೃಶ್ಯಂ2 ಸಿನಿಮಾ ನೋಡಿದ ಪ್ರೇಕ್ಷಕರು ಅಜಯ್ ದೇವಗನ್ ಅವರ ನಟನೆಗೆ ಫಿಧಾ ಆಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಾರಾಗಣದಲ್ಲಿ ಅಕ್ಷಯ್ ಖನ್ನಾ, ಇಶಿತಾ ದತ್ತಾ ಶ್ರೀಯಾ ಶರಣ್, ಟಬು, ರಜತ್ ಕಪೂರ್ ಸೇರಿದಂತೆ ಖ್ಯಾತ ನಾಮ ಕಲಾವಿದರು ತಮ್ಮ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ಗಲ್ಲಾ ಪೆಟ್ಟಿಗೆ ಖಾಲಿ ಹೊಡೆಯುತ್ತಿದ್ದ ಈ ದಿನಗಳಲ್ಲಿ ಅಜಯ್ ದೇವಗನ್ ಅವರ ಈ ದೃಶ್ಯಂ2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ.