ಅಗಲಿ ಹೋಗಿದ್ದರೂ ಸಹ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ ಸಂಚಾರಿ ವಿಜಯ್ ಅವರು

ಕನ್ನಡ ಚಿತ್ರರಂಗದ ರಾಷ್ಟ್ರ ಪ್ರಶಸ್ತಿ ವಿಜೇತ ದಿವಂಗತ ನಟ ಸಂಚಾರಿ ವಿಜಯ್ ಅವರು ನಟಿಸಿದ ಕೊನೆಯ ಚಿತ್ರವಾಗಿರುವ ತಲೆದಂಡ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಹೌದು ಇತ್ತೀಚೆಗೆ ಅರವತ್ತೆಂಟನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕಳೆದ ವರ್ಷ 2021 ರಲ್ಲಿ ಬಿಡುಗಡೆಯಾದ ಭಾರತದ ಎಲ್ಲಾ ಸಿನಿಮಾಗಳ ಪೈಕಿ ಆಯ್ಕೆಯಾದ ಅತ್ಯುತ್ತಮ ಸಿನಿಮಾಗಳಿಗೆ ವಿವಿಧ ವಿಭಾಗಗಳಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾಗಳ ಪೈಕಿ ಕನ್ನಡದಲ್ಲಿ ಪವನ್ ಒಡೆಯರ್ ಅವರ ಡೊಳ್ಳು ಮತ್ತು ಸಂಚಾರಿ ವಿಜಯ್ ಅವರು ನಟಿಸಿದ ತಲೆದಂಡ ಚಿತ್ರಗಳಿಗೂ ಕೂಡ ರಾಷ್ಟ್ರ ಪ್ರಶಸ್ತಿ ದೊರೆತಿದೆ.

ದಿವಂಗತ ನಟ ಸಂಚಾರಿ ವಿಜಯ್ ಅವರು ಈಗಾಗಲೇ ಕಳೆದ ಬಾರಿ ನಿರ್ದೇಶಕ ಲಿಂಗದೇವರು ಅವರು ನಿರ್ದೇಶನ ಮಾಡಿದ ಅವನಲ್ಲ ಅವಳು ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಎಂದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದೀಗ ಮತ್ತೆ 68ನೇ ರಾಷ್ಟ್ರ ಪ್ರಶಸ್ತಿಗೆ ಸಂಚಾರಿ ವಿಜಯ್ ಅವರು ನಟಿಸಿದ ಕೊನೆಯ ಸಿನಿಮಾ ಆಗಿರುವ ತಲೆದಂಡ ಸಿನಿಮಾಗೆ ಅತ್ಯುತ್ತಮ ಪರಿಸರ ಕಾಳಜಿ ಹೊಂದಿರುವ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ತಲೆದಂಡ ಚಿತ್ರಕ್ಕೆ ಪರ್ವೀನ್ ಕೃಪಾಕರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಹರಿಕಾವ್ಯ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅವರು ಕುನ್ನೇಗೌಡ ಎಂಬ ಪಾತ್ರದಲ್ಲಿ ನಟಿಸಿದ್ದರು.

ಕುನ್ನೇಗೌಡ ಬುಡಕಟ್ಟು ಸಮುದಾಯದವನಾಗಿದ್ದು, ಪರಿಸರದ ಮೇಲೆ ಅಪಾರ ಪ್ರೀತಿ ಇರುತ್ತದೆ. ಕಾಡು ಗಿಡ ಮರಗಳನ್ನ ಮಗುವಂತೆ ಪೋಷಣೆ ಮಾಡಿ ಪ್ರೀತಿಸುವ ಕುನ್ನೇಗೌಡ ಊರಿನ ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನ ಕಡಿಯುವುದಕ್ಕೆ ಸರ್ಕಾರಿ ಅಧಿಕಾರಿಗಳು ಮುಂದಾದಾಗ ಅವರ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗುತ್ತಾನೆ. ತದ ನಂತರ ಕುನ್ನೇಗೌಡ ಮಾನಸಿಕ ಅಸ್ವಸ್ತ, ಆತನಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದು ನ್ಯಾಯಾಲಯ ಕುನ್ನೇಗೌಡನಿಗೆ ಬಿಡುಗಡೆ ಮಾಡುವಂತೆ ಆದೇಶ ನೀಡುತ್ತದೆ. ತದ ನಂತರ ಊರಿಗೆ ಬಂದ ಕುನ್ನೇಗೌಡ ತದ ನಂತರ ಪರಿಸರ ಸಂರಕ್ಷಣೆಗಾಗಿ ಏನೆಲ್ಲಾ ಮಾಡುತ್ತಾನೆ ಎಂಬುದೇ ಕಥೆಯ ಜೀವಾಳವಾಗಿರುತ್ತದೆ. ಮಾನಸಿಕ ಅಸ್ವಸ್ತನಾಗಿ ಸಂಚಾರಿ ವಿಜಯ್ ಅವರು ಅದ್ಭುತವಾಗಿ ಅಭಿನಯಿಸಿದ್ದರು. ಅವರ ನಟನೆಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಬಾರಿಯು ಕೂಡ ಇವರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಹುಸಿಯಾದರು ಕೂಡ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಪ್ರಶಸ್ತಿ ಲಭಿಸಿದೆ. ವಿಶೇಷ ಅಂದರೆ ಸಂಚಾರಿ ವಿಜಯ್ ಅವರು ನಟಿಸಿದ ಬಹುತೇಕ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅದು ಮಂಸೂರೆ ನಿರ್ದೇಶನದ ಅವರ ಹರಿವು, ನಾತಿಚರಾಮಿ, ಲಿಂಗದೇವರು ಅವರ ನಿರ್ದೇಶನದ ನಾನು ಅವನಲ್ಲಾ ಅವಳು, ಈಗ ತಲೆದಂಡ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಚಿತ್ರ ಎಂಬ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ದುರಾದೃಷ್ಟವಶಾತ್ ಅಂದರೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಚಿತ್ರದ ನಾಯಕನೇ ನಮ್ಮ ಜೊತೆ ಇಲ್ಲದಿರುವುದು. ತಲೆದಂಡ ಸಿನಿಮಾತಂಡ ಒಂದೆಡೆ ರಾಷ್ಟ್ರ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸಂಭ್ರಮದ ಜೊತೆಗೆ ವಿಜಯ್ ಅವರ ಅನುಪಸ್ಥಿತಿ ಅವರ ತಂಡಕ್ಕೆ ಬೇಸರವನ್ನೂ ಕೂಡ ತರಿಸಿದೆ.

Leave a Reply

%d bloggers like this: