ಅದೃಷ್ಟಕ್ಕಾಗಿ ಪಕ್ಷದ ಕೈ ಚಿಹ್ನೆಯನ್ನೇ ಬದಲಿಸಿದರೆ ಡಿಕೆಶಿ ? ಇದರ ಹಿಂದಿರುವ ನಂಬಿಕೆ ಏನು ಗೊತ್ತಾ

ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತ ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ 2023ರ ರಾಜ್ಯ ಚುನಾವಣೆಗೆ ಮತ್ತಷ್ಟು ಶಕ್ತಿ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷದ ಚಿಹ್ನೆಗೆ ಈ ಹಿಂದೆ ಇದ್ದ ಮೂರು ಗೆರೆಗಳ ಬದಲಾಗಿ ನಾಲ್ಕನೇ ಗೆರೆಯನ್ನು ಸೇರಿಸಿದ್ದಾರೆ. ಸದ್ಯ ಡಿಕೆಶಿ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಈ ಚಿನ್ಹೆ ಬಳಕೆಯಾಗುತ್ತಿದೆ. ಸಿದ್ದರಾಮಯ್ಯ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಹಳೆಯ ಹಸ್ತದ ಗುರುತನ್ನೇ ಬಳಸಲಾಗುತ್ತಿದೆ. ಕಾಂಗ್ರೆಸ್ಗೆ 1980 ರಲ್ಲಿ ಹಸ್ತದ ಗುರುತು ಚಿಹ್ನೆಯಾಗಿ ನಿಗದಿ ಆಗಿತ್ತು.ಈ ಹಿಂದಿನ ಹಸ್ತದಲ್ಲಿ ಒಟ್ಟು ಮೂರು ಗೆರೆಗಳು ಇದ್ದವು,ಈಗ ಡಿಕೆಶಿ ಬದಲಾವಣೆ ಮಾಡಿರುವ ಹಸ್ತದಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ.

ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ಭಾಗಕ್ಕೆ ತಲುಪುತ್ತದೆ.ಖ್ಯಾತ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹಸ್ತದಲ್ಲಿ ರೇಖೆ ಬದಲಾವಣೆ ಮಾಡಿಲಾಗಿದೆ ಎಂದು ತಿಳಿದುಬಂದಿದೆ.ಹಸ್ತಕ್ಕೆ ನಾಲ್ಕನೆ ಗೆರೆಯು ಅದೃಷ್ಟ ಮತ್ತು ಲಕ್ಷ್ಮೀ ,ಲಕ್ಕಿ ಎಂಬುದನ್ನು ಸೂಚನೆ ನೀಡಲಿದೆ.  ತಮ್ಮ ರಾಜಕೀಯ ಒಳಿತಿಗಾಗಿ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಈ ರೀತಿ ಬದಲಾವಣೆ ಮಾಡಿಸಿದ್ದರಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ಡಿಕೆ ಶಿವಕುಮಾರ್ ಏನು ಹೇಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಕರ್ನಾಟಕ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: