ಅದಿತಿ ಪ್ರಭುದೇವ ಮತ್ತು ಡಾಲಿ ಮದುವೆಯಾಗುತ್ತಿತಂತೆ ! ಆದರೆ ಇದನ್ನು ತಪ್ಪಿಸಿದವರು ಯಾರು ಗೊತ್ತಾ? ನೋಡಿ ಒಮ್ಮೆ

ನಟಿ ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ್ ಅವರ ಮದುವೆಯ ವಿಷಯವನ್ನ ನಟ ಜಗ್ಗೇಶ್ ಅವರು ಈಗ ಹೇಳಿದ್ದು ಅವರ ಮದುವೆ ಯಾಕೆ ಆಗಲಿಲ್ಲ ಮತ್ತು ಅದಕ್ಕೆ ಕಾರಣ ಯಾರು ಅನ್ನುವುದರ ಬಗ್ಗೆ ಕೂಡ ಹೇಳಿದ್ದಾರೆ.ಅಂದುಕೊಂಡಂತೆ ಆಗಿದ್ದರೆ ನಟ ಧನಂಜಯ್ ಮತ್ತು ನಟಿ ಅದಿತಿ ಪ್ರಭುದೇವ ರಿಯಲ್ ಲೈಫ್ ನಲ್ಲಿ ಮದುವೆ ಆಗಬೇಕಿತ್ತು. ಅದಕ್ಕಾಗಿ ಪೂರ್ವ ತಯಾರಿ ಕೂಡ ನಡೆದಿತ್ತು. ಇಬ್ಬರನ್ನೂ ಒಂದು ಮಾಡುವುದಕ್ಕಾಗಿ ನಟ ಜಗ್ಗೇಶ್ ಕೂಡ ಪ್ರಯತ್ನಪಟ್ಟರು. ಅದು ಸಾಧ್ಯವಾಗಲಿಲ್ಲ. ಯಾಕೆಂದರೆ, ಡಾಲಿಯನ್ನು ಅವರು ಒಪ್ಪಲಿಲ್ಲವಂತೆ. ಇಂಥದ್ದೊಂದು ಇಂಟ್ರಸ್ಟಿಂಗ್ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ.

ಈ ಮದುವೆ ವಿಚಾರ ಗಾಸಿಪ್ ಅಲ್ಲ. ಸ್ವತಃ ಈ ವಿಷಯವನ್ನು ಹೇಳಿದವರು ಜಗ್ಗೇಶ್. ಜಗ್ಗೇಶ್ ಮತ್ತು ಅದಿತಿ ಪ್ರಭುದೇವ್ ತೋತಾಪುರಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಚಿತ್ರದಲ್ಲೇ ಡಾಲಿ ಧನಂಜಯ್ ಕೂಡ ವಿಶೇಷ ಪಾತ್ರವನ್ನು ಮಾಡಿದ್ದಾರೆ. ಹಾಗಾಗಿ ಅದಿತಿ ಮತ್ತು ಡಾಲಿ ಅನೇಕ ದಿನಗಳ ಕಾಲ ಶೂಟಿಂಗ್ ನಲ್ಲಿ ಸಿಗುತ್ತಿದ್ದರು. ಈ ವೇಳೆಯಲ್ಲೇ ಜಗ್ಗೇಶ್ ಇಬ್ಬರನ್ನೂ ಒಪ್ಪಿಸಿ ಮದುವೆ ಮಾಡಲು ಟ್ರೈ ಮಾಡಿದ್ದಾರೆ.

ತೋತಾಪುರಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಜಗ್ಗೇಶ್ ‘ಡಾಲಿ ಧನಂಜಯ್ ಮತ್ತು ಅದಿತಿಯನ್ನು ಮದುವೆ ಮಾಡಿಸಲು ನಾನು ಪ್ರಯತ್ನ ಪಟ್ಟೆ. ಆದರೆ, ಅದು ಸಾಧ್ಯವಾಗಲಿಲ್ಲ’ ಅಂದರು. ಅದಿತಿ ತಾಯಿ ಒಪ್ಪದೇ ಇರುವ ಕಾರಣಕ್ಕಾಗಿ ಇಬ್ಬರೂ ಮದುವೆ ಆಗಲಿಲ್ಲ ಎನ್ನುವ ಮಾತೂ ಅದೇ ವೇದಿಕೆಯ ಮೇಲೆ ಕೇಳಿ ಬಂತು. ಈ ನಮ್ಮ ಲೇಖನ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: