ಅಡತಡೆಗಳ ನಡುವೆಯೂ ಬಾಲಿವುಡ್ ಚಿತ್ರರಂಗದಲ್ಲಿ ದಾಖಲೆ ಗಳಿಕೆ ಮಾಡಿದ ಬ್ರಹ್ಮಾಸ್ತ್ರ ಚಿತ್ರ

ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಬಾಲಿವುಡ್ ರಂಗಕ್ಕೆ ಗೆಲುವಿನ ಸಿಹಿ ತಿನ್ನಿಸಿದ ಅಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಮುಖ್ಯ ಭೂಮಿಕೆಯ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಮಾಡಿದ ಕಲೆಕ್ಷನ್ ವಿಚಾರವಾಗಿ ಇದೀಗ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾದ ಗೆಲುವು ಹಿಂದಿ ಚಿತ್ರರಂಗಕ್ಕೆ ಮರುಭೂಮಿಯಲ್ಲಿ ನೀರು ಸಿಕ್ಕಿದಂತೆ ಎಂದು ಹೇಳಬಹುದು. ಯಾಕಂದ್ರೆ ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್ ನಟರ ಸಿನಿಮಾಗಳೇ ಸೋತು ಸುಣ್ಣವಾಗಿತ್ತು. ಹಾಗಾಗಿ ಈ ಬ್ರಹ್ಮಾಸ್ತ್ರ ಸಿನಿಮಾ ಗೆಲ್ಲಲೇಬೇಕು ಎಂದು ಇಡೀ ಬಾಲಿವುಡ್ ರಂಗ ಪ್ರಾರ್ಥನೆ ಮಾಡಿತ್ತು ಅಂದರೆ ತಪ್ಪಾಗಲಾರದು. ಅದರಂತೆ ಈ ಬ್ರಹ್ಮಾಸ್ತ್ರ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಈ ಬ್ರಹ್ಮಾಸ್ತ್ರ ಸಿನಿಮಾವನ್ನ ಬಾಯ್ಕಟ್ ಮಾಡ್ಬೇಕು ಅಂತ ಕೆಲವೆಡೆ ಅಭಿಪ್ರಾಯ ಕೇಳಿ ಬಂದಿತ್ತು.

ಅದಷ್ಟೇ ಅಲ್ಲದೆ ಸಿನಿ ಪ್ರೇಕ್ಷಕರಿಂದ ಕೂಡ ಸಿನಿಮಾದ ಬಗ್ಗೆ ನಿರೀಕ್ಷೆ ಮಟ್ಟದ ಪ್ರತಿಕ್ರಿಯೆ ಕೇಳಿ ಬರಲ್ಲಿಲ್ಲ. ಸಿನಿಮಾದ ಬಗ್ಗೆ ಸಾಧಾರಣ ಪ್ರತಿಕ್ರಿಯೆ ಕೇಳಿ ಬಂದರೂ ಕೂಡ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹಿಂದೆ ಬೀಳಲಿಲ್ಲ ಬ್ರಹ್ಮಾಸ್ತ್ರ ಸಿನಿಮಾ. ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಇದೇ ಮೊದಲ ಬಾರಿಗೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದು ಬ್ರಹ್ಮಾಸ್ತ್ರ ಸಿನಿಮಾದ ಮುಖಾಂತರ. ಹಾಗಾಗಿ ಈ ಇಬ್ಬರನ್ನ ಒಟ್ಟಿಗೆ ನೋಡಲು ಸಿನಿ ಪ್ರಿಯರು ಕೂಡ ಕಾತುರದಲ್ಲಿದ್ದರು. ಅದರಂತೆ ಬ್ರಹ್ಮಾಸ್ತ್ರ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವರ್ಲ್ಡ್ ವೈಡ್ ಅದ್ದೂರಿಯಾಗಿ ರಿಲೀಸ್ ಅಗಿ ಭರ್ಜರಿ ಪ್ರದರ್ಶನ ಕಂಡಿತು. ಬ್ರಹ್ಮಾಸ್ತ್ರ ಸಿನಿಮಾಗೆ ಬಾಯ್ಕಟ್ ಹೊಡೆತ ನೀಡ್ಬೋದು ಅಂತ ಊಹೆ ಇತ್ತು. ಆದರೆ ಎಲ್ಲರ ಊಹೆಯನ್ನ ಹುಸಿಗೊಳಿಸಿ ಬ್ರಹ್ಮಾಸ್ತ್ರ ಸಿನಿಮಾ ಮೊದಲನೇ ದಿನವೇ ಬರೋಬ್ಬರಿ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಎರಡನೇ ದಿನ 160 ಕೋಟಿ ಹೀಗೆ ಉತ್ತಮ ಗಳಿಕೆ ಹೀಗೆ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆದ ಹದಿನೈದು ದಿನದಲ್ಲೇ ಬರೋಬ್ಬರಿ ನಾಲ್ಕು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಬಾಲಿವುಡ್ ನ ಯಾವ ಸಿನಿಮಾಗಳು ಕೂಡ ಇಷ್ಟೊಂದು ಕಲೆಕ್ಷನ್ ಮಾಡಿರಲಿಲ್ಲ. ಸತತ ಸೊಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್ ರಂಗಕ್ಕೆ ಅಯನ್ ಮುಖರ್ಜಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬ್ರಹ್ಮಾಸ್ತ್ರ ಸಿನಿಮಾ ಎನರ್ಜಿ ಬೂಸ್ಟ್ ನೀಡಿದೆ ಅಂತೇಳ್ಬೋದು. ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿದ್ದರು. ಇದರಲ್ಲಿ ಪಾಲುದಾರರಾಗಿ ಕರಣ್ ಜೋಹರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ಜೊತೆಗೆ ನಾಯಕ ನಟ ರಣ್ ಬೀರ್ ಕಪೂರ್ ಕೂಡ ತೊಡಗಿಸಿಕೊಂಡಿದ್ದರು. ಒಟ್ಟಾರೆಯಾಗಿ ಆಲಿಯಾ ಭಟ್ ಅವರ ಸಕ್ಸಸ್ ಲಿಸ್ಟ್ ಗೆ ಬ್ರಹ್ಮಾಸ್ತ್ರ ಸಿನಿಮಾ ಕೂಡ ಸೇರಿಕೊಂಡು ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದೆ.

Leave a Reply

%d bloggers like this: