ಅಡೆತಡೆಗಳ ನಡುವೆಯೂ ಭಾರಿ ಮೊತ್ತದ ಹಣ ಗಳಿಕೆ ಮಾಡಿದ ಬ್ರಹ್ಮಾಸ್ತ್ರ ಚಿತ್ರ

ಬಾಲಿವುಡ್ ಸಿನಿಮಾ ರಂಗಕ್ಕೆ ಮತ್ತೆ ಒಂದು ಗತ್ತು ತಂದುಕೊಟ್ಟಿರೋ ಸಿನಿಮಾ ಅಂದರೆ ಅದು ಬ್ರಹ್ಮಾಸ್ತ್ರ. ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರ ಇದೇ ಸೆಪ್ಟೆಂಬರ್ 9ರಂದು ವರ್ಲ್ಡ್ ವೈಡ್ ರಿಲೀಸ್ ಅಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ಸಿನಿಮಾದ ಬಗ್ಗೆ ರಿಲೀಸ್ ಗೂ ಮುನ್ನ ಟ್ರೇಲರ್ ಕಂಡು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆದ ನಂತರ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾ ಗೆಲ್ಲಲಿ ಅನ್ನೋದು ಇಡೀ ಬಾಲಿವುಡ್ ರಂಗದ ಅಭಿಲಾಶೆ ಆಗಿತ್ತು. ಯಾಕಂದ್ರೆ ಬಾಲಿವುಡ್ ಬಿಗ್ ಸ್ಟಾರ್ ಗಳ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋತು ಹೋಗಿದ್ವು.

ಹಾಗಾಗಿ ಹಿಂದಿ ಚಿತ್ರರಂಗಕ್ಕೆ ಬ್ರಹ್ಮಾಸ್ತ್ರ ಚಿತ್ರದ ಗೆಲುವು ಅಗತ್ಯವಾಗಿತ್ತು. ಅದ್ರಂತೆ ಬ್ರಹ್ಮಾಸ್ತ್ರ ಸಿನಿಮಾ ಈಗ ಬಾಕ್ಸ್ ಅಫೀಸ್ ನಲ್ಲಿ ಸಖತ್ ರೂಲ್ ಮಾಡ್ತಿದೆ. ಬ್ರಹ್ಮಾಸ್ತ್ರ ಚಿತ್ರ ಮೊದಲನೇ ದಿನವೇ ಬರೋಬ್ಬರಿ 75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 160 ಕೋಟಿ ಹೀಗೆ ಉತ್ತಮ ಗಳಿಕೆ ಗಳಿಸುತ್ತಿದೆ. ಇಂದಿಗೆ ಹತ್ತುಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಸರಿ ಸುಮಾರು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ಇದು ಜಸ್ಟ್ ಥಿಯೇಟರಿಕಲ್ ಗಳಿಕೆ. ಇದರ ಜೊತೆಗೆ ಟಿವಿ, ಡಿಜಿಟಲ್, ಆಡಿಯೋ ರೈಟ್ಸ್ ಅನ್ನೋದು ಕೂಡ ಪ್ರತ್ಯೇಕವಾಗಿ ಒಂದಷ್ಟು ಕೋಟಿಯನ್ನ ಬಾಚಿದೆ. ಹಿಂದಿ, ಕನ್ನಡ ಸೇರಿದಂತೆ ಬ್ರಹ್ಮಾಸ್ತ್ರ ಸಿನಿಮಾ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿತ್ತು.

ಬರೋಬ್ಬರಿ 410 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಆದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿದೆ. ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕರಣ್ ಜೋಹರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ಜೊತೆಗೆ ನಾಯಕ ನಟ ರಣ್ ಬೀರ್ ಕಪೂರ್ ಕೂಡ ಬಂಡವಾಳ ಹೂಡಿಕೆ ಮಾಡಿದ್ದರು. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಲ್ಲಿ ಯಶಸ್ವಿ ನಟಿಯಾಗಿರೋ ಆಲಿಯಾ ಭಟ್ ಅವರ ಸಕ್ಸಸ್ ಲಿಸ್ಟ್ ಗೆ ಇದೀಗ ಬ್ರಹ್ಮಾಸ್ತ್ರ ಕೂಡ ಸೇರ್ಪಡೆಗೊಂಡಿದೆ.

Leave a Reply

%d bloggers like this: