ಅದ್ದೂರಿಯಾಗಿ ಶುರುವಾಗುತ್ತಿದೆ ವೀಕೆಂಡ್ ವಿಥ್ ರಮೇಶ್, ಯಾರೆಲ್ಲಾ ಬರುತ್ತಿದ್ದಾರೆ

Weekend With Ramesh ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಗ್ರ್ಯಾಂಡ್ ಆಗಿ ಪ್ರಸಾರವಾಗಲು ಸಜ್ಜಾಗಿದೆ. ತಮ್ಮ ಜೀವನದಲ್ಲಿ ಹಲವು ಕಷ್ಟ-ನಷ್ಟ, ಏಳು ಬೀಳು ಗಳನ್ನ ಕಂಡು ತಮ್ಮ ಅಚಲ ಆತ್ಮವಿಶ್ವಾಸ ಪರಿಶ್ರಮ ನಿರಂತರ ಪ್ರಯತ್ನದಿಂದ ಇಂದು ಯಶಸ್ಸು ಪಡೆದು ಸಮಾಜಕ್ಕೆ ಮಾದರಿ ಆಗಿರುವ ಸಾಧಕರನ್ನ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಈಗಾಗಲೇ ನಾಲ್ಕು ಸೀಸನ್ ಗಳನ್ನ ಯಶಸ್ವಿಯಾಗಿ ಪೂರೈಸಿರುವ ವೀಕೆಂಡ್ ವಿಥ್ ರಮೇಶ್ ರಿಯಾಲಿಟಿ ಶೋ ಈಗ ಐದನೇ ಸೀಸನ್ ನತ್ತ ದಾಪುಗಾಲು ಇಡುತ್ತಿದೆ.

ಇದೇ ಮಾರ್ಚ್ 25ರಿಂದ ಪ್ರಸಾರವಾಗುತ್ತಿರುವ ಈ ಸ್ಪೂರ್ತಿದಾಯಕ ಕಾರ್ಯಕ್ರಮದಲ್ಲಿ ಈ ಸೀಸನ್ ನ ಮೊದಲ ಸಾಧಕರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಬಹುತೇಕರು ಈ ಬಾರಿಯ ಐದನೇ ಸೀಸನ್ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಸಾಧಕರಾಗಿ ಕಾಂತಾರ ಸಿನಿಮಾದ ಮೂಲಕ ಜಗತ್ತಿನಾದ್ಯಂತ ಪ್ರಸಿದ್ದತೆ ಪಡೆದುಕೊಂಡಿರುವ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಣಿಸಿಕೊಳ್ಳಲಿದ್ದಾರೆ ಅಂತ ಭಾವಿಸಿದ್ದರು.

ಆದರೆ ಈ ಸುದ್ದಿಗೆ ಕಾರ್ಯಕ್ರಮದ ಮುಖ್ಯಸ್ಥರು ಆದ ರಾಘವೇಂದ್ರ ಹುಣಸೂರ್ ಅವರು ಈ ಸುದ್ದಿಗೆ ಟ್ವಿಸ್ಟ್ ನೀಡಿದ್ದಾರೆ. ವೀಕೆಂಡ್ ವಿಥ್ ರಮೇಶ್ ಐದನೇ ಸೀಸನ್ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಟಿ ಮಾಡಿದ ರಾಘವೇಂದ್ರ ಹುಣಹೂರ್ ಮತ್ತು ನಿರೂಪರಾಗಿ ಕಾರ್ಯಕ್ರಮ ನಡೆಸಿಕೊಡುವ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಮಾತನಾಡಿ ಈ ಸೀಸನ್ ನಲ್ಲಿ ಯಾರೆಲ್ಲಾ ಸಾಧಕರ ಸೀಟ್ ಏರಲಿದ್ದಾರೆ ಅನ್ನೋದರ ಮಾಹಿತಿಯನ್ನ ನೀಡಿದ್ದಾರೆ.

ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ರಾಘವೇಂದ್ರ ಹುಣಸೂರು ಆವರು ಇದೇ ಮಾರ್ಚ್ 25 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಸೀಸನ್5 ಆರಂಭವಾಗಲಿದ್ದು, ಸಾಧಕರ ಸೀಟ್ ನಲ್ಲಿ ಮೊದಲ ಸಾಧಕರಾಗಿ ಸ್ಯಾಂಡಲ್ ವುಡ್ ಎವರ್ಗೀನ್ ಬ್ಯೂಟಿ ಕ್ವೀನ್ ರಮ್ಯಾ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನ ನೀಡಿದ್ದಾರೆ. ಇದು ರಮ್ಯಾ ಅವರ ಅಭಿಮಾನಿಗಳಿಗೆ ಸಖತ್ ಎಕ್ಸೈಟ್ ಆಗಿ ಸಂತೋಷವನ್ನುಂಟು ಮಾಡಿರುವ ಸುದ್ದಿಯಾಗಿದ್ದು, ಅವರ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ.

Weekend With Ramesh ಅದರಂತೆ ಈ ಸೀಸನ್ 5 ನಲ್ಲಿ ಸಾಧಕರ ಸೀಟ್ ನಲ್ಲಿ ಆಕ್ಷನ್ ಪ್ರಿನ್ಸ್ ಧೃವಸರ್ಜಾ, ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಖ್ಯಾತಿ ಪಡೆದಿರುವ ನಟ ಕಮ್ ನಿರ್ದೇಶಕ ಪ್ರಭುದೇವ, ಡಿಂಪಲ್ ಕ್ವೀನ್ ರಚಿತಾ ರಾಮ್, ಕನಸಿನ ರಾಣಿ ಮಾಲಾಶ್ರೀ ಸೇರಿದಂತೆ ಖ್ಯಾತ ಹೃದ್ರೋಗ ತಜ್ಞರಾದ ಡಾ.ಮಂಜುನಾಥ್, ಇಶಾ ಫೌಂಡೇಶನ್ ಜಗ್ಗಿ ವಾಸುದೇವ್ ಅವರು ಈ ವೀಕೆಂಡ್ ವಿಥ್ ರಮೇಶ್ ಸೀಸನ್ 5ರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ರಮ್ಯಾ ಅವರ ಚಿತ್ರೀಕರಣ ಇದೇ ಮಾರ್ಚ್ 21 ರಿಂದ ಅಂದರೆ ಇಂದಿನಿಂದ ನಡೆಯಲಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: