ಅದ್ಭುತ ಯಶಸ್ಸು ಕಂಡ ಕಾಂತಾರ ಚಿತ್ರವನ್ನು ಈ ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದ ರಿಶಬ್ ಶೆಟ್ಟಿ ಅವರು

ಇತ್ತೀಚೆಗೆ ತಾನೇ ರಿಲೀಸ್ ಆದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ. ಬಿಡುಗಡೆಯಾದ ಮೂರೇ ದಿನದಲ್ಲಿ ಕಾಂತಾರ ಸಿನಿಮಾ ಬರೋಬ್ಬರಿ ಇಪ್ಪತ್ತೈದು ಕೋಟಿಗೂ ಅಧಿಕ ಗಳಿಕೆ ಮಾಡಿ ಸೂಪರ್ ಹಿಟ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಕಾಂತಾರ ಸಿನಿಮಾ ನಮ್ಮ ಕರಾವಳಿ ಭಾಗದ ಸಂಸ್ಕೃತಿ ಮತ್ತು ಅಲ್ಲಿನ ಜನರು ನೆಲ ಮತ್ತು ಸಂಸ್ಕೃತಿ ನಡುವೆ ಇರೋ ಅವಿನಾಭಾವ ಸಂಬಂಧದ ಕಥಾವಸ್ತುವನ್ನ ನಿರ್ದೇಶಕ ರಿಷಬ್ ಶೆಟ್ಟಿ ಅವರು ಅಚ್ಚುಕಟ್ಟಾಗಿ ಅದ್ದೂರಿಯಾಗಿ ತೆರೆ ಮೇಲೆ ತಂದಿದ್ದಾರೆ. ರಿಷಬ್ ಶೆಟ್ಟಿ ಅವರ ಕಲ್ಪನೆಗೆ ಸಿನಿ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಸಿಕ್ಕ ಅಭೂತಪೂರ್ವ ಯಶಸ್ಸಿಗೆ ಖುಷಿಯಾದ ಚಿತ್ರತಂಡ ಸಕ್ಸಸ್ ಮೀಟ್ ಕೂಡ ಕರೆದಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಈ ಕಾಂತಾರ ಸಿನಿಮಾ ಒಂದೂವರೆ ವರ್ಷದ ಶ್ರಮದ ಫಲ. ಈ ಸಿನಿಮಾಗೆ ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಗಮನಾರ್ಹವಾಗಿ ರಿಷಬ್ ಶೆಟ್ಟಿ ಈ ಕಾಂತಾರ ಸಿನಿಮಾದ ಕಥೆ ಹುಟ್ಟಿದಾಗ ನನ್ನ ಹೆಂಡತಿ ಪ್ರಗತಿ ಶೆಟ್ಟಿ ಗರ್ಭಿಣಿ ಆಗಿದ್ದಳು. ಇದೀಗ ಆಕೆಗೆ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಚೆನ್ನಾಗಿದೆ. ಇದೀಗ ನನ್ನ ಕಾಂತಾರ ಮಗು ಕೂಡ ಶುಕ್ರವಾರ ಡೆಲಿವರಿ ಆಗಿದೆ. ಅದೂ ಕೂಡ ಚೆನ್ನಾಗಿದೆ. ಮೊದಲ ಸಲ ಕಾಂತಾರ ಸಿನಿಮಾ ನೋಡಿದವರು ಈ ಕಥೆ ಕರಾವಳಿ ಭಾಗದ ಕಥೆ ಅವರಿಗೆ ಮಾತ್ರ ಸೀಮಿತ ಎಂದು ಭಾವಿಸಿದ್ದರು.

ಮಂಗಳೂರಿನ ಕೆರಾಡಿ ಊರಿನ ಕಥೆ ನಾಡಿನ ಎಲ್ಲಾ ಹಳ್ಳಿಗಳಲ್ಲಿಯೂ ಕೂಡ ನಡೆಯುವಂತದ್ದು ಇದು ಕೇವಲ ಮಂಗಳೂರು ಕರಾವಳಿ ಪ್ರೇಕ್ಷಕರಿಗೆ ಸೀಮೀತವಲ್ಲ. ಎಲ್ಲಾ ಭಾಗದ ಪ್ರೇಕ್ಷಕರು ಕೂಡ ಈ ಚಿತ್ರ ನೋಡಿದ್ದಾರೆ. ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಇನ್ನು ಅದರ ಜೊತೆಗೆ ಈ ಕಾಂತಾರ ಸಿನಿಮಾವನ್ನ ಅಪ್ಪು ಅವರಿಗೆ, ದೈವ ನರ್ತಕರು ಮತ್ತು ಅವರ ಕುಟುಂಬಗಳಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದರು. ಇನ್ನು ಕಾಂತಾರ ಸಿನಿಮಾಗೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದ್ದು, ರಾಜಕುಮಾರ, ಕೆಜಿಎಫ್, ಕೆಜಿಎಫ್2 ಸಿನಿಮಾದ ನಂತರ ಕಾಂತಾರ ಚಿತ್ರದ ಮೂಲಕವೂ ಕೂಡ ಭರ್ಜರಿ ಸಕ್ಸಸ್ ಕಂಡಿದ್ದಾರೆ.