ಅಭಿಮಾನಿಗಳ ಆಸೆಗೆ ತಣ್ಣೇರೆರಚಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ತಮ್ಮ ಅಭಿಮಾನಿಯ ಆಸೆಗೆ ತಣ್ಣೇರೆರಚಿದ ಸ್ಯಾಂಡಲ್ ವುಡ್ ಕ್ವೀನ್..! ದಶಕಗಳ ಕಾಲ ಕನ್ನಡ ಚಿತ್ರರಂಗವನ್ನ ಆಳಿದ ನಟಿ ಇನ್ನು ಕೂಡ ತಮ್ಮ ಚಾರ್ಮ್ ಅನ್ನು ಕಳೆದುಕೊಳ್ಳದೆ ಇಂದಿಗೂ ಕೂಡ ಅಭಿಮಾನಿಗಳ ಮನದಲ್ಲಿ ರಾರಾಜಿಸುತ್ತಿದ್ದಾರೆ. ಹೌದುಇತ್ತಿಚೆಗೆ ಸೊಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ಮೋಹಕತಾರೆ ರಮ್ಯ ತಮ್ಮ ದೈನಂದಿನ ಚಟುವಟಿಕೆಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದಷ್ಟು ಪೋಟೋ ಮತ್ತು ವಿಚಾರಗಳನ್ನ ಹಂಚಿಕೊಳ್ಳುವ ಮೂಲಕ ಅಪ್ಡೇಟ್ ನೀಡುತ್ತಿರುತ್ತಾರೆ. ಈ ಹಿಂದೆ ಒಂದಷ್ಟು ವರ್ಷಗಳ ಕಾಲ ಸಿನಿಮಾ,ರಾಜಕೀಯ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದಕೊಂಡಿದ್ದ ನಟಿ ಇತ್ತೀಚಿನ ಕೆಲವು ತಿಂಗಳುಗಳಿಂದ ಸಾರ್ವಜನಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದಾರೆ.ನಟಿ ರಮ್ಯ ಪುನೀತ್ ರಾಜ್ ಕುಮಾರ್ ಅಭಿನಯದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.ತದ ನಂತರ ಅರಸು, ಆಕಾಶ್, ಗೌರಮ್ಮ,ಜೊತೆ ಜೊತೆಯಲಿ, ಸಂಜು ವೆಡ್ಸ್ ಗೀತಾ,ತನನಂ ತನನಂ ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಕಂಡ ರಮ್ಯ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನ ಆಳಿದರು.

ಅಪಾರ ಅಭಿಮಾನಿಗಳನ್ನ ಹೊಂದಿರುವ ರಮ್ಯ ತಮ್ಮ ಅಭಿಮಾನಿಗಳಿಂದ ಸ್ಯಾಂಡಲ್ ವುಡ್ ಕ್ವೀನ್,ಮೋಹಕ ತಾರೆ,ಎವರ್ಗೀನ್ ಚೆಲುವೆ ಎಂಬೆಲ್ಲಾ ಬಿರುದನ್ನ ಪಡೆದುಕೊಂಡಿದ್ದಾರೆ.ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಮ್ಯ ಮಂಡ್ಯ ಜಿಲ್ಲೆಯ ಸಂಸದೆಯಾಗಿಯೂ ಕೂಡ ಆಯ್ಕೆ ಆದರು.ಕಾಂಗ್ರೆಸ್ ಹೈ ಕಮಾಂಡ್ ಜೊತೆ ಉತ್ತಮ ಸಂಪರ್ಕ ಹೊಂದಿದ ನಂತರ ನಟಿ ರಮ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡರು.ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರ್ಗಿನಿರ್ವಾಹಿಸಿದರು.ಆದರೆ ಬಳಿಕ ಆದ್ದಕಿದ್ದಂತೆ ಸೋಶಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕವಾಗಿ ಕಣ್ಮರೆ ಆದರು.ಆ ಸಂಧರ್ಭದಲ್ಲಿ ನಟಿ ರಮ್ಯ ಆದ್ಯಾತ್ಮಿಕ ಚಿಂತನೆಗಳತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿತು.ಇನ್ನೊಂದೆಡೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಕೂಡ ಸುದ್ದಿಯಾಯಿತು. ಆದರೆ ಈ ಯಾವುದೇ ಸುದ್ದಿಯ ಬಗ್ಗೆ ನಟಿ ರಮ್ಯ ಸ್ಪಷ್ಟನೆಯನ್ನು ಕೂಡ ನೀಡಿಲಿಲ್ಲ.

ಆದರೆ ಕೆಲವು ತಿಂಗಳದಿಂದೀಚೆಗೆ ಮತ್ತೆ ರಮ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಬಿಝಿ಼ ಆದರು.ಇತ್ತೀಚೆಗಷ್ಟೆ ನಟ ನೀನಾಸಂ ಸತೀಶ್ ಅಭಿನಯದ ಮೊಟ್ಟ ಮೊದಲ ತಮಿಳು ಸಿನಿಮಾ ತಗೈವುನುಕು ಅರುಲ್ವಾಯ್ ಚಿತ್ರದಲ್ಲಿನ ಸತೀಶ್ ಪಾತ್ರದ ಪೋಸ್ಟರ್ ಲಾಂಚ್ ಮಾಡಿದ್ದರು.ಇದಕ್ಕೆ ನಟ ನೀನಾಸಂ ಸತೀಶ್ ಸಂತಸಪಟ್ಟು ಧನ್ಯವಾದ ಕೂಡ ತಿಳಿಸಿದ್ದರು.ಇದರಿಂದ ನಟಿ ರಮ್ಯ ಮತ್ತೆ ಸಿನಿಮಾ ರಂಗಕ್ಕೆ ಬರಲಿದ್ದಾರೆ ಎಂಬ ಅಭಿಲಾಷೆ ಅಭಿಮಾನಿಗಳದಾಗಿತ್ತು. ಆದರೆ ಅಭಿಮಾನಿಯೊಬ್ಬರು ನೀವು ಸಿನಿಮಾಗಳಲ್ಲಿ ಏಕೆ ನಟಿಸುತ್ತಿಲ್ಲ ಎಂದು ಪ್ರಶ್ನೆ ಹಾಕಿದ್ದರು.ಇದಕ್ಕೆ ನಟಿ ರಮ್ಯ ದಯವಿಟ್ಟು ಕ್ಷಮಿಸಿ ನಿಮ್ಮ ಪ್ರಶ್ನೆಗೆ ನಾನು ನಿರಾಸೆಯ ಉತ್ತರ ನೀಡುತ್ತಿದ್ದೇನೆ.ನನಗೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇಲ್ಲ.ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ.ನಟಿ ರಮ್ಯ ಸಿನಿಮಾ ಎಂಬುದು ನನಗೆ ಈಗ ಮುಳುಗಿದ ಹಡಗು ಎಂದು ಪ್ರತಿಕ್ರಿಯಿಸಿದ್ದಾರೆ.ಇದಕ್ಕೆ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.