ಅಬ್ಬಾ ಶಾರುಖ್ ಖಾನ್ ಅವರ ಹೊಸ ಚಿತ್ರದಲ್ಲಿ ನಟಿಸಲು ಭಾರಿ ಮೊತ್ತದ ಸಂಭಾವನೆ ಪಡೆದ ದಕ್ಷಿಣ ಭಾರತದ ಖ್ಯಾತ ನಟ

ಬಾಲಿವುಡ್ ಕಿಂಗ್ ಖಾನ್ ಸಿನಿಮಾದಲ್ಲಿ ನಟಿಸಲು ತಮಿಳಿನ ಖ್ಯಾತ ನಟರಾದ ವಿಜಯ್ ಸೇತುಪತಿ ಅವರು ಅಧಿಕ ಸಂಭಾವನೆ ಪಡೆದು ಇದೀಗ ಭಾರತೀಯ ಚಿತ್ರರಂಗದಲ್ಲಿ ಸುದ್ದಿಯಾಗಿದ್ದಾರೆ. ಹಿಂದಿ ಚಿತ್ರರಂಗದ ಕಿಂಗ್ ಖಾನ್ ಎಂದೇ ಹೆಸರಾಗಿರುವ ಶಾರುಖ್ ಖಾನ್ ಅವರ ಚಿತ್ರಗಳಲ್ಲಿ ನಟಿಸಲು ಅನೇಕ ನಟ ನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. ಅವರ ಸಿನಿಮಾದಲ್ಲಿ ಪುಟ್ಟದೊಂದು ಪಾತ್ರವಾದರು ಸರಿ ಶಾರುಖ್ ಖಾನ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ ಸಾಕು ಅನ್ನುವವರು ಕೂಡ ಇದ್ದಾರೆ. ಹೀಗಿರೋವಾಗ ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಸೇತುಪತಿ ಅವರಿಗೆ ಶಾರುಖ್ ಖಾನ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ಹೌದು ಶಾರುಖ್ ಖಾನ್ ಅವರಿಗೆ ತಮಿಳಿನ ಖ್ಯಾತ ಯುವ ನಿರ್ದೇಶಕ ಅಟ್ಲೀ ಕುಮಾರ್ ಅವರು ಜವಾನ್ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಜವಾನ್ ಸಿನಿಮಾ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ.

ಚಿತ್ರದ ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ನಯನಾತಾರಾ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಹುತೇಕ ಕಲಾವಿದರು ತಮಿಳಿನವರಾಗಿದ್ದು, ವಿಜಯ್ ಸೇತುಪತಿ ಅವರು ಶಾರುಖ್ ಖಾನ್ ಎದುರು ಖಳ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಲು ವಿಜಯ್ ಸೇತುಪತಿ ಅವರು ಬರೋಬ್ಬರಿ 21 ಇಪ್ಪತ್ತ್ತೊಂದು ಕೋಟಿ ಸಂಭಾವನೆ ಪಡೆದಿದ್ದಾರಂತೆ. ಈ ವಿಚಾರ ಇದೀಗ ಸೌತ್ ಸಿನಿ ರಂಗದಲ್ಲಿ ಭಾರಿ ಸುದ್ದಿಯಾಗಿದೆ. ಈ ಹಿಂದೆ ವಿಜಯ್ ಸೇತುಪತಿ ಅವರು ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರದಲ್ಲಿ ವಿಲನ್ ಆಗಿ ನಟಿಸೋದಕ್ಕೆ 15 ರಿಂದ 17 ಕೋಟಿ ವರೆಗೆ ಸಂಭಾವನೆ ಪಡೆದಿದ್ದರಂತೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದ ಈ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಅದರ ಜೊತೆಗೆ ವಿಜಯ್ ಸೇತುಪತಿ ಅವರಿಗೂ ಕೂಡ ಒಂದೊಳ್ಳೆ ಕ್ರೇಜ಼್ ಸೃಷ್ಟಿಯಾಯಿತು. ಸದ್ಯಕ್ಕೆ ಜವಾನ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಭಾರಿ ಮೊತ್ತದ ಸಂಭಾವನೆ ಪಡೆಯುವ ಮೂಲಕ ಖಳ ನಟರಾಗಿ ನಟಿಸುತ್ತಿದ್ದಾರೆ‌. ಇವರ ಜೊತೆಗೆ ಜವಾನ್ ಚಿತ್ರದಲ್ಲಿ ತಮಿಳಿನ ಖ್ಯಾತ ಹಾಸ್ಯ ನಟ ಯೋಗಿಬಾಬು ಕೂಡ ನಟಿಸುತ್ತಿದ್ದಾರೆ.

Leave a Reply

%d bloggers like this: